ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ: ಏನೆಲ್ಲಾ ವಿಶೇಷತೆಗಳಿವೆ?
x
ದೇಶದ ಮೊಟ್ಟಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ: ಏನೆಲ್ಲಾ ವಿಶೇಷತೆಗಳಿವೆ?

ಪ್ರಧಾನಿ ನರೇಂದ್ರ ಮೋದಿ ಅವರು ಹೌರಾ ಮತ್ತು ಗುವಾಹಟಿ ನಡುವೆ ಸಂಚರಿಸುವ ಭಾರತದ ಮೊಟ್ಟಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ನೀಡಿದ್ದಾರೆ.


Click the Play button to hear this message in audio format

ಪಶ್ಚಿಮ ಬಂಗಾಳದ ಮಾಲ್ಡಾ ಟೌನ್ ರೈಲ್ವೇ ನಿಲ್ದಾಣದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊಟ್ಟಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ನೀಡಿದ್ದಾರೆ. ಈ ರೈಲು ಪಶ್ಚಿಮ ಬಂಗಾಳದ ಹೌರಾ ಮತ್ತು ಅಸ್ಸಾಂನ ಗುವಾಹಟಿ (ಕಾಮಾಖ್ಯ) ನಡುವೆ ಸಂಚರಿಸಲಿದ್ದು, ಈ ಎರಡು ರಾಜ್ಯಗಳ ನಡುವಿನ ದೂರವನ್ನು ಅತ್ಯಂತ ವೇಗವಾಗಿ ಕ್ರಮಿಸಲಿದೆ. ಚುನಾವಣಾ ಹೊಸ್ತಿಲಲ್ಲಿರುವ ಈ ರಾಜ್ಯಗಳಿಗೆ ಇದು ಕೇಂದ್ರ ಸರ್ಕಾರದ ದೊಡ್ಡ ಕೊಡುಗೆಯಾಗಿದೆ.

ಈ ರೈಲು ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ನಡುವೆ ಹೈಸ್ಪೀಡ್ ಸಂಪರ್ಕ ಕಲ್ಪಿಸಲಿದ್ದು, ಪ್ರಯಾಣದ ಸಮಯವನ್ನು ಸುಮಾರು 2.5 ಗಂಟೆಗಳಷ್ಟು ಕಡಿಮೆ ಮಾಡಲಿದೆ. ಈ ವೇಗದ ಸಂಪರ್ಕವು ಪ್ರವಾಸೋದ್ಯಮ ಮತ್ತು ಧಾರ್ಮಿಕ ಯಾತ್ರೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಿದೆ.

ರೈಲಿಗೆ ಚಾಲನೆ ಸಿಕ್ಕ ವಿಡಿಯೊ

ಪ್ರಮುಖ ತಾಂತ್ರಿಕ ವೈಶಿಷ್ಟ್ಯಗಳು

ವೇಗ: ಈ ರೈಲು ಗಂಟೆಗೆ 180 ಕಿ.ಮೀ ಗರಿಷ್ಠ ವೇಗ ತಲುಪುವ ಸಾಮರ್ಥ್ಯ ಹೊಂದಿದ್ದರೂ, ಸದ್ಯಕ್ಕೆ ಗಂಟೆಗೆ 120-130 ಕಿ.ಮೀ ವೇಗದಲ್ಲಿ ಚಲಿಸಲಿದೆ.

ಸುರಕ್ಷತೆ: ಸ್ವದೇಶಿ ನಿರ್ಮಿತ 'ಕವಚ' (Kavach) ಸ್ವಯಂಚಾಲಿತ ರಕ್ಷಣಾ ವ್ಯವಸ್ಥೆ ಮತ್ತು ಸುಧಾರಿತ ಸಿಸಿಟಿವಿ ಕಣ್ಗಾವಲು ಅಳವಡಿಸಲಾಗಿದೆ.

ಸ್ವಯಂಚಾಲಿತ ಬಾಗಿಲುಗಳು: ಪ್ರಯಾಣದ ಸಮಯದಲ್ಲಿ ಬಾಗಿಲುಗಳು ಮುಚ್ಚಿರುತ್ತವೆ ಮತ್ತು ನಿಲ್ದಾಣ ಬಂದಾಗ ಮಾತ್ರ ಸ್ವಯಂಚಾಲಿತವಾಗಿ ತೆರೆಯುತ್ತವೆ.

ಪ್ರಯಾಣಿಕರ ಸೌಕರ್ಯ ಮತ್ತು ನೈರ್ಮಲ್ಯ

ವಿಮಾನದಂತಹ ಅನುಭವ: ಸಂಪೂರ್ಣ ಹವಾನಿಯಂತ್ರಿತ (AC) ಬೋಗಿಗಳು, ಎರ್ಗೋನಾಮಿಕ್ ವಿನ್ಯಾಸದ ಬರ್ತ್‌ಗಳು ಮತ್ತು ಅತ್ಯಾಧುನಿಕ ಸಸ್ಪೆನ್ಷನ್ ವ್ಯವಸ್ಥೆಯಿಂದಾಗಿ ಪ್ರಯಾಣ ಅತ್ಯಂತ ಆರಾಮದಾಯಕವಾಗಿರುತ್ತದೆ.

ರೋಗಾಣು ಮುಕ್ತ: ಶೇ. 99ರಷ್ಟು ಜರ್ಮ್ಸ್ ಕೊಲ್ಲುವ ಸುಧಾರಿತ ಸೋಂಕುನಿವಾರಕ ತಂತ್ರಜ್ಞಾನ ಮತ್ತು ಅತ್ಯುನ್ನತ ದರ್ಜೆಯ ಬೆಡ್‌ಶೀಟ್ ಹಾಗೂ ಟವೆಲ್‌ಗಳ ಸೌಲಭ್ಯವಿದೆ.

ಸ್ಥಳೀಯ ಆಹಾರದ ಸವಿಗೆ ಆದ್ಯತೆ

• ಪ್ರಾದೇಶಿಕ ಭೋಜನ: ಪ್ರಯಾಣಿಕರಿಗೆ ವಿಮಾನದ ಮಾದರಿಯಲ್ಲಿ ಊಟದ ಸೌಲಭ್ಯವಿದ್ದು, ಟಿಕೆಟ್ ದರದಲ್ಲೇ ಇದು ಸೇರಿರುತ್ತದೆ.

• ಅಸ್ಸಾಂ ಮತ್ತು ಬಂಗಾಳಿ ರುಚಿ: ಗುವಾಹಟಿಯಿಂದ ಹೌರಾಗೆ ಹೋಗುವವರಿಗೆ ಅಸ್ಸಾಮಿ ಭೋಜನ ಮತ್ತು ಹೌರಾದಿಂದ ಗುವಾಹಟಿಗೆ ಮರಳುವವರಿಗೆ ಬಂಗಾಳಿ ಶೈಲಿಯ ಆಹಾರ ನೀಡಲಾಗುತ್ತದೆ.

ಟಿಕೆಟ್ ದರ

ಈ ರೈಲು ಮೂರು ಹಂತದ ದರಗಳನ್ನು ಹೊಂದಿದ್ದು, ಅವುಗಳ ವಿವರ ಹೀಗಿದೆ:

• 3AC: ಸುಮಾರು ₹2,300

• 2AC: ಸುಮಾರು ₹3,000

• 1AC: ಸುಮಾರು ₹3,600

Read More
Next Story