Bihar Elections Prashant Kishor’s ‘Jan Suraaj’ Takes Early Lead in 4 Seats
x

 ಜನ ಸೂರಜ್‌ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ 

ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್‌ಗೆ ಆರಂಭಿಕ ಮುನ್ನಡೆ; 4 ಕ್ಷೇತ್ರಗಳಲ್ಲಿ 'ಜನ್ ಸುರಾಜ್‌' ಮುಂಚೂಣಿ

ಬೆಳಗ್ಗೆ 845ರ ವೇಳೆಗೆ , ಜನ್ ಸುರಾಜ್ ಪಕ್ಷವು ಬಹದ್ದೂರ್‌ಪುರ್, ಜೋಕಿಹತ್, ಕರ್ಗಹಾರ್ ಮತ್ತು ಕುಮ್ಹ್ರಾರ್ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಜನ್ ಸ್ವರಾಜ್ ಕೇವಲ ಒಂದು ಸ್ಥಾನವನ್ನು ಗೆಲ್ಲಬಹುದು ಎಂದು ಅಂದಾಜಿಸಿದ್ದವು,


Click the Play button to hear this message in audio format

ಚುನಾವಣಾ ಚಾಣಕ್ಯ ಎಂದೇ ಖ್ಯಾತರಾಗಿರುವ ಪ್ರಶಾಂತ್ ಕಿಶೋರ್ ಅವರ 'ಜನ್ ಸುರಾಜ್' ಪಕ್ಷವು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಆರಂಭ ಪಡೆದಿದೆ. ಚುನಾವಣೋತ್ತರ ಸಮೀಕ್ಷೆಗಳು ಈ ಪಕ್ಷವು ವಿಫಲವಾಗಲಿದೆ ಎಂದು ಭವಿಷ್ಯ ನುಡಿದಿದ್ದರೂ, ಶುಕ್ರವಾರ ಬೆಳಗ್ಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆಯೇ ಆರಂಭಿಕ ಟ್ರೆಂಡ್‌ಗಳಲ್ಲಿ 'ಜನ್ ಸುರಾಜ್' ಪಕ್ಷವು ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಸಮೀಕ್ಷೆಗಳನ್ನು ಮೀರಿಸಿದ ಸಾಧನೆ

ಬೆಳಗ್ಗೆ 845ರ ವೇಳೆಗೆ , ಜನ್ ಸುರಾಜ್ ಪಕ್ಷವು ಬಹದ್ದೂರ್‌ಪುರ್, ಜೋಕಿಹತ್, ಕರ್ಗಹಾರ್ ಮತ್ತು ಕುಮ್ಹ್ರಾರ್ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಜನ್ ಸ್ವರಾಜ್ ಕೇವಲ ಒಂದು ಸ್ಥಾನವನ್ನು ಗೆಲ್ಲಬಹುದು ಎಂದು ಅಂದಾಜಿಸಿದ್ದವು, ಆದರೆ ಆರಂಭಿಕ ಫಲಿತಾಂಶಗಳು ಈ ನಿರೀಕ್ಷೆಗಳನ್ನು ಮೀರಿವೆ.

ಎನ್‌ಡಿಎಗೆ ಆರಂಭಿಕ ಮುನ್ನಡೆ

ಬಿಹಾರದ 243 ಸ್ಥಾನಗಳ ಪೈಕಿ 239 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಜನ್ ಸುರಾಜ್, ಸದ್ಯದ ಮಟ್ಟಿಗೆ ಉತ್ತಮ ಪ್ರದರ್ಶನ ನೀಡುತ್ತಿದೆ. ಇನ್ನೊಂದೆಡೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್ (ಜೆಡಿಯು) ನೇತೃತ್ವದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು ಆರಂಭಿಕ ಮುನ್ನಡೆ ಸಾಧಿಸಿದ್ದು, ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯದಂತೆಯೇ ನಿರಾಯಾಸ ಗೆಲುವಿನತ್ತ ಸಾಗುತ್ತಿದೆ.

'ಕಿಂಗ್ ಮೇಕರ್' ಆಗುವ ಸಾಧ್ಯತೆ

ಜನ್ ಸುರಾಜ್ ಪಕ್ಷವು ಹೆಚ್ಚು ಸ್ಥಾನಗಳನ್ನು ಗೆಲ್ಲದಿದ್ದರೂ, ವಿರೋಧ ಪಕ್ಷವಾದ ಮಹಾಘಟಬಂಧನ್‌ನ ಮತಗಳನ್ನು ಕಸಿದುಕೊಳ್ಳುವ ಮೂಲಕ ಫಲಿತಾಂಶದ ಮೇಲೆ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ. ಒಂದು ವೇಳೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ, ಪ್ರಶಾಂತ್ ಕಿಶೋರ್ ಅವರ ಪಕ್ಷವು 'ಕಿಂಗ್ ಮೇಕರ್' ಆಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

Read More
Next Story