ಗೋವಾ ನೈಟ್‌ಕ್ಲಬ್ ದುರಂತ: 25 ಸಾವು ಬೆನ್ನಲ್ಲೇ ಹೋಟೆಲ್, ಪಬ್‌ಗಳಲ್ಲಿ ಪಟಾಕಿ ಬಳಕೆಗೆ ಸಂಪೂರ್ಣ ನಿಷೇಧ
x

ಗೋವಾ ನೈಟ್‌ಕ್ಲಬ್ ದುರಂತ: 25 ಸಾವು ಬೆನ್ನಲ್ಲೇ ಹೋಟೆಲ್, ಪಬ್‌ಗಳಲ್ಲಿ ಪಟಾಕಿ ಬಳಕೆಗೆ ಸಂಪೂರ್ಣ ನಿಷೇಧ

ಮುಂಜಾಗ್ರತಾ ಕ್ರಮವಾಗಿ ಉತ್ತರ ಗೋವಾ ಜಿಲ್ಲಾ ಆಡಳಿತ ಬುಧವಾರ ಸಂಜೆ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ರ ಸೆಕ್ಷನ್ 163 ರ ಅಡಿಯಲ್ಲಿ ಆದೇಶ ಹೊರಡಿಸಲಾಗಿದೆ.


Click the Play button to hear this message in audio format

ಉತ್ತರ ಗೋವಾದ ಅರ್ಪೋರಾ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 25 ಜನರು ಪ್ರಾಣ ಕಳೆದುಕೊಂಡ ಘಟನೆಯಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾ ಆಡಳಿತ, ಇದೀಗ ಪ್ರವಾಸಿ ತಾಣಗಳಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಡಿಸೆಂಬರ್ 6ರಂದು ಸಂಭವಿಸಿದ ಈ ದುರಂತದ ಬಳಿಕ ಎಚ್ಚೆತ್ತಿರುವ ಆಡಳಿತ, ನೈಟ್‌ಕ್ಲಬ್, ಹೋಟೆಲ್ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳ ಒಳಾಂಗಣದಲ್ಲಿ ಪಟಾಕಿ ಮತ್ತು ಅಗ್ನಿ ಸಂಬಂಧಿತ ಮನರಂಜನಾ ಉಪಕರಣಗಳ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಮುಂಜಾಗ್ರತಾ ಕ್ರಮವಾಗಿ ಉತ್ತರ ಗೋವಾ ಜಿಲ್ಲಾ ಆಡಳಿತ ಬುಧವಾರ ಸಂಜೆ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ರ ಸೆಕ್ಷನ್ 163 ರ ಅಡಿಯಲ್ಲಿ ಹೊರಡಿಸಲಾದ ಈ ಆದೇಶದ ಪ್ರಕಾರ, ಇನ್ನು ಮುಂದೆ ಉತ್ತರ ಗೋವಾ ವ್ಯಾಪ್ತಿಯ ಯಾವುದೇ ನೈಟ್‌ಕ್ಲಬ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಗೆಸ್ಟ್‌ಹೌಸ್‌ಗಳು, ರೆಸಾರ್ಟ್‌ಗಳು, ಬೀಚ್ ಶ್ಯಾಕ್‌ಗಳು ಹಾಗೂ ಮನರಂಜನಾ ಕಾರ್ಯಕ್ರಮ ನಡೆಯುವ ಸ್ಥಳಗಳ ಒಳಗೆ ಪಟಾಕಿಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ. ಕೇವಲ ಪಟಾಕಿ ಮಾತ್ರವಲ್ಲದೆ, ಸ್ಪಾರ್ಕ್ಲರ್‌ಗಳು, ಪೈರೋಟೆಕ್ನಿಕ್ ಪರಿಣಾಮಗಳು, ಬೆಂಕಿ ಉಗುಳುವ ಫ್ಲೇಮ್ ಥ್ರೋವರ್‌ಗಳು ಹಾಗೂ ಹೊಗೆ ಉತ್ಪಾದಿಸುವ ಯಂತ್ರಗಳ ಬಳಕೆಯನ್ನೂ ಆಡಳಿತ ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ.

ಎಲೆಕ್ಟ್ರಿಕ್ ಪಟಾಕಿ ಕಾರಣ

ಅರ್ಪೋರಾದ 'ಬರ್ಚ್ ಬೈ ರೋಮಿಯೋ ಲೇನ್' ನೈಟ್‌ಕ್ಲಬ್‌ನಲ್ಲಿ ಡಿಸೆಂಬರ್ 6 ರ ಮಧ್ಯರಾತ್ರಿ ನಡೆದ ದುರಂತಕ್ಕೆ ಅಲ್ಲಿ ಬಳಸಲಾದ 'ಎಲೆಕ್ಟ್ರಿಕ್ ಪಟಾಕಿ'ಗಳೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕ್ಲಬ್‌ನ ಒಳಗೆ ಹಚ್ಚಲಾದ ಈ ಪಟಾಕಿಗಳಿಂದ ಬೆಂಕಿ ಹೊತ್ತಿಕೊಂಡು ಅದು ಕ್ಷಣಾರ್ಧದಲ್ಲಿ ಆವರಿಸಿ 25 ಜನರ ದಾರುಣ ಸಾವಿಗೆ ಕಾರಣವಾಗಿತ್ತು. ಇಂತಹ ದುರ್ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಕಠಿಣ ನಿಷೇಧಾಜ್ಞೆಯನ್ನು ಜಾರಿಗೆ ತಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Read More
Next Story