ಕೆಂಪುಕೋಟೆ ಬಳಿ ಸ್ಫೋಟದ ಹಿಂದೆ ಜೈಶ್ ಉಗ್ರರ ಕೈವಾಡ: ವಿಶ್ವಸಂಸ್ಥೆಯಿಂದ ಸ್ಫೋಟಕ ಮಾಹಿತಿ!
x
ದೆಗಲಿಯ ಕೆಂಪುಕೋಟೆ ಬಳಿ ಭೀಕರ ಕಾರು ಸ್ಫೋಟ

ಕೆಂಪುಕೋಟೆ ಬಳಿ ಸ್ಫೋಟದ ಹಿಂದೆ 'ಜೈಶ್ ಉಗ್ರರ ಕೈವಾಡ: ವಿಶ್ವಸಂಸ್ಥೆಯಿಂದ ಸ್ಫೋಟಕ ಮಾಹಿತಿ!

Red Fort Attack| ದೆಹಲಿಯ ಕೆಂಪುಕೋಟೆ ಬಳಿ ನಡೆದ ಭಯೋತ್ಪಾದಕ ದಾಳಿಗೆ ಜೈಶ್-ಎ-ಮೊಹಮ್ಮದ್ ಹೊಣೆ ಎಂದು ವಿಶ್ವಸಂಸ್ಥೆ ವರದಿ ನೀಡಿದೆ.


Click the Play button to hear this message in audio format

ಕಳೆದ ನವೆಂಬರ್‌ನಲ್ಲಿ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಭೀಕರ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಕೈವಾಡವಿತ್ತು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಇತ್ತೀಚಿನ ವರದಿ ಬಹಿರಂಗಪಡಿಸಿದೆ.

ಕೆಂಪುಕೋಟೆ ದಾಳಿ ಮತ್ತು 15 ಜನರ ಸಾವು

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಗಳ ಮೇಲ್ವಿಚಾರಣಾ ತಂಡ ಸಲ್ಲಿಸಿರುವ 37ನೇ ವರದಿಯ ಪ್ರಕಾರ, ನವೆಂಬರ್ 9 ರಂದು ದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಸಮೀಪದ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿದ್ದ ಕಾರೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿತ್ತು. ಈ ಹೈ-ಇಂಟೆನ್ಸಿಟಿ ಸ್ಫೋಟದಲ್ಲಿ ಸುಮಾರು 15 ಜನರು ಸಾವನ್ನಪ್ಪಿದ್ದರು ಮತ್ತು ಅನೇಕರು ಗಾಯಗೊಂಡಿದ್ದರು. ಈ ದಾಳಿಯ ಹೊಣೆಯನ್ನು ಜೈಶ್ ಸಂಘಟನೆ ಹೊತ್ತುಕೊಂಡಿದೆ ಎಂದು ವರದಿ ಉಲ್ಲೇಖಿಸಿದೆ.

ಮಹಿಳಾ ಉಗ್ರರ ವಿಭಾಗ 'ಜಮಾತ್ ಉಲ್-ಮುಮಿನಾತ್' ಸ್ಥಾಪನೆ

ವರದಿಯಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಅಲ್ವಿ ಬಗ್ಗೆಯೂ ಆತಂಕಕಾರಿ ವಿಷಯ ತಿಳಿಸಲಾಗಿದೆ. ಅಕ್ಟೋಬರ್ 8 ರಂದು ಅಜರ್ ಅಲ್ವಿ ಉಗ್ರಗಾಮಿ ದಾಳಿಗಳಿಗೆ ಬೆಂಬಲ ನೀಡುವ ಉದ್ದೇಶದಿಂದ 'ಜಮಾತ್ ಉಲ್-ಮುಮಿನಾತ್' ಎಂಬ ಮಹಿಳಾ ವಿಭಾಗವನ್ನು ಅಧಿಕೃತವಾಗಿ ಸ್ಥಾಪಿಸಿದ್ದಾನೆ ಎಂದು ವರದಿ ಹೇಳಿದೆ.

ವಿದೇಶಾಂಗ ಸಚಿವಾಲಯದ ಪ್ರತಿಕ್ರಿಯೆ

ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಫೆಬ್ರವರಿ 4, 2026 ರಂದು ಪ್ರಕಟವಾಗಿರುವ ಈ ವರದಿಯನ್ನು ನಾವು ಗಮನಿಸಿದ್ದೇವೆ. ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಭಾರತ ನೀಡಿರುವ ಆತಂಕಗಳು ಮತ್ತು ಮಾಹಿತಿಗಳನ್ನು ವಿಶ್ವಸಂಸ್ಥೆಯು ಗಂಭೀರವಾಗಿ ಪರಿಗಣಿಸಿರುವುದು ಸ್ವಾಗತಾರ್ಹ. ಭಯೋತ್ಪಾದನೆಯ ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಲು ಇದು ಸಹಕಾರಿ," ಎಂದು ತಿಳಿಸಿದ್ದಾರೆ.

ವರದಿಯಲ್ಲಿದೆ ಹಲವು ಮಹತ್ವದ ಸಂಗತಿ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರದಿಯು ಪ್ರಾದೇಶಿಕ ಭದ್ರತೆಗೆ ಸಂಬಂಧಿಸಿದಂತೆ ಹಲವಾರು ಆತಂಕಕಾರಿ ಅಂಶಗಳನ್ನು ಹಂಚಿಕೊಂಡಿದ್ದು, ಅಲ್-ಖೈದಾ (AQIS) ಸಂಘಟನೆಯು ಅಫ್ಘಾನಿಸ್ತಾನದ ಆಗ್ನೇಯ ಭಾಗದಲ್ಲಿ ಹಕ್ಕಾನಿ ನೆಟ್‌ವರ್ಕ್‌ನ ಭದ್ರ ಕೋಟೆಯಲ್ಲಿ ಸಕ್ರಿಯವಾಗಿರುವುದನ್ನು ದೃಢಪಡಿಸಿದೆ. ಈ ಸಂಘಟನೆಯು ಈಗ ಸ್ಥಳೀಯ ಚಟುವಟಿಕೆಗಳಿಗಿಂತ ಹೆಚ್ಚಾಗಿ ವಿದೇಶಿ ಕಾರ್ಯಾಚರಣೆಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸುತ್ತಿದೆ ಎಂಬುದು ಆತಂಕದ ವಿಷಯವಾಗಿದೆ.

ಇದರೊಂದಿಗೆ ಐಸಿಸ್-ಕೆ (ISIL-K) ಸಂಘಟನೆಯು ಅಫ್ಘಾನಿಸ್ತಾನದ ಉತ್ತರ ಭಾಗದಲ್ಲಿ ತನ್ನ ಜಾಲವನ್ನು ಬಲವಾಗಿ ವಿಸ್ತರಿಸುತ್ತಿದ್ದು, ಜಾಗತಿಕವಾಗಿ ನಡೆಯುತ್ತಿರುವ ಗಾಜಾ ಮತ್ತು ಇಸ್ರೇಲ್ ಸಂಘರ್ಷದಂತಹ ಸೂಕ್ಷ್ಮ ವಿಷಯಗಳನ್ನು ಬಳಸಿಕೊಂಡು ಹೊಸ ಸದಸ್ಯರ ನೇಮಕಾತಿ ಮತ್ತು ಹಣಕಾಸು ಸಂಗ್ರಹಣೆಗೆ ಸಕ್ರಿಯವಾಗಿ ಮುಂದಾಗಿದೆ. ಭಾರತದ ಭದ್ರತೆಗೆ ಸಂಬಂಧಿಸಿದಂತೆ ವರದಿಯು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಜುಲೈ 28 ರಂದು ನಡೆದ ದಾಳಿಯನ್ನು ಉಲ್ಲೇಖಿಸಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಭಯೋತ್ಪಾದಕರನ್ನು ಯಶಸ್ವಿಯಾಗಿ ಹತ್ಯೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

Read More
Next Story