‘ಮಗ್ಗುಲ ಮುಳ್ಳು’ ತಾಲಿಬಾನ್ ಜೊತೆ ಕೈಜೋಡಿಸಿ ಆದರ್ಶವಾದ ಮರೆತ ಭಾರತ
x

ಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಅವರ ಇತ್ತೀಚಿನ ಭಾರತ ಭೇಟಿಯ ಸಂದರ್ಭದಲ್ಲಿ ಅಫ್ಘನ್ ರಾಯಭಾರ ಕಚೇರಿಯಲ್ಲಿ ಸಿಖ್ ನಿಯೋಗವನ್ನು ಭೇಟಿ ಮಾಡುತ್ತಿರುವುದು.

‘ಮಗ್ಗುಲ ಮುಳ್ಳು’ ತಾಲಿಬಾನ್ ಜೊತೆ ಕೈಜೋಡಿಸಿ ಆದರ್ಶವಾದ ಮರೆತ ಭಾರತ

ದೇಶಭಕ್ತ ಟಿವಿ ನಿರೂಪಕರೆಂದು ಸೋಗು ಹಾಕುವ, ಅಬ್ಬರಿಸುವ-ಬೊಬ್ಬಿರಿಯುವ ರಾಜಕುಮಾರ-ರಾಜಕುಮಾರಿಯರ ಕಠೋರವಾದ ಅತಿಶಯೋಕ್ತಿಯಲ್ಲಿ ಈ ಎಲ್ಲ ಅವಲೋಕನಗಳು, ಅನಿಸಿಕೆಗಳು ಪ್ರತಿಧ್ವನಿಸಿದವು.


Click the Play button to hear this message in audio format

ಆಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಅವರ ಇತ್ತೀಚಿನ ಭಾರತ ಭೇಟಿಯ ವಿಚಾರದಲ್ಲಿ ಒಂದರ ಹಿಂದೆ ಒಂದರಂತೆ ಅನೇಕ ರಾಜತಾಂತ್ರಿಕ ವಿಶ್ಲೇಷಣೆಗಳು ಬರುತ್ತಿವೆ. ಅವರಲ್ಲಿ ಒಬ್ಬರು ನಾನು ಯಾವತ್ತೂ ಗೌರವಿಸುವ ಹಾಗೂ ನಿಯಮಿತವಾಗಿ ಮಾತುಕತೆ ನಡೆಸುವ ಭಾರತೀಯ ವಿದೇಶಾಂಗ ಸೇವೆಯ ನಿವೃತ್ತ ಅಧಿಕಾರಿಯ ಅವಲೋಕನ. ಅವರ ಮಾತುಗಳು ನನ್ನ ಹೃದಯವನ್ನು ಭಾರಗೊಳಿಸಿದೆ ಮತ್ತು ಮನಸ್ಸನ್ನು ದಗ್ಧಗೊಳಿಸಿದೆ.

ದೇಶಭಕ್ತ ಟಿವಿ ನಿರೂಪಕರೆಂದು ಸೋಗು ಹಾಕುವ, ಅಬ್ಬರಿಸುವ-ಬೊಬ್ಬಿರಿಯುವ ರಾಜಕುಮಾರ-ರಾಜಕುಮಾರಿಯರ ಕಠೋರವಾದ ಅತಿಶಯೋಕ್ತಿಯಲ್ಲಿ ಈ ಎಲ್ಲ ಅವಲೋಕನಗಳು, ಅನಿಸಿಕೆಗಳು ಪ್ರತಿಧ್ವನಿಸಿದವು. ಇದನ್ನು ಕೇಳುತ್ತ ಹೋದಂತೆ ಮನಸ್ಸು ಇನ್ನಷ್ಟು ದುಃಖದಿಂದ ಮುಚ್ಚಟೆಯಾಯಿತು. ಈ ಬಡಾಯಿಕೋರರನ್ನು ಯಾವ ರಾಜತಾಂತ್ರಿಕ ವಿಶ್ಲೇಷಕರ ಜೊತೆಗೂ ಸಮೀಕರಿಸಲು ಸಾಧ್ಯವಿಲ್ಲ. ಆದರೆ ಅಸಾಮಾನ್ಯ ಎಂಬಂತೆ ಅದೇ ಅಭಿಪ್ರಾಯವನ್ನು ಹೊಂದಿದ್ದಾರೆ, ಅದಕ್ಕೂ ಭಿನ್ನ ಕಾರಣಗಳಿವೆ ಮತ್ತು ಉದ್ದೇಶಗಳಿವೆ ಎನ್ನುವುದು ಬೇರೆ ಮಾತು.

ವ್ಯವಹಾರದ ಮುಂದೆ ಮಸುಕಾದ ಆದರ್ಶವಾದ

ಇಷ್ಟೆಲ್ಲ ನನ್ನ ಪ್ರಜ್ಞಾಪೂರ್ವಕ ಸಂಕಟದ ಹೊರತಾಗಿಯೂ ಮನಸ್ಸಿನಲ್ಲಿ ಗೊಂದಲದ ಛಾಯೆ ಆವರಿಸಿದೆ. ಯಾಕೆಂದರೆ ಹೀಗೆ ಉತ್ತಮವಾಗಿ ವಾದಿಸಿರುವ ಬರಹಗಳು ಮತ್ತು ಕ್ಯಾಮರಾ ಮುಂದಿನ ನಾಟಕೀಯ ಏಕಪಾತ್ರ ಅಭಿನಯವು ಸಂಪೂರ್ಣ ವ್ಯವಹಾರದಲ್ಲಿ ಮುಳುಗಿಹೋಗಿರುವುದು. ಇದು ನಿಸ್ಸಂದೇಹವಾಗಿ ಇಂದಿನ ಹಾದಿಯೇ ಹೌದು. ಯಾಕೆಂದರೆ ಜಗತ್ತು ಈಗ ಹೆಚ್ಚು ಹೆಚ್ಚು ಸ್ವಾರ್ಥಿಗಳಿಗೆ ಮುಖಾಮುಖಿಯಾಗುತ್ತಿದೆ. ಹೆಚ್ಚು ಹೆಚ್ಚು ನಾಯಕರು ತಮ್ಮ ತಮ್ಮ ರಾಷ್ಟ್ರಗಳಲ್ಲಿ ‘ಮೊದಲು ನಾನು’ ಎಂಬ ಹಪಾಹಪಿಗೆ ಬಿದ್ದು ಅಧಿಕಾರ ಹಿಡಿಯುತ್ತಿದ್ದಾರೆ.

ನೆರೆಹೊರೆಯ ದೇಶಗಳಲ್ಲಿ ಎದುರಾಗುತ್ತಿರುವ ಸವಾಲುಗಳಿಗೆ ಈ ತರ್ಕದ ಮಾರ್ಗವು ಸೂಕ್ತವೆಂದು ಕಾಣಿಸುತ್ತಿರುವುದರಿಂದ ಮನಸ್ಸಿನಲ್ಲಿ ಹುಟ್ಟಿಕೊಂಡ ವಿರೋಧಾಭಾಸವು ಇನ್ನಷ್ಟು ಮತ್ತಷ್ಟು ಗಾಢವಾಗುತ್ತಿದೆ.

ಆದರೆ ರಾಜತಂತ್ರಕ್ಕೆ ಸಂಬಂಧಿಸಿದ ಈ ವ್ಯಾವಹಾರಿಕ ನೀತಿಪಾಠಗಳು ಇಂದು ಜಟಿಲಾತಿಜಟಿಲ ಜಗತ್ತಿನಲ್ಲಿ ಎದುರಾಗುತ್ತಿರುವ ಏರಿಳಿತಗಳನ್ನು ನಿಭಾಯಿಸಲು ಮಾರ್ಗದರ್ಶಿ ಸೂತ್ರಗಳಾಗಿ ಬಿಟ್ಟರೆ ಗತಿ ಏನು ಎಂದು ಹೌಹಾರುತ್ತೇನೆ. ನಾನೂ ಮತ್ತು ನನ್ನಂತೆಯೇ ಇನ್ನೂ ಅಸಂಖ್ಯಾತ ಮಂದಿ ಜೀವನದ ಪರಮ ಉದ್ದೇಶವಾಗಿ ಸ್ವೀಕರಿಸಿದ ಆದರ್ಶವಾದವನ್ನು ನಾಲ್ಕು ದಶಕಗಳ ಹಿಂದೆ ನಾನು ವೃತ್ತಿ ಎಂದು ಸ್ವೀಕರಿಸಿದ ಪತ್ರಿಕೋದ್ಯಮಕ್ಕೆ ಧುಮುಕುವ ಹಾದಿಯಲ್ಲಿ ಎಲ್ಲಿ ಮತ್ತು ಹೇಗೆ ತ್ಯಜಿಸಲಿ?

ಕೇವಲ ಪತ್ರಿಕೋದ್ಯಮ-ಪತ್ರಕರ್ತರು ಮಾತ್ರ ಆದರ್ಶದ ಮಾರ್ಗ ಮತ್ತು ಆದರ್ಶವಾದಿಗಳು ಎಂದು ನಾನು ಹೇಳುವುದಿಲ್ಲ. ರಾಜಕೀಯವೂ ಸೇರಿದಂತೆ ಜೀವನದ ಮತ್ತು ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಾಕಷ್ಟು ಆದರ್ಶವಾದಿಗಳು ಇರುತ್ತಾರೆ. ಆದರೆ, ಎಲ್ಲ ಕಡೆಗಳಲ್ಲಿ ಮತ್ತು ಅವಿಶ್ರಾಂತವಾಗಿ ಸಮಸ್ಯೆಗಳು ಹಾಗೂ ಕಠಿಣ ಪರಿಸ್ಥಿತಿಗಳನ್ನು ಹೆಚ್ಚು ಪ್ರಾಯೋಗಿಕವಾಗಿ ಮತ್ತು ವಾಸ್ತವಿಕವಾಗಿ ನಿಭಾಯಿಸುತ್ತಿರುವುದು ಹೆಚ್ಚುತ್ತಿದೆ.

ಸಹಜವಾಗಿ ಆದರ್ಶವಾದಿಗಳು ಉಳಿದಿದ್ದಾರೆ. ಆದರೆ ಅವರು ಅಲ್ಪಸಂಖ್ಯಾತರಾಗಿದ್ದಾರೆ. ಯಾಕೆ ಹೀಗೆ ಆಗಿದ್ದಾರೆ ಎಂದರೆ ಅನೇಕರಿಗೆ ಈ ರೋಮ್ಯಾಂಟಿಸಮ್ ನಿಂದ ಯಶಸ್ಸು ಕಾಣಲು ಸಾಧ್ಯವಾಗದೆ ನಿರಾಶವಾದಕ್ಕೆ ಮರಳಿದ್ದರಿಂದ ಹೀಗಾಗಿದೆ.

ಮುಜುಗರ ತಂದ ಮುತ್ತಖಿ ಭೇಟಿ

ನನ್ನ ಹೃದಯ ಮತ್ತು ಮನಸ್ಸಿನ ನಡುವೆ ತೂಗಾಡುವ ಈ ವಿಭಿನ್ನ ಭಾವನೆಗಳನ್ನು ಕೆರಳಿದ್ದು ಅಮಿರ್ ಖಾನ್ ಮುತ್ತಖಿ ಅವರ ಭಾರತ ಭೇಟಿಯೇ ಹೌದಾದರೂ, ಇಲ್ಲಿಂದ ಮುಂದೆ ಸಾಗುವ ಮೊದಲು ಒಂದು ಸ್ಪಷ್ಟೀಕರಣ ನೀಡುವುದು ಅಗತ್ಯವಾಗಿದೆ. ಈ ಭಿನ್ನ ಅಭಿಪ್ರಾಯಗಳು ಆಫ್ಘಾನಿಸ್ತಾನದ ವಿದೇಶಾಂಗ ಸಚಿವರ ಮೊದಲ ಪತ್ರಿಕಾಗೋಷ್ಠಿಯಿಂದ ಮಹಿಳಾ ಪತ್ರಕರ್ತರನ್ನು ನಿರ್ಬಂಧಿಸುವುದಕ್ಕಿಂತಲೂ ಮೊದಲೇ ಇದ್ದವು.

ಮುತ್ತಖಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬ ಸಂಗತಿ ಬಯಲಾಗಿ ಮುಜುಗರ ಉಂಟಾಗುವುದಕ್ಕಿಂತ ಮೊದಲೂ ಈ ಭಾವನೆ ಇತ್ತು. ಅಫ್ಘನ್ ಗಣರಾಜ್ಯದ ಆ ರಾಯಭಾರ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಿಂದ ನಮ್ಮ ಮಹಿಳಾ ಸಹೋದ್ಯೋಗಿಗಳನ್ನು ದೂರವಿರಿಸಿದ್ದರಿಂದ ಈ ಭಾವನೆ ಇನ್ನಷ್ಟು ದೃಢವಾಯಿತು.

2021ರಿಂದಲೂ ತಾಲಿಬಾನಿಗಳು ಆಫ್ಘಾನಿಸ್ತಾನವನ್ನು ಆಳುತ್ತಿದೆ. ಇದರಲ್ಲಿ ಒಂದಷ್ಟು ಇತಿಹಾಸವು ಅಡಗಿದೆ. ಅದು 1990ರ ದಶಕದ ಮಧ್ಯ ಮತ್ತು ಅಂತ್ಯ ಭಾಗಕ್ಕೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಆ ಸಮಯದಲ್ಲಿ 2001ರ ಸೆ.9ರಂದು ನಡೆದ ಅಲ್-ಖೈದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಅಮೆರಿಕ ನೇತೃತ್ವದ ಸೇನೆಯಿಂದ ಪದಚ್ಯುತಗೊಳ್ಳುವ ತನಕವೂ ಅದು ಆಫ್ಗಾನಿಸ್ತಾನದ ಬಹುದೊಡ್ಡ ಪ್ರದೇಶವನ್ನು ನಿಯಂತ್ರಿಸುತ್ತಿತ್ತು.

ಅದಾಗಿ ಕಾಲು ಶತಮಾನವೇ ಕಳೆದಿದೆ. ಆದರೂ ತಾಲಿಬಾನ್ ಕಾಲಕ್ಕೆ ತಕ್ಕಂತೆ ಬದಲಾಗಿಲ್ಲ. ಭಾರತದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ರಾಜಕೀಯದ ಬೆಂಬಲಿಗರಲ್ಲಿ ಕೆಲವು ನಂಬಿಕೆಗಳು ಪ್ರತಿಧ್ವನಿಸಿದ್ದರೂ ಅದರ ಹಲವು ವಿಷಯಗಳ ಮೇಲಿನ ನಿಲುವು ನಮ್ಮ ಬಹಳಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಎಂದಿಗೂ ಆದರ್ಶವಾಗದ ತಾಲಿಬಾನ್

ಅದರಲ್ಲೂ ವಿಶೇಷವಾಗಿ ಹೇಳಬೇಕೆಂದರೆ ಅಲ್ಪಸಂಖ್ಯಾತ ಮಹಿಳೆಯರ ಬಗ್ಗೆ ಅದರ ಧೋರಣೆ ಮತ್ತು ಕಾಬುಲ್ ನಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗಲು ಅವಕಾಶ ನೀಡದೇ ಇರುವುದು ಇದರಲ್ಲಿ ಸೇರಿದೆ. ಅದರ ಪುರಾತನವಾದ ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನಗಳೂ ಬದಲಾಗಿಲ್ಲ.

ಭಾರತವು ಅನೇಕ ದೇಶಗಳ ಜೊತೆಗೆ ಸೌಹಾರ್ದಯುತವಾದ ಸಂಬಂಧಗಳನ್ನು ಕಾಯ್ದುಕೊಂಡು ಬಂದಿದೆ. ಇದರಲ್ಲಿ ಸಾಮಾಜಿಕ ಸಮಾನತೆಗೆ ಹೆಸರಾಗದ, ಪ್ರಜಾಸತ್ತಾತ್ಮಕ ವ್ಯವಸ್ಥೆಯಿಲ್ಲದ ಅಥವಾ ಪ್ರಜಾಪ್ರಭುತ್ವವೇ ಇಲ್ಲದ ಅನೇಕ ರಾಷ್ಟ್ರಗಳು ಇದರಲ್ಲಿ ಸೇರಿವೆ ಎನ್ನುವುದು ಬೇರೆ ಮಾತು. ಅದನ್ನು ಮೇಲೆ ಪ್ರಸ್ತಾಪಿಸಿದ ಸಾಲುಗಳಲ್ಲಿಯೂ ವ್ಯಾಖ್ಯಾನ ಮಾಡಲಾಗಿದೆ.

ಹಾಗಿದ್ದ ಮೇಲೆ, “ಅಫ್ಘನ್ ಆಡಳಿತವನ್ನು ಯಾಕೆ ದೂರವಿಡಬೇಕು?” ಎಂಬ ತರ್ಕ ಎದುರಾಗುತ್ತದೆ. ಆಯಕಟ್ಟಿನ ಭಾಗದಲ್ಲಿರುವ ಆ ರಾಷ್ಟ್ರದ ವ್ಯೂಹಾತ್ಮಕ ಪ್ರದೇಶವನ್ನು ಭಾರತದ ವಿರುದ್ಧ ಬಳಸಿಕೊಳ್ಳಬಹುದು ಎಂದು ವ್ಯವಹಾರ ಪ್ರವೃತ್ತಿಯವರು ವಾದವನ್ನು ಮುಂದಿಡಬಹುದು.

ಆದರೆ 1990ರ ದಶಕದ ಮಧ್ಯಭಾಗದಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತದ ಇನ್ನೂ ಹಲವಾರು ಭಾಗಗಳಲ್ಲಿ ದಂಗೆ ಎಬ್ಬಿಸಿದ ಹಲವಾರು ಭಯೋತ್ಪಾದಕ ಸಂಘಟನೆಗಳ ಜೊತೆ ತಾಲಿಬಾನ್ ನಂಟು ಹೊಂದಿತ್ತು. ಅದನ್ನಾದರೂ ಭಾರತ ನೆನಪಿಸಿಕೊಳ್ಳಬಾರದಿತ್ತೆ? ಭಾರತದ ಆಂತರಿಕ ಭದ್ರತೆಯನ್ನು ಹೇಗಾದರೂ ಮಾಡಿ ಹಾಳುಗೆಡಹಲು ತಾಲಿಬಾನ್ ಮಹತ್ವದ ಪಾತ್ರ ವಹಿಸಿದ್ದು ಸತ್ಯ ತಾನೇ?

ಇವೆಲ್ಲದರ ಹೊರತಾಗಿಯೂ ತಾಲಿಬಾನ್ ಬದಲಾಗಿಲ್ಲ. ಅದು ನಕಾರಾತ್ಮಕ ಉಲ್ಲೇಖದ ಭಾಗವಾಗಿಯೇ ಉಳಿದಿದೆ ಈಗಲೂ. ಸಂಘ ಪರಿವಾರವೂ ಕೂಡ ‘ಹಿಂದೂ ತಾಲಿಬಾನ್’ನ್ನು ಹೋಲುವ ಹಾದಿಯಲ್ಲಿದೆ ಮತ್ತು ಅದು ಭಾರತವನ್ನು ಕೂಡ ‘ಹಿಂದೂ ಪಾಕಿಸ್ತಾನ’ವಾಗುವ ಕಡೆಗೆ ತಳ್ಳುತ್ತಿದೆ ಎಂದು ಕೆಲವೊಮ್ಮೆ ವಾದಿಸಲಾಗುತ್ತಿದೆ. ಹಾಗಿರುವಾಗ ತಾಲಿಬಾನ್ ಅನ್ನು ‘ರೋಲ್ ಮಾಡೆಲ್’ ಅಥವಾ ಅದರ ಆಡಳಿತ ಮಹತ್ವಾಕಾಂಕ್ಷಿಯಾದುದೇನಲ್ಲ.

ಯಾಕೆ ಬೇಕು ನಿಮಗೆ ಅವರ ಸಂಗ?

ಪರಿಸ್ಥಿತಿ ಹೀಗಿರುವಾಗ ಎಸ್.ಜೈಶಂಕರ್ ಮತ್ತು ಇತರರ ತಂಡವು ಎಲ್ಲ ಅನುಮೋದನೆಯ ಬಳಿಕ ಮುತ್ತಖಿ ಅವರಿಗೆ ತುಂಬು ತೋಳಿನ ಸ್ವಾಗತ ನೀಡವುದರಲ್ಲಿ ಯಾವ ಅಭಿಮಾನವಿದೆ?

ಭಾರತದ ಅಧಿಕಾರಿಗಳು ಮಾತ್ರ ಅಂತಹ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ ಮತ್ತು ಮುತ್ತಖಿ ಅವರನ್ನು ‘ಆಫ್ಘಾನಿಸ್ತಾನದ ವಿದೇಶಾಂಗ ಸಚಿವರು’ ಎಂದು ಕರೆದರು. ಅಷ್ಟಕ್ಕೂ ಭಾರತ ತಾಲಿಬಾನ್ ಆಡಳಿತವನ್ನು ಯಾವಾಗ ಮಾನ್ಯಮಾಡಿದೆ? ಕನಿಷ್ಠ ಈ ಹೊತ್ತಿನಲ್ಲೂ ಅದು ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ.

ಹಾಗಾದರೆ, ಇತ್ತೀಚಿನ ಭೂತಕಾಲದಲ್ಲಿ ನಾವೆಲ್ಲ ಒಂದು ಜನ ಮತ್ತು ಒಂದು ರಾಷ್ಟ್ರವಾಗಿ ಕಟ್ಟುಬಿದ್ದ ಸಿದ್ಧಾಂತಗಳಿಂದ ಸ್ಪಷ್ಟವಾಗಿ ದೂರ ಸರಿದು ಸರ್ಕಾರ ಮತ್ತು ಸಾರ್ವಜನಿಕ ಅಭಿಪ್ರಾಯದ ಒಂದು ಮಹತ್ವದ ಭಾಗವು ತಾಲಿಬಾನ್ ಜೊತೆ ಸಖ್ಯ ಬೆಳೆಸಲು ಕಾರಣವಾದರೂ ಏನು?

ಅಬ್ಬರಿಸುವ ರಾಜಕುವರನೊಬ್ಬ ತನ್ನ ಏಕವ್ಯಕ್ತಿ ಪ್ರಹಸನದಲ್ಲಿ ಮಂಡಿಸಿದ ತರ್ಕವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿತ್ತು. ಅದನ್ನು ಸಂಕ್ಷಿಪ್ತಗೊಳಿಸಿದರೆ, “ದುಷ್ಮನ್ ಕಾ ದುಷ್ಮನ್ ಹಮಾರಾ ದೋಸ್ತ್” (ಶತ್ರುವಿನ ಶತ್ರು ನಮಗೆ ದೋಸ್ತ) ಎಂದು ಹೇಳಬಹುದು.

ಪಾಕಿಸ್ತಾನವೆಂಬ ರೋಗಕ್ಕೆ ಅಫ್ಘನ್ ಎಂಬ ಮದ್ದು

ಪ್ರಸಿದ್ಧ ವಿಶ್ಲೇಷಕರು ತಮ್ಮ ವಾದವನ್ನು ಹೆಚ್ಚು ತರ್ಕಬದ್ಧವಾಗಿ ಮಂಡಿಸುತ್ತಾರೆ. ಮುತ್ತಖಿ ಅವರ ಭೇಟಿಯನ್ನು ಭಾರತದ ಪಶ್ಚಿಮ ಭಾಗದ ನೆರೆಯ ರಾಷ್ಟ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡಬೇಕು. ತೀರಾ ನಿರ್ದಿಷ್ಟವಾಗಿ ಹೇಳುವುದಾದರೆ ಪಾಕಿಸ್ತಾನವು ಚೀನಾ ಮತ್ತು ಅಮೆರಿಕದ ಜೊತೆ ಏಕಕಾಲದಲ್ಲಿ ಹೊಂದಿರುವ ಆತ್ಮೀಯ ಸಂಬಂಧದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ಕಾಣಬೇಕು.

ಇದು ಭಾರತವು ಆ ಎರಡೂ ರಾಷ್ಟ್ರಗಳೊಂದಿಗೆ ಎದುರಿಸುತ್ತಿರುವ ಸಂಕಷ್ಟಗಳು ಮತ್ತು ಆಫ್ಘಾನಿಸ್ತಾನದಲ್ಲಿ ಡುರಾಂಡ್ ವಾಸ್ತವ ರೇಖೆಯ ಉದ್ದಕ್ಕೂ ಇರುವ ತನ್ನ ನೆರೆಹೊರೆಯವರ ಜೊತೆ ಪಾಕಿಸ್ತಾನದ ಹದಗೆಡುತ್ತಿರುವ ಸಂಬಂಧಗಳೊಂದಿಗೆ ತಾಳೆ ಹಾಕಿ ನೋಡಬೇಕಾಗುತ್ತದೆ.

ಮುತ್ತಖಿ ಅವರಿನ್ನೂ ಭಾರತದಲ್ಲಿ ಇರುವಾಗ ಮತ್ತು ಉತ್ತರ ಪ್ರದೇಶದ ದಿಯೋಬಂದ್ ನಲ್ಲಿರುವ ದಾರುಲ್ ಉಲುಮ್ ಸೆಮಿನರಿಯಿಂದ ಮೆಚ್ಚುಗೆಯನ್ನು ಸ್ವೀಕರಿಸುತ್ತಿದ್ದ ಹೊತ್ತಿನಲ್ಲಿ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ನಡುವಿನ ಘರ್ಷಣೆಯು ಇನ್ನಷ್ಟು ತಾರಕಕ್ಕೇರಿತ್ತು.

ಅಲಿಪ್ತ ಚಳವಳಿ ಎಂಬ ಹೆಮ್ಮೆ

ಭಾರತೀಯ ರಾಜತಂತ್ರದ ಇತಿಹಾಸದಲ್ಲಿ ನೆಹರೂ ಭಾರತವು ಅಲಿಪ್ತ ಚಳವಳಿ(ಶೀತಲ ಸಮರದ ಸಂದರ್ಭದಲ್ಲಿ ಹೊರಹೊಮ್ಮಿದ ದೇಶಗಳ ಒಕ್ಕೂಟ)ಯಲ್ಲಿ ನಾಯಕತ್ವದ ಸ್ಥಾನವನ್ನು ಪಡೆದುಕೊಂಡ ಪಾತ್ರವು ಇಂದಿಗೂ ಹೆಮ್ಮೆಯ ಸಂಗತಿಯಾಗಿದೆ. ಸ್ವಾತಂತ್ರ್ಯವನ್ನು ಗಳಿಸಿದ ಬಳಿಕ ಆರಂಭದಲ್ಲಿ ಎದುರಾದ ಸವಾಲುಗಳ ಸಾಲುಗಳನ್ನು ನಿಭಾಯಿಸಲು ಪಟ್ಟ ಪಾಡುಗಳ ಹೊರತಾಗಿಯೂ ಭಾರತವು ವಸಾಹತುಶಾಹಿ ಶಕ್ತಿಗಳ ವಿರುದ್ಧದ ರಾಷ್ಟ್ರೀಯ ಚಳವಳಿಗಳ ತತ್ವಬದ್ಧ ಬೆಂಬಲಿಗನಾಗಿ ತನ್ನನ್ನು ತಾನೇ ರೂಪಿಸಿಕೊಂಡ ಪರಿ ಅನನ್ಯವಾದುದು.

ದಕ್ಷಿಣ ಆಫ್ರಿಕದಲ್ಲಿ ವರ್ಣಭೇದ ನೀತಿಯ ವಿರುದ್ಧವೂ ಭಾರತ ಪ್ರಮುಖ ಧ್ವನಿಯಾಗಿತ್ತು. ಆ ದೇಶದ ವಿರುದ್ಧ ಆಡದಿರುವ ನಿರ್ಧಾರ ಕೈಗೊಂಡು, 1974ರ ಡೇವಿಸ್ ಕಪ್ ಫೈನಲ್ಸ್ ತ್ಯಜಿಸಿತು. ನಾವು ಆಟದ ಮೈದಾನಗಳಲ್ಲಿಯೂ ಹೆಚ್ಚು ವಾಸ್ತವದ ನೆಲೆಗಟ್ಟಿನಿಂದ ನಡೆದುಕೊಳ್ಳುತ್ತಿದ್ದೆವು.

ಈಗ ನಾವು ಹಣ ಗಳಿಸುವ ಸಾಧ್ಯತೆಯಿರುವ ಕಾರಣಕ್ಕೆ ಪಾಕಿಸ್ತಾನದ ವಿರುದ್ಧ ಪಂದ್ಯಗಳನ್ನು ಆಡುತ್ತೇವೆ. ಆದರೆ ಮೈದಾನದಲ್ಲಿ ಪರಸ್ಪರ ಕೈಕುಲಕದೇ ಕ್ರೀಡಾ ಮನೋಭಾವವನ್ನು ಉಲ್ಲಂಘಿಸುತ್ತೇವೆ. ಅದನ್ನು ರಾಷ್ಟ್ರೀಯತೆಯ ತೋಳ್ಬಲ ಎಂದು ಬಿಂಬಿಸುತ್ತೇವೆ.

ಟೆನಿಸ್ ಕೋರ್ಟ್ ಗಳನ್ನು ಪ್ರವೇಶಿಸಲು ನಿರಾಕರಿಸಿದ ಸರಿಸುಮಾರು ಒಂದೂವರೆ ದಶಕದ ಬಳಿಕ, ಅಂದರೆ 1989ರಲ್ಲಿ ಮ್ಯಾನ್ಮಾರ್ ಸೇನಾ ಕ್ರಮದ ವಿರುದ್ಧ ಭಾರತದಲ್ಲಿ ಸ್ಪಷ್ಟವಾದ ಸಾರ್ವಜನಿಕ ಆಕ್ರೋಶ ವ್ಯಕ್ತವಾಯಿತು. ತಮ್ಮ ಶಾಲಾ ಮತ್ತು ಕಾಲೇಜು ದಿನಗಳಲ್ಲಿ ತಾಯಿಯೊಂದಿಗೆ ದೆಹಲಿಯಲ್ಲಿ ವಾಸಿಸಿದ್ದರಿಂದ ಆಂಗ್ ಸಾನ್ ಸೂಕಿ ಅವರನ್ನು ‘ಭಾರತದ ಮಗಳು’ ಎಂದೇ ಪರಿಗಣಿಸಲಾಗಿತ್ತು. ಸೂಕಿ ಅವರಿಗೆ ವ್ಯಕ್ತವಾದ ಅಖಂಡ ಬೆಂಬಲದ ಕಾರಣದಿಂದಾಗಿ ರಾಜೀವ್ ಗಾಂಧಿ ಅವರು ಮ್ಯಾನ್ಮಾರ್ ಸೇನಾ ಆಡಳಿತದ ಜೊತೆ ಕಠಿಣವಾಗಿ ವ್ಯವಹರಿಸದೇ ಬೇರೆ ದಾರಿಯೇ ಇಲ್ಲದಾಯಿತು.

ಆಗ ವಿದೇಶಾಂಗ ವ್ಯವಹಾರ ಸಚಿವರಾಗಿದ್ದವರು ಪಿ. ವಿ.ನರಸಿಂಹ ರಾವ್. ಪ್ರಜಾಪ್ರಭುತ್ವ ಪರ ಚಳವಳಿಗೆ ಭಾರತವು ಆರ್ಥಿಕವಾಗಿ ನೆರವು ನೀಡಲಿದೆ ಎಂದು ಅವರು ಅಂದು ಘೋಷಿಸಿದರು. ಸೂಕಿ ಅವರನ್ನು ಸೇನಾ ಸರ್ಕಾರ ಬಂಧಿಸಿದ ಬಳಿಕ ಭಾರತದಲ್ಲಿ ಆಶ್ರಯ ಪಡೆದ ಯಾವುದೇ ಮ್ಯಾನ್ಮಾರ್ ನಿರಾಶ್ರಿತರನ್ನು ಹಿಂದಕ್ಕೆ ಕಳುಹಿಸುವುದಿಲ್ಲ ಎಂದು ತಿಳಿಸಲಾಯಿತು. ಆದರೆ ಇಂದು? ಆಡಳಿತ ನಿಲುವು ಸಂಪೂರ್ಣ ವ್ಯತಿರಿಕ್ತವಾಗಿದೆ. ಯಾಕೆಂದರೆ ಇಂದಿನ ಆಡಳಿವು ನಿರಾಶ್ರಿತರ ಬಿಕ್ಕಟ್ಟನ್ನು ಅದರ ಹಿಂದುತ್ವದ ಕಣ್ಣಿನಿಂದ ನೋಡುತ್ತದೆ.

ಆದರೆ ನಂತರ ವರ್ಷಗಳಲ್ಲಿ ಭಾರತವು ಹೆಚ್ಚು ವ್ಯಾವಹಾರಿಕ ನಿಲುವನ್ನು ಹೊಂದಿತು ಮತ್ತು ಸೇನೆಯ ಜೊತೆ ಕ್ರಮೇಣ ಸೌಹಾರ್ದಯುತ ಸಂಬಂಧವನ್ನು ಬೆಳೆಸಿಕೊಂಡು ಪರಸ್ಪರ ಲಾಭದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿತು.

ಇಂತಹುದೊಂದು ತಿರುವುದು 2014ಕ್ಕಿಂತ ಮೊದಲೇ ಸಂಭವಿಸಿತ್ತಾದರೂ ಈಗಿನ ಆಡಳಿತವು ತನ್ನ ನಿಲುವನ್ನು ಮತ್ತಷ್ಟು ಮುಂದುವರಿಸಿ 2021ರ ಫ್ರಬ್ರುವರಿಯಲ್ಲಿ ನಡೆದ ಮತ್ತೊಂದು ಸೇನಾ ದಂಗೆಯ ಬಳಿಕ ಮ್ಯಾನ್ಮಾರ್ ನಲ್ಲಿ ಮಾನವೀಯ ಮತ್ತು ಪ್ರಜಾಪ್ರಭುತ್ವದ ಬಿಕ್ಕಟ್ಟುಗಳ ಬಗ್ಗೆ ಕಳವಳ ವ್ಯಕ್ತಪಡಿಸುವುದಕ್ಕೆ ಬದಲಾಗಿ ಅದನ್ನು ತನ್ನ ಕಾರ್ಯತಂತ್ರದ ಹಿತಾಸಕ್ತಿಗಳನ್ನಾಗಿ ಆಯ್ಕೆಮಾಡಿಕೊಂಡಿತು.

ಭಾರತದಲ್ಲಿನ ಹಿಂದುತ್ವ-ಪ್ರೇರಿತ ಸರ್ಕಾರವು ‘ಸಾಮಾನ್ಯ’ ಪರಿಸ್ಥಿತಿಗಳನ್ನು ತಾಲಿಬಾನ್ ಮತ್ತು ಆಫ್ಘಾನಿಸ್ತಾನವನ್ನು ತನ್ನ ವಿಶ್ವದೃಷ್ಟಿಕೋನಕ್ಕೆ ತಕ್ಕಂತೆ ಮೂಲಭೂತ ವಿರೋಧಿ ಎಂದು ಪರಿಗಣಿಸಬೇಕು. ಹಿಂದುಯೇತರ ಅಥವಾ ಉದಾರವಾದಿ ದೃಷ್ಟಿಕೋನದಿಂದಲೂ ತಾಲಿಬಾನ್ ರಾಜಕೀಯವು ಭಾರತಕ್ಕೆ ಮಗ್ಗುಲಮುಳ್ಳೇ ಆಗಿದೆ.

ಒಗ್ಗಟ್ಟಿಗಿಂತ ಜನಪ್ರಿಯತೆಯೇ ಮುಖ್ಯ

ಆದರೆ ವ್ಯಾವಹಾರಿಕ ಚಿಂತನೆಯ ಸರ್ಕಾರ ತಾಲಿಬಾನ್-ನ್ನು ಪಾಕಿಸ್ತಾನಕ್ಕೆ ಪ್ರತಿಯಾಗಿ ಸಮತೋಲನಗೊಳಿಸುವ ಶಕ್ತಿಯಾಗಿ ಮತ್ತು ಆಫ್ಘಾನಿಸ್ತಾನವು ಆರ್ಥಿಕವಾಗಿ ಮತ್ತು ಕಾರ್ಯತಂತ್ರದ ದೃಷ್ಟಿಯಿಂದಲೂ ಚೀನಾದೊಂದಿಗೆ ಹೊಂದಿರುವ ನಂಟಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡಿದೆ.

ಜನಪ್ರಿಯತೆಯೇ ಮೇಲುಗೈಯಾಗುತ್ತಿರುವ ಈ ಕಾಲಘಟ್ಟದಲ್ಲಿ ಇತರ ರಾಷ್ಟ್ರಗಳ ಸಂಕಷ್ಟದಲ್ಲಿರುವ ಜನರ ಮೇಲಿನ ಒಗ್ಗಟ್ಟಿನ ಮನೋಭಾವವು ಜಾಗತಿಕವಾಗಿ ಅಷ್ಟೇನೂ ಪರಿಗಣನೆಗೆ ಬಂದಿಲ್ಲ.

‘ಮೇಕ್ ಅಮೆರಿಕ ಗ್ರೇಟ್ ಅಗೇನ್’ (MAGA) ಮನೋಭಾವ ಹುಟ್ಟಿಕೊಳ್ಳುವುದಕ್ಕೆ ಬಹಳಷ್ಟು ಹಿಂದೆಯೇ ಭಾರತವನ್ನು ಅದರ ಸುವರ್ಣ ಯುಗಕ್ಕೆ ಕರೆದೊಯ್ಯುವ ಪ್ರತಿಜ್ಞೆ ಮಾಡಲು ಹಿಂದುತ್ವ ಶಕ್ತಿಗಳು ಮುಂಚೂಣಿಯಲ್ಲಿದ್ದವು.

ಆದರ್ಶವಾದಗಳೆಲ್ಲ ಹಳಸಲಾಗುತ್ತ ಹೋದ ಹಾಗೆ ಸಂಶಯವಾದಿಗಳು ಉಬ್ಬಿಕೊಳ್ಳುತ್ತ ಹೋಗುತ್ತಾರೆ. ಕಳೆದ ಮೂರು ಸಂಸದೀಯ ಚುನಾವಣೆಗಳು ನೀಡಿದ ನಿರ್ದೆಶನಗಳನ್ನು ನೋಡಿದರೆ ಚುನಾವಣಾ ಜನಾದೇಶಗಳಲ್ಲಿ ಆಗಿರುವ ಬದಲಾವಣೆ ಕಿಂಚಿತ್ತು ಮಾತ್ರ. ಜನ ಭಿನ್ನವಾಗಿ ಮತಚಲಾಯಿಸಿದರೂ ಕೂಡ ವ್ಯಾವಹಾರಿಕೆಯ ವಿಚಾರದಲ್ಲಿ ಅದು ಬದಲಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ.

ಭಾರತದ ಮೂಲಭೂತವಾದ ಸಾಂವಿಧಾನಿಕ ಮೌಲ್ಯಗಳನ್ನು ಇನ್ನಷ್ಟು ಮತ್ತಷ್ಟು ಕತ್ತು ಹಿಸುಕುವುದನ್ನು ತಡೆಯಲು ಸಾಧ್ಯವಿಲ್ಲದಂತೆ ಕಾಣುತ್ತದೆ. ಆದರ್ಶವಾದ ತನ್ನ ಹಿಂದಿನ ಮಹತ್ವದ ಸ್ಥಾನವನ್ನು ಮರಳಿ ಪಡೆಯದ ಹೊರತು ತತ್ವಗಳನ್ನು ಮರುಸ್ಥಾಪಲು ಸಾಧ್ಯವಿಲ್ಲ.

ಚುನಾವಣಾ ಸಮೀಕರಣದಲ್ಲಿ ಯಾವುದೇ ಮಹತ್ವದ ಬದಲಾವಣೆಯಾಗದೇ ಹೋದರೆ ಒಂದು ವಿಭಾಗದ ಜನರು ಚುನಾವಣಾ ಬಹುಮತವನ್ನು ಹೊಂದಿಲ್ಲದೇ ಇದ್ದರೂ ಈಗಿನ ಸರ್ಕಾರದ ಶಾಶ್ವತ ಶಾಸಕಾಂಗ ಪ್ರಾಬಲ್ಯವನ್ನು ಖಚಿತಪಡಿಸಲು ಅವರಷ್ಟೇ ಸಾಕಾಗುತ್ತಾರೆ.

ಇಂತಹ ಪರಿಸ್ಥಿತಿಯು ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ವ್ಯಾವಹಾರಿಕತೆಯನ್ನು ಸಾರ್ವತ್ರಿಕಗೊಳಿಸುವ ಸಾಧ್ಯತೆ ನಿಚ್ಚಳವಾಗಿದೆ. ಎಲ್ಲ ಸಂಬಂಧಗಳನ್ನು ಕೂಡ ಕೇವಲ ವ್ಯವಹಾರದ ಆಧಾರದಲ್ಲಿಯೇ ನೋಡಲಾಗುತ್ತದೆ. ಬಹುತೇಕ ನಾಗರಿಕರು ಮತ್ತು ಕಿರಿಯರ ಭಾವನೆಗಳ ಗುಚ್ಛದಿಂದ ‘ಪರಾನುಭೂತಿ’ ಎನ್ನುವುದು ಮಾಯವಾಗುತ್ತದೆ. ಆಗ ಸಾಮೂಹಿಕ ಕ್ರಮ ಎನ್ನುವುದು ಕಲ್ಪಿತ ‘ಇತರರ’ ವಿರುದ್ಧವೇ ಆಗಿರುತ್ತದೆ.

Read More
Next Story