ದೆಹಲಿ ಕರ್ತವ್ಯ ಪಥದಲ್ಲಿ ಆವರಿಸಿರುವ ಮಂಜು
ದೆಹಲಿಯಲ್ಲಿ ವಾಯುಮಾಲಿನ್ಯದ ಕಾಟ ನಿರಂತರ: 'ಅತ್ಯಂತ ಕಳಪೆ' ಮಟ್ಟಕ್ಕೆ
ಸಿಪಿಸಿಬಿ ಮಾನದಂಡಗಳ ಪ್ರಕಾರ, ಎಕ್ಯೂಐ 0-50 ರಷ್ಟಿದ್ದರೆ 'ಉತ್ತಮ', 51-100 'ತೃಪ್ತಿದಾಯಕ', 101-200 'ಮಧ್ಯಮ', 201-300 'ಕಳಪೆ', 301-400 'ಅತ್ಯಂತ ಕಳಪೆ' ಮತ್ತು 401-500 ರಷ್ಟಿದ್ದರೆ 'ತೀವ್ರ ಕಳಪೆ' (Severe) ಎಂದು ಪರಿಗಣಿಸಲಾಗುತ್ತದೆ.
ದೇಶದ ರಾಜಧಾನಿ ನವದೆಹಲಿಯಲ್ಲಿ ಶನಿವಾರ (ಡಿ.27) ಬೆಳಿಗ್ಗೆ ದಟ್ಟವಾದ ಮಂಜು ಆವರಿಸಿದ್ದು, ವಾಯು ಗುಣಮಟ್ಟವು 'ಅತ್ಯಂತ ಕಳಪೆ' ವಿಭಾಗದಲ್ಲಿ ಮುಂದುವರಿದಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಶನಿವಾರ ಬೆಳಿಗ್ಗೆ 9 ಗಂಟೆಗೆ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 355 ರಷ್ಟಿತ್ತು. ಇದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲ 'ಅತ್ಯಂತ ಕಳಪೆ' (Very Poor) ವರ್ಗಕ್ಕೆ ಸೇರುತ್ತದೆ.
ಸಿಪಿಸಿಬಿ ಮಾನದಂಡಗಳ ಪ್ರಕಾರ, ಎಕ್ಯೂಐ 0-50 ರಷ್ಟಿದ್ದರೆ 'ಉತ್ತಮ', 51-100 'ತೃಪ್ತಿದಾಯಕ', 101-200 'ಮಧ್ಯಮ', 201-300 'ಕಳಪೆ', 301-400 'ಅತ್ಯಂತ ಕಳಪೆ' ಮತ್ತು 401-500 ರಷ್ಟಿದ್ದರೆ 'ತೀವ್ರ ಕಳಪೆ' (Severe) ಎಂದು ಪರಿಗಣಿಸಲಾಗುತ್ತದೆ.
ಹವಾಮಾನ ವರದಿ:
ಇದೇ ವೇಳೆ, ದೆಹಲಿಯಲ್ಲಿ ಕನಿಷ್ಠ ತಾಪಮಾನ 7.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ ಒಂದು ಡಿಗ್ರಿ ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ದಿನವಿಡೀ ದಟ್ಟವಾದ ಮಂಜು ಕವಿದ ವಾತಾವರಣ ಇರುವ ಸಾಧ್ಯತೆಯಿದ್ದು, ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಳಿಗ್ಗೆ 8.30ರ ಸುಮಾರಿಗೆ ಸಾಪೇಕ್ಷ ಆರ್ದ್ರತೆ (Humidity) ಶೇ.100 ರಷ್ಟು ದಾಖಲಾಗಿದೆ.