
ದೆಹಲಿ ಯುವ ಆಟಗಾರ ಆಯುಷ್ ಬದೋನಿ
IND vs NZ: ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟ 'ಬದೋನಿ'; ವಾಷಿಂಗ್ಟನ್ ಸುಂದರ್ ಸರಣಿಯಿಂದ ಔಟ್!
ಪ್ರಸ್ತುತ 1-0 ಅಂತರದಲ್ಲಿ ಸರಣಿ ಮುನ್ನಡೆ ಸಾಧಿಸಿರುವ ಭಾರತ ತಂಡ, ಮುಂದಿನ ಪಂದ್ಯಗಳಲ್ಲಿ ಸುಂದರ್ ಅವರ ಸೇವೆಯನ್ನು ಕಳೆದುಕೊಳ್ಳಲಿದೆ. ಈ ಸ್ಥಾನವನ್ನು ತುಂಬಲು ಆಯ್ಕೆಗಾರರು 25 ವರ್ಷದ ಆಯುಷ್ ಬದೋನಿ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಭಾರತ ತಂಡಕ್ಕೆ ಆಘಾತವೊಂದು ಎದುರಾಗಿದೆ. ಪಕ್ಕೆಲುಬಿನ ಗಾಯದ ಸಮಸ್ಯೆಯಿಂದಾಗಿ ಸ್ಟಾರ್ ಆಲ್-ರೌಂಡರ್ ವಾಷಿಂಗ್ಟನ್ ಸುಂದರ್ ಉಳಿದ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಐಪಿಎಲ್ ಮೂಲಕ ಮನೆಮಾತಾಗಿರುವ ದೆಹಲಿಯ ಯುವ ಆಟಗಾರ ಆಯುಷ್ ಬದೋನಿ ಅವರಿಗೆ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾದಿಂದ ಬುಲಾವ್ ಬಂದಿದೆ.
ಪ್ರಸ್ತುತ 1-0 ಅಂತರದಲ್ಲಿ ಸರಣಿ ಮುನ್ನಡೆ ಸಾಧಿಸಿರುವ ಭಾರತ ತಂಡ, ಮುಂದಿನ ಪಂದ್ಯಗಳಲ್ಲಿ ಸುಂದರ್ ಅವರ ಸೇವೆಯನ್ನು ಕಳೆದುಕೊಳ್ಳಲಿದೆ. ಈ ಸ್ಥಾನವನ್ನು ತುಂಬಲು ಆಯ್ಕೆಗಾರರು 25 ವರ್ಷದ ಆಯುಷ್ ಬದೋನಿ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ.
ಐಪಿಎಲ್ ಫಿನಿಶರ್‌ಗೆ ಒಲಿದ ಅದೃಷ್ಟ
ಲಕ್ನೋ ಸೂಪರ್ ಜೈಂಟ್ಸ್ ಪರ ಐಪಿಎಲ್‌ನಲ್ಲಿ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿರುವ ಬದೋನಿ, ಒತ್ತಡದ ಸಂದರ್ಭಗಳಲ್ಲಿ ಬ್ಯಾಟ್ ಬೀಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಆಡಿರುವ 56 ಪಂದ್ಯಗಳಲ್ಲಿ 140ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 963 ರನ್ ಕಲೆಹಾಕಿರುವ ಇವರು, ಆಫ್-ಸ್ಪಿನ್ ಬೌಲಿಂಗ್ ಕೂಡ ಮಾಡಬಲ್ಲರು. ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆ ಮತ್ತು ಸ್ಫೋಟಕ ಬ್ಯಾಟಿಂಗ್ ಎರಡನ್ನೂ ಸರಿದೂಗಿಸುವ ಸಾಮರ್ಥ್ಯ ಇವರಿಗಿದೆ ಎಂದು ಮ್ಯಾನೇಜ್‌ಮೆಂಟ್ ನಂಬಿದೆ.
ಅಭಿಮಾನಿಗಳ ಅಸಮಾಧಾನ
ಬದೋನಿ ಆಯ್ಕೆ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಬದೋನಿ 27 ಪಂದ್ಯಗಳಿಂದ 36.47ರ ಸರಾಸರಿ (ಒಂದು ಶತಕ ಸಹಿತ) ಹೊಂದಿದ್ದಾರೆ. ಇತ್ತೀಚಿನ ವಿಜಯ ಹಝಾರೆ ಟ್ರೋಫಿಯಲ್ಲಿ ಅವರು ಕೇವಲ 16 ರನ್ ಗಳಿಸಿರುವುದು ಅಭಿಮಾನಿಗಳ ಹುಬ್ಬೇರಿಸಿದೆ.
ಮತ್ತೊಂದೆಡೆ, ದೇಶೀಯ ಕ್ರಿಕೆಟ್‌ನಲ್ಲಿ 49ರ ಸರಾಸರಿ ಹೊಂದಿರುವ ಶಹಬಾಜ್ ಅಹ್ಮದ್ (Shahbaz Ahmed) ಅವರಂತಹ ಸಮರ್ಥ ಆಟಗಾರರನ್ನು ಕಡೆಗಣಿಸಿ, ಬದೋನಿಗೆ ಮಣೆ ಹಾಕಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಹಬಾಜ್ ಅವರು ವಾಷಿಂಗ್ಟನ್ ಸುಂದರ್ ಅವರಿಗೆ ನೇರ ಬದಲಿ ಆಟಗಾರರಾಗುತ್ತಿದ್ದರು ಎಂಬುದು ಕ್ರಿಕೆಟ್ ಪ್ರೇಮಿಗಳ ವಾದ

