ಇಂದು ಸಿದ್ಧರಾಮಯ್ಯ ಆಪ್ತರ ಆಸ್ಟ್ರೇಲಿಯಾ ಪ್ರವಾಸ- ಸಂಭಾವ್ಯ ಶಾಸಕರ ಪಟ್ಟಿ ಇಲ್ಲಿದೆ
x
ಸಿಎಂ ಸಿದ್ಧರಾಮಯ್ಯ

ಇಂದು ಸಿದ್ಧರಾಮಯ್ಯ ಆಪ್ತರ 'ಆಸ್ಟ್ರೇಲಿಯಾ ಪ್ರವಾಸ'- ಸಂಭಾವ್ಯ ಶಾಸಕರ ಪಟ್ಟಿ ಇಲ್ಲಿದೆ

ರಾಜ್ಯ ರಾಜಕೀಯದಲ್ಲಿ ನಾಯಕತ್ವದ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಸುದ್ದಿ ಭಾರೀ ಕುತೂಹಲ ಮೂಡಿಸಿದೆ.


Click the Play button to hear this message in audio format

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವದ ಬದಲಾವಣೆಯ ಗೊಂದಲ ಮತ್ತು ರಾಜಕೀಯ ಬೆಳವಣಿಗೆಗಳು ಬಿರುಸುಗೊಂಡಿರುವ ನಡುವೆಯೇ, ಸಚಿವರು ಸೇರಿದಂತೆ 20ಕ್ಕೂ ಹೆಚ್ಚು ಕೈ ಶಾಸಕರು ವಿದೇಶ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಇಂದು ರಾತ್ರಿ ಸುಮಾರು ಸಿಎಂ ಸಿದ್ಧರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕರು ಆಸ್ಟ್ರೇಲಿಯಾಕ್ಕೆ ವಿಮಾನ ಏರಲಿದ್ದಾರೆ.

ಅಧ್ಯಯನ ಪ್ರವಾಸವೋ ಅಥವಾ ರಾಜಕೀಯ ತಂತ್ರವೋ?

ಇಂದಿನಿಂದ (ಫೆಬ್ರವರಿ 17) ಮಾರ್ಚ್ 1ರವರೆಗೆ ಈ ವಿದೇಶ ಪ್ರವಾಸ ನಡೆಯಲಿದ್ದು, ಇದರಲ್ಲಿ ಶಾಸಕರು ಮಾತ್ರವಲ್ಲದೆ ವಿಧಾನ ಪರಿಷತ್ ಸದಸ್ಯರು ಕೂಡ ಭಾಗಿಯಾಗುತ್ತಿದ್ದಾರೆ. ಅಧಿಕೃತವಾಗಿ 'ಅಧ್ಯಯನ ಪ್ರವಾಸ' ಎಂಬ ಹಣೆಪಟ್ಟಿ ಹಚ್ಚಲಾಗಿದ್ದರೂ, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆಯ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ ಶಾಸಕರು ಒಟ್ಟಾಗಿ ಪ್ರವಾಸ ಕೈಗೊಳ್ಳುತ್ತಿರುವುದು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ವರಷ್ಠರ ಕೆಂಗೆಣ್ಣಿನ ಭೀತಿ; ಕೆಲವರು ತಟಸ್ಥ!

ಮೂಲಗಳ ಪ್ರಕಾರ, ಈಗಾಗಲೇ ಟಿಕೆಟ್ ಕಾಯ್ದಿರಿಸಿರುವ ಹಲವು ಶಾಸಕರು ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಆದರೆ, ಇನ್ನೊಂದೆಡೆ ದೆಹಲಿ ಮಟ್ಟದಲ್ಲಿ ನಾಯಕತ್ವದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ರಾಜ್ಯ ಬಿಟ್ಟು ಹೋಗುವುದು ಸರಿಯೇ ಎಂಬ ಗೊಂದಲ ಕೆಲವರನ್ನು ಕಾಡುತ್ತಿದೆ. ವರಿಷ್ಠರ ಕೆಂಗೆಣ್ಣಿಗೆ ಗುರಿಯಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಕೆಲವು ಶಾಸಕರು ಪ್ರವಾಸದಿಂದ ದೂರ ಉಳಿದು ತಟಸ್ಥರಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ವಿದೇಶ ಪ್ರವಾಸ ಕೈಗೊಳ್ಳಲಿರುವ ಪ್ರಮುಖರ ಪಟ್ಟಿ ಇಲ್ಲಿದೆ:

1. ಕೆ. ವೆಂಕಟೇಶ್ (ಪಶುಸಂಗೋಪನಾ ಸಚಿವರು)

2. ವಸಂತ್ ಕುಮಾರ್ (MLC ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ)

3. ಪುಟ್ಟರಂಗಶೆಟ್ಟಿ (ಶಾಸಕರು)

4. ಎಚ್.ಡಿ. ತಮ್ಮಯ್ಯ (ಶಾಸಕರು)

5. ಹಂಪನಗೌಡ ಬಾದರ್ಲಿ (ಶಾಸಕರು)

6. ದೇವನಂದಪ್ಪ (ಶಾಸಕರು)

7. ಯಶವಂತರಾಯಗೌಡ ಪಾಟೀಲ್ (ಶಾಸಕರು)

8. ಬಿ.ಎಂ. ನಾಗರಾಜ್ (ಶಾಸಕರು)

9. ಜೆ.ಟಿ. ಪಾಟೀಲ್ (ಶಾಸಕರು)

10. ಅಲ್ಲಂಪ್ರಭು ಪಾಟೀಲ್ (ಶಾಸಕರು)

11. ಬಸನಗೌಡ ದದ್ದಲ್ (ಶಾಸಕರು)

12. ಎ.ಆರ್. ಕೃಷ್ಣಮೂರ್ತಿ (ಶಾಸಕರು)

13. ಬಸನಗೌಡ ತುರುವಿಹಾಳ್ (ಶಾಸಕರು)

14. ಬಿ.ಬಿ. ಚಿಮ್ಮನಕಟ್ಟಿ (ಶಾಸಕರು)

15. ಮಹಾಂತೇಶ ಕೌಜಲಗಿ (ಶಾಸಕರು)

16. ರಾಘವೇಂದ್ರ ಹಿಟ್ನಾಳ್ (ಶಾಸಕರು)

17. ರಘುಮೂರ್ತಿ (ಶಾಸಕರು)

18. ಅನಿಲ್ ಚಿಕ್ಕಮಾದು (ಶಾಸಕರು)

19. ಶರಣಗೌಡ ಬಯ್ಯಾಪುರ (MLC)

20. ತಿಮ್ಮಯ್ಯ (MLC)

Read More
Next Story