ಆರೆಸ್ಸೆಸ್‌ಗೆ ರಾಜಕೀಯ ಹಂಬಲವಿಲ್ಲ; ಹಿಂದೂ ಸಮಾಜದ ಸಂಘಟನೆಯೇ ನಮ್ಮ ಗುರಿ: ಮೋಹನ್ ಭಾಗವತ್
x

ಆರ್‌ಎಸ್‌ಎಸ್ ವಿರುದ್ಧವಾಗಿ  ಕಾರ್ಯನಿರ್ವಹಿಸುವುದಿಲ್ಲ ಎಂದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.

ಆರೆಸ್ಸೆಸ್‌ಗೆ ರಾಜಕೀಯ ಹಂಬಲವಿಲ್ಲ; ಹಿಂದೂ ಸಮಾಜದ ಸಂಘಟನೆಯೇ ನಮ್ಮ ಗುರಿ: ಮೋಹನ್ ಭಾಗವತ್

ಹಿಂದೂ ಸಮಾಜವನ್ನು ಒಗ್ಗೂಡಿಸುವುದು ಮತ್ತು ವ್ಯಕ್ತಿ ನಿರ್ಮಾಣದ ಮೂಲಕ ಚಾರಿತ್ರ್ಯವಂತ ಸಮಾಜವನ್ನು ಕಟ್ಟುವುದೇ ಸಂಘದ ಏಕೈಕ ಉದ್ದೇಶ ಎಂದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.


Click the Play button to hear this message in audio format

ರಾಷ್ಟ್ರೀಯ ಸ್ವಯಂಸೇವಕ ಸಂಘ ಯಾವುದೇ ರಾಜಕೀಯ ಅಧಿಕಾರದ ಆಸೆಗಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ, ಸಂಪೂರ್ಣ ಹಿಂದೂ ಸಮಾಜವನ್ನು ಒಗ್ಗೂಡಿಸುವುದು ಮತ್ತು ವ್ಯಕ್ತಿ ನಿರ್ಮಾಣದ ಮೂಲಕ ಚಾರಿತ್ರ್ಯವಂತ ಸಮಾಜವನ್ನು ಕಟ್ಟುವುದೇ ಸಂಘದ ಏಕೈಕ ಉದ್ದೇಶ ಎಂದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.

ಶತಮಾನೋತ್ಸವದ ಸಂಭ್ರಮದಲ್ಲಿರುವ ಆರೆಸ್ಸೆಸ್, ಉತ್ತರ ಪ್ರದೇಶದ ಮೀರತ್‌ನ ಮಾಧವ್ ಕುಂಜ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 950ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಂಘದ ಗುರಿ ಅಧಿಕಾರವಲ್ಲ, ಸಂಘಟನೆ:

ಸುಮಾರು 50 ನಿಮಿಷಗಳ ಕಾಲ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ ಭಾಗವತ್, "ಸಂಘವು ಯಾವುದೇ ಗುಂಪಿನ ವಿರುದ್ಧ ಅಥವಾ ಸ್ಪರ್ಧೆಯಲ್ಲಿ ಕೆಲಸ ಮಾಡುತ್ತಿಲ್ಲ. ನಮ್ಮದು ಅಧಿಕಾರ ರಾಜಕಾರಣವಲ್ಲ. ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಚಾರಿತ್ರ್ಯ ನಿರ್ಮಾಣ ಮಾಡುವ ಮೂಲಕ ರಾಷ್ಟ್ರವನ್ನು ಬಲಪಡಿಸುವುದೇ ನಮ್ಮ ಆದ್ಯತೆ," ಎಂದು ಹೇಳಿದರು.

ವೈವಿಧ್ಯತೆಯಲ್ಲಿ ಏಕತೆಯೇ ಹಿಂದೂ ಧರ್ಮ

ಭಾರತದ ಪರಿಕಲ್ಪನೆಯ ಬಗ್ಗೆ ವಿವರಿಸಿದ ಅವರು, "ನಮ್ಮ ದೇಶ ಕೇವಲ ಭೌಗೋಳಿಕ ಗಡಿಗಳಿಗೆ ಸೀಮಿತವಾಗಿಲ್ಲ. ರಾಮ, ಕೃಷ್ಣ, ಬುದ್ಧ, ಮಹಾವೀರ, ಸ್ವಾಮಿ ವಿವೇಕಾನಂದ, ದಯಾನಂದ ಸರಸ್ವತಿ ಮತ್ತು ಮಹಾತ್ಮ ಗಾಂಧಿಯವರ ಪರಂಪರೆಯಿಂದ ಈ ದೇಶ ಸ್ಫೂರ್ತಿ ಪಡೆದಿದೆ. 'ಹಿಂದೂ' ಎಂಬ ಪದವು ಜಾತಿಯನ್ನು ಸೂಚಿಸುವುದಿಲ್ಲ, ಬದಲಾಗಿ ವೈವಿಧ್ಯತೆಯಲ್ಲಿನ ಏಕತೆಯನ್ನು ಸಾರುತ್ತದೆ. ಪೂಜಾ ವಿಧಾನಗಳು ಬೇರೆ ಬೇರೆಯಿರಬಹುದು, ಆದರೆ ನಮ್ಮ ಸಾಂಸ್ಕೃತಿಕ ಬುನಾದಿ ಒಂದೇ," ಎಂದು ಪ್ರತಿಪಾದಿಸಿದರು.

ಕ್ರೀಡಾಪಟುಗಳಿಗೆ ಕರೆ:

ಕ್ರೀಡೆಯು ಜನರನ್ನು ಒಗ್ಗೂಡಿಸುವ ಪ್ರಬಲ ಮಾಧ್ಯಮ ಎಂದು ಬಣ್ಣಿಸಿದ ಭಾಗವತ್, ರಾಷ್ಟ್ರ ನಿರ್ಮಾಣವು ಕೇವಲ ಒಂದು ಸಂಘಟನೆಯ ಜವಾಬ್ದಾರಿಯಲ್ಲ, ಅದು ಇಡೀ ಸಮಾಜದ ಹೊಣೆ ಎಂದು ತಿಳಿಸಿದರು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೀರತ್‌ನ ಪಾತ್ರವನ್ನು ಸ್ಮರಿಸಿದ ಅವರು, ಆ ಇತಿಹಾಸವೇ ಮುಂದೆ 1925ರಲ್ಲಿ ಕೇಶವ ಬಲಿರಾಮ್ ಹೆಡ್ಗೇವಾರ್ ಅವರು ಆರೆಸ್ಸೆಸ್ ಸ್ಥಾಪಿಸಲು ಪ್ರೇರಣೆಯಾಯಿತು ಎಂದರು.

ಕಾರ್ಯಕ್ರಮದಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಕುಸ್ತಿಪಟು ಅಲ್ಕಾ ತೋಮರ್, ಪ್ಯಾರಾ ಕ್ರಿಕೆಟಿಗ ಸೂರ್ಯ ಪ್ರತಾಪ್ ಮಿಶ್ರಾ ಸೇರಿದಂತೆ ಹಲವು ಗಣ್ಯ ಕ್ರೀಡಾಪಟುಗಳು ಭಾಗವಹಿಸಿದ್ದರು.

Read More
Next Story