ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿ ಮರುನಿರ್ಮಾಣಕ್ಕೆ ಸಿಕ್ಕೇ ಬಿಡ್ತು ಚಾಲನೆ!
x
'ಬಾಬ್ರಿ ಮಸೀದಿ'ಯ ಪ್ರತಿರೂಪದ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ.

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿ ಮರುನಿರ್ಮಾಣಕ್ಕೆ ಸಿಕ್ಕೇ ಬಿಡ್ತು ಚಾಲನೆ!

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಬಾಬ್ರಿ ಮಸೀದಿಯ ಪ್ರತಿರೂಪ ನಿರ್ಮಾಣಕ್ಕೆ ಹುಮಾಯೂನ್ ಕಬೀರ್ ಚಾಲನೆ ನೀಡಿದ್ದಾರೆ. 2026ರ ಚುನಾವಣೆಗೆ ಹೊಸ ಪಕ್ಷದ ಘೋಷಣೆ ಮಾಡಿರುವ ಅವರು, ಟಿಎಂಸಿ ಮತ್ತು ಬಿಜೆಪಿಗೆ ನೀಡಿದ ಎಚ್ಚರಿಕೆ ಏನು?


ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಹೊಸದೊಂದು ಸಂಚಲನ ಸೃಷ್ಟಿಯಾಗಿದೆ. ಅಮಾನತುಗೊಂಡಿರುವ ಟಿಎಂಸಿ ನಾಯಕ ಹುಮಾಯೂನ್ ಕಬೀರ್ ಮುರ್ಷಿದಾಬಾದ್‌ನಲ್ಲಿ ಅಯೋಧ್ಯೆಯ 'ಬಾಬ್ರಿ ಮಸೀದಿ'ಯ ಪ್ರತಿರೂಪದ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.

ಈ ಯೋಜನೆಯು ಕೇವಲ ಧಾರ್ಮಿಕ ಕಟ್ಟಡ ನಿರ್ಮಾಣಕ್ಕೆ ಸೀಮಿತವಾಗಿಲ್ಲ; ಇದು ಮುಂಬರುವ 2026ರ ಬಂಗಾಳ ವಿಧಾನಸಭೆ ಚುನಾವಣೆಯ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುವ ಮುನ್ಸೂಚನೆ ನೀಡಿದೆ. ಮಮತಾ ಬ್ಯಾನರ್ಜಿ ವಿರುದ್ಧ ತೊಡೆತಟ್ಟಿ ಹೊಸ ಪಕ್ಷ ಕಟ್ಟಿರುವ ಕಬೀರ್ ಅವರ ಈ ನಡೆ ಈಗ ಟಿಎಂಸಿ ಮತ್ತು ಬಿಜೆಪಿ ನಡುವೆ ದೊಡ್ಡ ಮಟ್ಟದ ವಾಕ್ಸಮರಕ್ಕೆ ಕಾರಣವಾಗಿದೆ.

ತೃಣಮೂಲ ಕಾಂಗ್ರೆಸ್‌ನಿಂದ (TMC) ಅಮಾನತುಗೊಂಡಿರುವ ನಾಯಕ ಹುಮಾಯೂನ್ ಕಬೀರ್, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಾಬ್ರಿ ಮಸೀದಿಯ ಪ್ರತಿರೂಪವನ್ನು ನಿರ್ಮಿಸುವ ಕಾಮಗಾರಿಗೆ ಬುಧವಾರ ಚಾಲನೆ ನೀಡಿದ್ದಾರೆ. ಅಯೋಧ್ಯೆಯಲ್ಲಿ 1992ರಲ್ಲಿ ಧ್ವಂಸಗೊಂಡಿದ್ದ 16ನೇ ಶತಮಾನದ ಐತಿಹಾಸಿಕ ಮಸೀದಿಯ ಮಾದರಿಯಲ್ಲೇ ಇದನ್ನು ನಿರ್ಮಿಸಲಾಗುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಘೋಷಿಸಿದ್ದಾರೆ.

ರಾಜಕೀಯ ಸಂಘರ್ಷ ಮತ್ತು ಟಿಎಂಸಿ ಕ್ರಮ

ಕಬೀರ್ ಅವರ ಈ ಘೋಷಣೆಯು ಬಂಗಾಳದ ರಾಜಕೀಯದಲ್ಲಿ 'ಮಂದಿರ ವರ್ಸಸ್ ಮಸೀದಿ' ಎಂಬ ಚರ್ಚೆಗೆ ನಾಂದಿ ಹಾಡಿದೆ. ಈ ವಿಷಯವು ಕೋಮು ಸೌಹಾರ್ದತೆಗೆ ಧಕ್ಕೆ ತರಬಹುದು ಎಂಬ ಆತಂಕದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವು ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕಬೀರ್ ಅವರು 'ಜನತಾ ಉನ್ನಯನ್ ಪಾರ್ಟಿ' (JUP) ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ.

2026ರ ಚುನಾವಣೆ ಮತ್ತು ಸವಾಲು: 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ಒಟ್ಟು 249 ಕ್ಷೇತ್ರಗಳ ಪೈಕಿ 135 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಕಬೀರ್ ಘೋಷಿಸಿದ್ದಾರೆ. "ಮಮತಾ ಬ್ಯಾನರ್ಜಿ ಅವರು ಮೊದಲು ಇದ್ದಂತಿಲ್ಲ, ಅವರ ನಾಯಕತ್ವ ಬದಲಾಗಿದೆ" ಎಂದು ಟೀಕಿಸಿರುವ ಅವರು, ಮುಂಬರುವ ಚುನಾವಣೆಯಲ್ಲಿ ಟಿಎಂಸಿಯನ್ನು ಸೋಲಿಸುವುದಾಗಿ ಸವಾಲು ಹಾಕಿದ್ದಾರೆ.

ಬಿಜೆಪಿಯ ಆರೋಪ: ಈ ಬೆಳವಣಿಗೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಇದು ರಾಜ್ಯದಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸುವ ಪ್ರಯತ್ನ ಎಂದು ಬಿಜೆಪಿ ಕರೆದಿದೆ. ಅಲ್ಲದೆ, ಹುಮಾಯೂನ್ ಕಬೀರ್ ಮತ್ತು ಟಿಎಂಸಿ ನಡುವಿನ ಈ ಕಿತ್ತಾಟವು ಕೇವಲ 'ನಾಟಕ'ವಾಗಿದ್ದು, ಮುಸ್ಲಿಂ ಮತಗಳನ್ನು ವಿಭಜಿಸಲು ಮಮತಾ ಬ್ಯಾನರ್ಜಿ ಅವರು ರೂಪಿಸಿರುವ ಗುಪ್ತ ತಂತ್ರ ಇದಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಆರೋಪಿಸಿದ್ದಾರೆ.

ಹುಮಾಯೂನ್ ಕಬೀರ್ ಅವರ ಈ ನಡೆ ಧಾರ್ಮಿಕ ಭಾವನೆಗಳನ್ನು ಬಳಸಿಕೊಂಡು ಹೊಸ ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ಪ್ರಯತ್ನದಂತೆ ಕಾಣುತ್ತಿದೆ. ಮಸೀದಿ ನಿರ್ಮಾಣದ ಜೊತೆಗೆ ಚುನಾವಣಾ ಕಣಕ್ಕಿಳಿಯುವ ಅವರ ನಿರ್ಧಾರವು 2026ರ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಮತ್ತು ಬಿಜೆಪಿ ಎರಡಕ್ಕೂ ಹೊಸ ಸವಾಲನ್ನು ಒಡ್ಡಲಿದೆ.

Read More
Next Story