Flight disaster: Air India
x

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು 21 ಅಂತರಾಷ್ಟ್ರೀಯ ವಿಮಾನಗಳ ಸಂಚಾರ ರದ್ದುಗೊಂಡಿದೆ.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿಮಾನ ಸಂಚಾರದಲ್ಲಿ ವ್ಯತ್ಯಯ: 21 ಅಂತರಾಷ್ಟ್ರೀಯ ವಿಮಾನಗಳು ಕ್ಯಾನ್ಸಲ್‌

ಪಶ್ಚಿಮ ಏಷ್ಯಾ ವಲಯದಲ್ಲಿನ ವಾಯುಪ್ರದೇಶ ನಿರ್ಬಂಧದ ಹಿನ್ನೆಲೆಯಲ್ಲಿ, ಮಾರ್ಚ್ 11ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು 21 ಅಂತರಾಷ್ಟ್ರೀಯ ವಿಮಾನಗಳ ಸಂಚಾರ ರದ್ದುಗೊಂಡಿದೆ.


Click the Play button to hear this message in audio format

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಹಾಗೂ ವೈಮಾನಿಕ ನಿರ್ಬಂಧಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಒಟ್ಟು 21 ವಿಮಾನಗಳ ಸಂಚಾರ ರದ್ದಾಗಿದೆ. ಈ ಪೈಕಿ 11 ಆಗಮನ ಹಾಗೂ 10 ನಿರ್ಗಮನ ವಿಮಾನಗಳು ರದ್ದಾಗಿದ್ದು, ಪ್ರಮುಖವಾಗಿ ಅಬುಧಾಬಿ, ದುಬೈ, ರಿಯಾದ್, ಜಿದ್ದಾ, ದಮ್ಮಾಮ್ ಮತ್ತು ದೋಹಾ ನಗರಗಳಿಗೆ ಪ್ರಯಾಣಿಸಬೇಕಿದ್ದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮುಂದುವರಿಯುತ್ತಿದ್ದರೂ ಸಹ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೈನಂದಿನ ವಿಮಾನ ರದ್ದತಿ ಪ್ರಮಾಣವು ಕ್ರಮೇಣ ಇಳಿಕೆಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ. ಅನಿರೀಕ್ಷಿತ ರದ್ದತಿಯಿಂದಾಗಿ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕಾಯುವಂತಾಗಿದ್ದು, ಏರ್‌ಲೈನ್ಸ್‌ಗಳು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಅಥವಾ ಹಣ ಮರುಪಾವತಿಯ ಭರವಸೆ ನೀಡುತ್ತಿವೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ತಮ್ಮ ವಿಮಾನದ ಸ್ಥಿತಿಗತಿಯನ್ನು ಪರಿಶೀಲಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮಾರ್ಚ್ 2ರಂದು 72 ವಿಮಾನಗಳು ರದ್ದಾಗಿದ್ದವು. ಆದರೆ ಮಾರ್ಚ್ 9 ಮತ್ತು 10ರಂದು ಈ ಸಂಖ್ಯೆ 20ಕ್ಕಿಂತಲೂ ಕೆಳಕ್ಕೆ ಇಳಿದಿದೆ. ಇನ್ನು ಮಂಗಳವಾರ ಸಂಜೆಯ ವೇಳೆಗೆ ಪಶ್ಚಿಮ ಏಷ್ಯಾಕ್ಕೆ ಒಟ್ಟು 25 ವಿಮಾನಗಳ ಸಂಚಾರವನ್ನು ನಿಗದಿಪಡಿಸಲಾಗಿದ್ದು, ಈ ಪೈಕಿ 12 ಆಗಮನ ಮತ್ತು 13 ನಿರ್ಗಮನ ವಿಮಾನಗಳು ಸೇರಿವೆ. ಜಿದ್ದಾ, ಶಾರ್ಜಾ, ದುಬೈ, ಅಬುಧಾಬಿ, ರಾಸ್ ಅಲ್ ಖೈಮಾ ಮತ್ತು ಮಸ್ಕತ್ ಸೇರಿದಂತೆ ಕೊಲ್ಲಿಯ ಪ್ರಮುಖ ನಗರಗಳಿಗೆ ವಿಮಾನಗಳು ಹಾಗೂ ಸರಕು ಸಾಗಣೆ ವಿಮಾನಗಳ ಸಂಚಾರ ಸುಗಮವಾಗಿ ನಡೆದಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಪಶ್ಚಿಮ ಏಷ್ಯಾದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಮತ್ತು ವಿಮಾನ ಇಂಧನ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಈ ಹೊರೆಯನ್ನು ಸರಿದೂಗಿಸಲು ಏರ್ ಇಂಡಿಯಾ ತನ್ನ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನದ ಮೇಲೆ ಹಂತ ಹಂತವಾಗಿ 'ಹೆಚ್ಚುವರಿ ಇಂಧನ ಶುಲ್ಕ' ವಿಧಿಸುವುದಾಗಿ ಘೋಷಿಸಿದೆ. ಏರ್ ಇಂಡಿಯಾ ತನ್ನ ಮಾರ್ಗಗಳ ಆಧಾರದ ಮೇಲೆ ಮೂರು ಹಂತಗಳಲ್ಲಿ ಈ ಪರಿಷ್ಕೃತ ಶುಲ್ಕವನ್ನು ಜಾರಿಗೆ ತರುತ್ತಿದೆ.

ಏರ್ ಇಂಡಿಯಾ ಸಂಸ್ಥೆಯು ಮಾರ್ಚ್ 12 ರಿಂದ ಜಾರಿಗೆ ಬರುವಂತೆ ಮೊದಲ ಹಂತದ ದರ ಏರಿಕೆಯನ್ನು ಘೋಷಿಸಿದ್ದು, ಇದರ ಅನ್ವಯ ದೇಶೀಯ ಮತ್ತು ಸಾರ್ಕ್ (SAARC) ರಾಷ್ಟ್ರಗಳ ಮಾರ್ಗಗಳಲ್ಲಿ ಪ್ರತಿ ಟಿಕೆಟ್ ಮೇಲೆ 399 ರೂ. ಹೆಚ್ಚುವರಿ ಇಂಧನ ಶುಲ್ಕವನ್ನು ವಿಧಿಸಲಾಗುತ್ತದೆ. ಅಂತರಾಷ್ಟ್ರೀಯ ಮಾರ್ಗಗಳ ಪೈಕಿ ಪಶ್ಚಿಮ ಏಷ್ಯಾಗೆ 10 ಡಾಲರ್ ಹೆಚ್ಚಳವಾಗಲಿದ್ದರೆ, ಆಗ್ನೆಯ ಏಷ್ಯಾ ಮಾರ್ಗಗಳಿಗೆ 20 ಡಾಲರ್ ಏರಿಕೆಯಾಗಿ ಒಟ್ಟು ಶುಲ್ಕ 60 ಡಾಲ‌ರ್ ತಲುಪಲಿದೆ. ಅದೇ ರೀತಿ ಆಫ್ರಿಕಾ ಮಾರ್ಗಗಳ ಮೇಲೆ 30 ಡಾಲರ್ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದ್ದು, ಅಲ್ಲಿನ ಒಟ್ಟು ಇಂಧನ ಶುಲ್ಕ 90 ಡಾಲರ್‌ಗೆ ಏರಿಕೆಯಾಗಲಿದೆ.

Read More
Next Story