ಈ ಹಳ್ಳಿಯಲ್ಲಿ ಅವಾಚ್ಯ ಶಬ್ಧಗಳಿಂದ ಬೈದುಕೊಳ್ಳುವಂತಿಲ್ಲ- ತಪ್ಪಿದ್ರೆ  500 ರೂ. ದಂಡ ಅಥವಾ ಕಸ ಗುಡಿಸುವ ಶಿಕ್ಷೆ!
x
ಮಧ್ಯಪ್ರದೇಶದ ಬೋರ್ಸರ್ ಗ್ರಾಮ ಒಂದು ವಿಶಿಷ್ಟ ನಿಯಮವನ್ನು ಜಾರಿಗೆ ತರಲಾಗಿದೆ.

ಈ ಹಳ್ಳಿಯಲ್ಲಿ ಅವಾಚ್ಯ ಶಬ್ಧಗಳಿಂದ ಬೈದುಕೊಳ್ಳುವಂತಿಲ್ಲ- ತಪ್ಪಿದ್ರೆ 500 ರೂ. ದಂಡ ಅಥವಾ ಕಸ ಗುಡಿಸುವ ಶಿಕ್ಷೆ!

ಕೆಟ್ಟ ಭಾಷೆ ಬಳಸುವವರನ್ನು ತಿದ್ದಲು ಮಧ್ಯಪ್ರದೇಶದ ಹಳ್ಳಿಯೊಂದು ವಿಶಿಷ್ಟ ದಂಡದ ನಿಯಮ ಜಾರಿಗೆ ತಂದಿದೆ.


Click the Play button to hear this message in audio format

ಸಾರ್ವಜನಿಕವಾಗಿ ಕೆಟ್ಟ ಭಾಷೆ ಅಥವಾ ಅಶ್ಲೀಲ ಪದಗಳನ್ನು ಬಳಸಿ ಬೈಯುವ ಅಭ್ಯಾಸಕ್ಕೆ ಬ್ರೇಕ್ ಹಾಕಲು ಮಧ್ಯಪ್ರದೇಶದ ಬರ್ಹಾನ್‌ಪುರ ಜಿಲ್ಲೆಯ ಬೋರ್ಸರ್ ಗ್ರಾಮ ಒಂದು ವಿಶಿಷ್ಟ ನಿಯಮವನ್ನು ಜಾರಿಗೆ ತಂದಿದೆ. ಗ್ರಾಮದಲ್ಲಿ ಯಾರೇ ಆದರೂ ಬೈಗುಳ ಬಳಸಿದರೆ ಅವರಿಗೆ 500 ರೂಪಾಯಿ ದಂಡ ಅಥವಾ ಒಂದು ಗಂಟೆ ಕಾಲ ಕಡ್ಡಾಯವಾಗಿ ಗ್ರಾಮ ಸ್ವಚ್ಛತೆ ಮಾಡುವ ಶಿಕ್ಷೆಯನ್ನು ವಿಧಿಸಲಾಗುತ್ತಿದೆ.

ಏನಿದು ಹೊಸ ನಿಯಮ?

ಗ್ರಾಮ ಪಂಚಾಯತ್ ಸರ್ವಾನುಮತದಿಂದ ಈ ನಿರ್ಧಾರವನ್ನು ಕೈಗೊಂಡಿದ್ದು, ಗ್ರಾಮದಾದ್ಯಂತ ಈ ಕುರಿತು ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಪರಸ್ಪರ ಗೌರವಯುತವಾಗಿ ವರ್ತಿಸುವುದನ್ನು ಉತ್ತೇಜಿಸಲು ಮತ್ತು ಮಾತಿನ ಚಕಮಕಿಯಿಂದ ಉಂಟಾಗುವ ಗಲಾಟೆಗಳನ್ನು ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಬದಲಾಗುತ್ತಿದೆ ಗ್ರಾಮದ ವಾತಾವರಣ:

ಉಪ ಸರಪಂಚ್ ವಿನೋದ್ ಶಿಂದೆ ಈ ಬಗ್ಗೆ ಮಾಹಿತಿ ನೀಡಿ, "ಹಿಂದೆ ಮಕ್ಕಳು ಮತ್ತು ದೊಡ್ಡವರು ಎಂಬ ವ್ಯತ್ಯಾಸವಿಲ್ಲದೆ ಎಲ್ಲರೂ ತಾಯಿ-ತಂಗಿಯರನ್ನು ಗುರಿಯಾಗಿಸಿ ಅಶ್ಲೀಲ ಪದಗಳನ್ನು ಬಳಸುತ್ತಿದ್ದರು. ಇದನ್ನು ತಡೆಯಲು ಈ ನಿಯಮ ಜಾರಿಗೆ ತರಲಾಗಿದೆ. ಈಗ ಜನರು ಬೈಯುವ ಮೊದಲು ಎಚ್ಚರಿಕೆ ವಹಿಸುತ್ತಿದ್ದಾರೆ," ಎಂದು ತಿಳಿಸಿದ್ದಾರೆ.

ಯುವಕನ ಪರಿಕಲ್ಪನೆಗೆ ಪಂಚಾಯತ್ ಸಾಥ್

ಈ ವಿಶಿಷ್ಟ ಅಭಿಯಾನದ ಹಿಂದೆ ಅಶ್ವಿನ್ ಪಾಟೀಲ್ ಎಂಬ ಯುವಕನ ಪರಿಕಲ್ಪನೆಯಿದೆ. 12-13 ವರ್ಷದ ಸಣ್ಣ ಮಕ್ಕಳು ಕೂಡ ಸಹಜವಾಗಿ ಕೆಟ್ಟ ಪದಗಳನ್ನು ಬಳಸುತ್ತಿರುವುದನ್ನು ಕಂಡು ಆತಂಕಗೊಂಡ ಅಶ್ವಿನ್, ಈ ಪ್ರಸ್ತಾವನೆಯನ್ನು ಪಂಚಾಯತ್ ಮುಂದೆ ಇಟ್ಟಿದ್ದರು. ಇದನ್ನು ಒಪ್ಪಿದ ಸರಪಂಚ್ ಮತ್ತು ಉಪ ಸರಪಂಚ್, ಅಧಿಕೃತವಾಗಿ ಸುತ್ತೋಲೆ ಹೊರಡಿಸಿ 'ಬೈಗುಳ ಮುಕ್ತ ಗ್ರಾಮ' ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಸಾರ್ವಜನಿಕರ ಪ್ರತಿಕ್ರಿಯೆ

"ದಂಡದ ಭಯ ಇರುವುದರಿಂದ ಜನರು ಈಗ ಕೆಟ್ಟ ಭಾಷೆ ಬಳಸಲು ಹಿಂಜರಿಯುತ್ತಿದ್ದಾರೆ. ಇದರಿಂದ ಹಳ್ಳಿಯ ಪರಿಸರ ಸುಧಾರಿಸಿದೆ," ಎಂದು ಸ್ಥಳೀಯ ನಿವಾಸಿ ಜಯಶ್ರೀ ಸಂತಸ ವ್ಯಕ್ತಪಡಿಸಿದ್ದಾರೆ. ಈ ನಿಯಮ ಜಾರಿಯಾದ ಮೇಲೆ ಗ್ರಾಮದಲ್ಲಿ ಜಗಳಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದ್ದು, ನೆರೆಯ ಹಳ್ಳಿಗಳೂ ಈ ಮಾದರಿಯನ್ನು ಶ್ಲಾಘಿಸುತ್ತಿವೆ.

Read More
Next Story