
ಮಲೇಷ್ಯಾ ಓಪನ್: ಯಮಗುಚಿ ವಿರುದ್ಧ ಭರ್ಜರಿ ಜಯ, ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಪಿ.ವಿ. ಸಿಂಧು!
ಪಿ.ವಿ.ಸಿಂಧು ಈ ಮೊದಲು ಮಲೇಷ್ಯಾ ಓಪನ್ 2018 ಮತ್ತು 2022 ರ ಆವೃತ್ತಿಗಳಲ್ಲಿ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿ, ಫೈನಲ್‌ಗೇರುವಲ್ಲಿ ವಿಫಲರಾಗಿದ್ದರು.
ಭಾರತದ ಅಗ್ರ ಶ್ರೇಯಾಂಕ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಮಲೇಷ್ಯಾ ಓಪನ್‌ನಲ್ಲಿ ವಿಶ್ವದ ಮೂರನೇ ಶ್ರೇಯಾಂಕ ಆಟಗಾರ್ತಿ ಜಪಾನ್‌ನ ಆಕಾನೆ ಯಮಗುಚಿ ವಿರುದ್ಧ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ತಲುಪಿದ್ದು, ಚಾಂಪಿಯನ್ ಆಗುವತ್ತ ಹೆಜ್ಜೆಹಾಕಿದ್ದಾರೆ.
ಶುಕ್ರವಾರ(ಜ.9) ಕೌಲಾಲಂಪುರದ ಆಕ್ಸಿಯಾಟಾ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಜಪಾನ್‌ನ ಆಕಾನೆ ಯಮಗುಚಿ ವಿರುದ್ಧ ನಡೆದ ಕ್ವಾಟರ್ ಫೈನಲ್ ಪಂದ್ಯದ ಮೊದಲ ಸೆಟ್‌ನಲ್ಲಿ ಪಿ.ವಿ.ಸಿಂಧು 21-11 ಅಂತರದಲ್ಲಿ ಮೊದಲ ಸೆಟ್ ಗೆಲುವು ಸಾಧಿಸಿದರು. ಇದಾದ ಕೆಲವೇ ಸಮಯದಲ್ಲಿ ಯಮಗುಚಿ ಗಾಯದ ಕಾರಣ ನಿವೃತ್ತಿ ಪಡೆದರು. ಇದರಿಂದ ಪಿ.ವಿ.ಸಿಂಧು ಅವರನ್ನು ವಿಜಯಶಾಲಿಯೆಂದು ಘೋಷಿಸಲಾಯಿತು.
ಫೈನಲ್‌ನತ್ತ ಪಿ.ವಿ ಸಿಂಧು ಹೆಜ್ಜೆ
ಒಲಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಈ ಮೊದಲು ಮಲೇಷ್ಯಾ ಓಪನ್ 2018 ಮತ್ತು 2022 ರ ಆವೃತ್ತಿಗಳಲ್ಲಿ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿ, ಫೈನಲ್‌ಗೇರುವಲ್ಲಿ ವಿಫಲರಾಗಿದ್ದರು. ಇದೀಗ ಜಪಾನ್‌ನ ಆಕಾನೆ ಯಮಗುಚಿ ವಿರುದ್ಧ ಗೆಲುವು ಸಾಧಿಸಿ ಮತ್ತೊಮ್ಮೆ ಸೆಮಿಫೈನಲ್ ಪ್ರವೇಶಿಸಿದ್ದಾರೆ. ದಕ್ಷಿಣ ಕೊರಿಯಾದ ಅನ್ ಸೆ-ಯಂಗ್ ಅಥವಾ ಚೀನಾದ ಆಟಗಾರ್ತಿಯರಲ್ಲಿ ಒಬ್ಬರು ಸೆಮಿಫೈನಲ್‌ನಲ್ಲಿ ಸಿಂಧು ಅವರಿಗೆ ಎದುರಾಗುವ ಸಾಧ್ಯತೆ ಹೆಚ್ಚಿದೆ. ಅನ್ ಸೆ-ಯಂಗ್ ಪ್ರಬಲ ಸ್ಪರ್ಧಿಯಾಗಿರುವುದರಿಂದ, ಸಿಂಧು ಸೆಮಿಫೈನಲ್‌ನಲ್ಲಿ ಯಂಗ್ ಅವರನ್ನು ಎದುರಿಸುವ ನಿರೀಕ್ಷೆಯಿದೆ.
ಪಿ.ವಿ. ಸಿಂಧು ಆಟದ ವೈಖರಿ
ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು ಸಾಧನೆ
ಭಾರತದ ತಾರಾ ಬ್ಯಾಂಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು 2016ರ ರಿಯೊ ಒಲಿಂಪಿಕ್‌ನಲ್ಲಿ ಬೆಳ್ಳಿ ಹಾಗೂ 2020ರ ಟೋಕಿಯೋ ಒಲಂಪಿಕ್‌ನಲ್ಲಿ ಕಂಚು, 2019ರಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ, ಬೆಳ್ಳಿ ಪದಕಗಳು ಮತ್ತು ಪದ್ಮಶ್ರೀ, ಪದ್ಮಭೂಷಣ, ಖೇಲ್ ರತ್ನ ಪ್ರಶಸ್ತಿ, 2022ರ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಕಂಚು, 2023ರ ಮಿಶ್ರ ತಂಡದಲ್ಲಿ ಕಂಚು ಪದಕ ಪಡೆದಿದ್ದಾರೆ.

