This is how a man who couldnt count a hundred sheep became the finance minister: Siddaramaiah reveals the history of the Deve Gowda era in the assembly
x

ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

"ನೂರು ಕುರಿ ಲೆಕ್ಕವಿಡಲು ಬರದವನು ಅರ್ಥ ಸಚಿವನಾದದ್ದು ಹೀಗೆ": ವಿಧಾನಸಭೆಯಲ್ಲಿ ದೇವೇಗೌಡರ ಕಾಲದ ಇತಿಹಾಸ ಬಿಚ್ಚಿಟ್ಟ ಸಿದ್ದರಾಮಯ್ಯ

ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡರು, 'ಹಣಕಾಸು ಖಾತೆಗೆ ನನಗೆ ಅತ್ಯಂತ ನಂಬಿಗಸ್ಥರೊಬ್ಬರು ಬೇಕಾಗಿದ್ದಾರೆ, ಹೀಗಾಗಿ ನೀನೇ ಆರ್ಥಿಕ ಸಚಿವನಾಗಬೇಕು' ಎಂದು ನನಗೆ ಸೂಚಿಸಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದರು.


Click the Play button to hear this message in audio format

"ನೂರು ಕುರಿಗಳ ಲೆಕ್ಕ ಇಡಲು ಬರದವನಿಗೆ ರಾಜ್ಯದ ಹಣಕಾಸು ಖಾತೆ ನೀಡಲಾಗಿದೆ" ಎಂದು ತಮ್ಮ ಮೇಲೆ ಹಿಂದೆ ಕೇಳಿಬಂದಿದ್ದ ಟೀಕೆಗಳಿಗೆ ಹಿರಿಯ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆ ಕಲಾಪದಲ್ಲಿ ಸ್ವಾರಸ್ಯಕರವಾಗಿ ತಿರುಗೇಟು ನೀಡಿದ್ದಾರೆ.

ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 1995-96ನೇ ಸಾಲಿನಲ್ಲಿ ತಾವು ಮೊದಲ ಬಾರಿಗೆ ರಾಜ್ಯದ ಹಣಕಾಸು ಸಚಿವರಾದಾಗಿನ ಕುತೂಹಲಕಾರಿ ಇತಿಹಾಸವನ್ನು ಮೆಲುಕು ಹಾಕಿದರು. ಜೊತೆಗೆ, ಹಳೆಯ ಬಜೆಟ್ ಪ್ರತಿಯೊಂದನ್ನು ಪ್ರದರ್ಶಿಸುವ ಮೂಲಕ ಪ್ರಸ್ತುತ ಮಂಡನೆಯಾಗಿರುವ ಬಜೆಟ್ ಅನ್ನು 'ಹರಕಲು ಬಜೆಟ್' ಎಂದು ತೀವ್ರವಾಗಿ ಟೀಕಿಸಿದರು.

ಕಂದಾಯ ಕೇಳಿದ್ದೆ, ಸಿಕ್ಕಿದ್ದು ಹಣಕಾಸು!

ತಾವು ಹಣಕಾಸು ಸಚಿವರಾದ ಹಿನ್ನೆಲೆಯನ್ನು ಸದನದ ಮುಂದಿಟ್ಟ ಸಿದ್ದರಾಮಯ್ಯ, "ಕ್ಯಾಬಿನೆಟ್ ರಚನೆಯ ಚರ್ಚೆ ಆರ್.ಎನ್. ಜಾಲಪ್ಪ ಅವರ ಕಚೇರಿಯಲ್ಲಿ ನಡೆಯುತ್ತಿತ್ತು. ಆ ವೇಳೆ ನಾನು ನನಗೆ ಕಂದಾಯ ಇಲಾಖೆ ಬೇಕು ಎಂದು ಪಟ್ಟು ಹಿಡಿದಿದ್ದೆ. ಆದರೆ ಜಾಲಪ್ಪನವರೂ ತಮಗೆ ರೆವೆನ್ಯೂ (ಕಂದಾಯ) ಖಾತೆಯೇ ಬೇಕು ಎಂದರು. ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡರು, 'ಹಣಕಾಸು ಖಾತೆಗೆ ನನಗೆ ಅತ್ಯಂತ ನಂಬಿಗಸ್ಥರೊಬ್ಬರು ಬೇಕಾಗಿದ್ದಾರೆ, ಹೀಗಾಗಿ ನೀನೇ ಆರ್ಥಿಕ ಸಚಿವನಾಗಬೇಕು' ಎಂದು ನನಗೆ ಸೂಚಿಸಿದರು. ನಾನು ಆ ಖಾತೆ ಬೇಡವೆಂದರೂ, ಬಲವಂತವಾಗಿ ನನ್ನ ಹೆಗಲಿಗೆ ಆರ್ಥಿಕ ಇಲಾಖೆಯ ಜವಾಬ್ದಾರಿ ವಹಿಸಿದರು" ಎಂದು ವಿವರಿಸಿದರು.

ಪುಸ್ತಕ ಹರಿದಿದೆ, ಆದರೆ ಈ ಬಾರಿಯ ಬಜೆಟ್ ನಿಜವಾದ 'ಹರಕಲು ಬಜೆಟ್'

ಇದೇ ವೇಳೆ ಕಲಾಪದಲ್ಲಿ ಆಸಕ್ತಿದಾಯಕ ಸನ್ನಿವೇಶವೊಂದು ನಡೆಯಿತು. ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗಿನ ಹಳೆಯ ಬಜೆಟ್ ಪ್ರತಿಯೊಂದನ್ನು ಪ್ರತಿಪಕ್ಷ ನಾಯಕ ಆರ್​. ಅಶೋಕ್ ಅವರು ಸದನದಲ್ಲಿ ಪ್ರದರ್ಶಿಸಿದರು. ಅಲ್ಲದೆ, "ವರ್ಷಗಳು ಕಳೆದಿರುವುದರಿಂದ ಈ ಬಜೆಟ್ ಪುಸ್ತಕ ಹರಿದುಹೋಗಿದೆ. ಆದರೆ, ನಾನು ಇದನ್ನು 'ಹರಕಲು ಬಜೆಟ್' ಎಂದು ಕರೆಯುವುದಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಫೆಬ್ರವರಿ ೬ರಂದು ಮಂಡಿಸಿದ ಬಜೆಟ್ ಹರಕಲು ಬಜೆಟ್​, ಎಂದು ಹೇಳಿದರು.

Read More
Next Story