
ದಿವಂಗತ ಅಜಿತ್ ಪವಾರ್ ಹಾಗೂ ಮಹಿಳಾ ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್.
ಅಜಿತ್ ಪವಾರ್ ವಿಮಾನದ ಪೈಲಟ್‌ಗಳು ಇವರು; ದುರಂತದಲ್ಲಿ ಮಡಿದ ಶಾಂಭವಿ. ಸುಮಿತ್ ಕಪೂರ್ ವಿವರ ಇಲ್ಲಿದೆ
ವಿಮಾನವನ್ನು ನಿರ್ವಹಿಸುತ್ತಿದ್ದ ವಿಎಸ್‌ಆರ್ ಏವಿಯೇಷನ್ (VSR Aviation) ಸಂಸ್ಥೆಯು ಇವರಿಬ್ಬರ ಗುರುತನ್ನು ಖಚಿತಪಡಿಸಿದೆ. ಲಿಯರ್‌ಜೆಟ್ 45 (Learjet 45) ವಿಮಾನದ ಕಾಕ್‌ಪಿಟ್‌ನಲ್ಲಿ ಇವರಿಬ್ಬರೂ ಕಾರ್ಯನಿರ್ವಹಿಸುತ್ತಿದ್ದರು.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿದ್ದ ವಿಮಾನ ದುರಂತದಲ್ಲಿ ಅವರೊಂದಿಗೆ ಇಬ್ಬರು ಪೈಲಟ್‌ಗಳು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಒಬ್ಬರು ಅನುಭವಿ ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್ ಆದರೆ, ಮತ್ತೊಬ್ಬರು ಭರವಸೆಯ ಯುವ ಮಹಿಳಾ ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್.
ವಿಮಾನವನ್ನು ನಿರ್ವಹಿಸುತ್ತಿದ್ದ ವಿಎಸ್‌ಆರ್ ಏವಿಯೇಷನ್ (VSR Aviation) ಸಂಸ್ಥೆಯು ಇವರಿಬ್ಬರ ಗುರುತನ್ನು ಖಚಿತಪಡಿಸಿದೆ. ಲಿಯರ್‌ಜೆಟ್ 45 (Learjet 45) ವಿಮಾನದ ಕಾಕ್‌ಪಿಟ್‌ನಲ್ಲಿ ಇವರಿಬ್ಬರೂ ಕಾರ್ಯನಿರ್ವಹಿಸುತ್ತಿದ್ದರು.
ಕ್ಯಾಪ್ಟನ್ ಶಾಂಭವಿ ಪಾಠಕ್: ಸೇನಾ ಕುಟುಂಬದ ಕುಡಿ
ಕ್ಯಾಪ್ಟನ್ ಶಾಂಭವಿ ಪಾಠಕ್ ಅವರು ಸೇನಾ ಅಧಿಕಾರಿಯೊಬ್ಬರ ಮಗಳು. ದೆಹಲಿಯ ಏರ್ ಫೋರ್ಸ್ ಬಾಲ ಭಾರತಿ ಶಾಲೆಯಲ್ಲಿ ಓದಿದ್ದ ಅವರು, ಮುಂಬೈ ವಿಶ್ವವಿದ್ಯಾಲಯದಿಂದ ಏರೋನಾಟಿಕ್ಸ್ ಮತ್ತು ಏವಿಯೇಷನ್ ಸೈನ್ಸ್‌ನಲ್ಲಿ ಬಿಎಸ್ಸಿ (BSc) ಪದವಿ ಪಡೆದಿದ್ದರು. ನ್ಯೂಜಿಲೆಂಡ್‌ನ ಇಂಟರ್‌ನ್ಯಾಶನಲ್ ಕಮರ್ಷಿಯಲ್ ಪೈಲಟ್ ಅಕಾಡೆಮಿಯಲ್ಲಿ ಪೈಲಟ್ ತರಬೇತಿ ಪಡೆದಿದ್ದರು. ವಿಎಸ್‌ಆರ್ ಏವಿಯೇಷನ್‌ನಲ್ಲಿ ಅವರು 'ಪೈಲಟ್ ಇನ್ ಕಮಾಂಡ್' ಆಗಿ ಕಾರ್ಯನಿರ್ವಹಿಸುತ್ತಿದ್ದರು. ದೆಹಲಿ ಮೂಲದವರಾದ ಶಾಂಭವಿ ಅವರು ಸುಮಾರು 1,500 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು. ವಿಎಸ್‌ಆರ್ ಸಂಸ್ಥೆಯ ಅಧಿಕಾರಿಯೊಬ್ಬರು ಅವರನ್ನು "ನನ್ನ ಮಗುವಿನಂತೆ" ಎಂದು ಬಣ್ಣಿಸಿದ್ದು, ಅವರು ಅತ್ಯುತ್ತಮ ಪೈಲಟ್ ಆಗಿದ್ದರು ಎಂದು ಸ್ಮರಿಸಿದ್ದಾರೆ.
ಕ್ಯಾಪ್ಟನ್ ಸುಮಿತ್ ಕಪೂರ್: 16,000 ಗಂಟೆಗಳ ಅನುಭವಿ
ಕ್ಯಾಪ್ಟನ್ ಸುಮಿತ್ ಕಪೂರ್ ಅವರು ಒಬ್ಬ ಹಿರಿಯ ಮತ್ತು ಅತ್ಯಂತ ಅನುಭವಿ ಪೈಲಟ್. ಅವರು ಬರೋಬ್ಬರಿ 16,000 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು. ದೆಹಲಿ ಮೂಲದವರೇ ಆದ ಸುಮಿತ್ ಅವರು ಈ ಹಿಂದೆ ಸಹಾರಾ, ಜೆಟ್‌ಲೈನ್ ಮತ್ತು ಜೆಟ್ ಏರ್ವೇಸ್‌ಗಳಲ್ಲಿ ಕೆಲಸ ಮಾಡಿದ್ದರು. ಅವರ ಮಗ ಕೂಡ ಇದೇ ಸಂಸ್ಥೆಯಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವಿಮಾನದಲ್ಲಿ ಅವರು 'ಪೈಲಟ್ ಇನ್ ಕಮಾಂಡ್' ಆಗಿದ್ದರು ಮತ್ತು ಟೇಕ್-ಆಫ್ ಹಾಗೂ ಲ್ಯಾಂಡಿಂಗ್‌ನಂತಹ ನಿರ್ಣಾಯಕ ಸಂದರ್ಭಗಳಲ್ಲಿ ವಿಮಾನವನ್ನು ಮುನ್ನಡೆಸುವ ಜವಾಬ್ದಾರಿ ಅವರದ್ದಾಗಿತ್ತು.
ವಿಮಾನದಲ್ಲಿ ದೋಷವಿರಲಿಲ್ಲ?
ವಿಮಾನಯಾನ ಸಂಸ್ಥೆಯ ಪ್ರಕಾರ, ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷವಿರಲಿಲ್ಲ. ಆದರೆ, ಪ್ರಾಥಮಿಕ ಮಾಹಿತಿಯ ಪ್ರಕಾರ ಹವಾಮಾನ ವೈಪರೀತ್ಯ ಮತ್ತು ಕಡಿಮೆ ಗೋಚರತೆ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಪೈಲಟ್‌ಗಳು ರನ್‌ವೇ ಕಾಣದಿದ್ದಾಗ ಇಳಿಯುವ ಪ್ರಯತ್ನವನ್ನು ಕೈಬಿಟ್ಟು, ಮತ್ತೊಮ್ಮೆ ಇಳಿಯಲು ಯತ್ನಿಸಿದಾಗ ಈ ದುರಂತ ಸಂಭವಿಸಿರಬಹುದು ಎಂದು ಹೇಳಲಾಗಿದೆ.

