ಆಳಂದ, ಮಹದೇವಪುರ, ಚಿಲುಮೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ; ಪ್ರಿಯಾಂಕ್‌ ಖರ್ಗೆ ಶಪಥ
x

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ

ಆಳಂದ, ಮಹದೇವಪುರ, ಚಿಲುಮೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ; ಪ್ರಿಯಾಂಕ್‌ ಖರ್ಗೆ ಶಪಥ

ಚುನಾವಣಾ ಆಯೋಗವು ಒಂದು ಪಕ್ಷದ ವಕ್ತಾರರಂತೆ ವರ್ತಿಸುತ್ತಿದೆ ಎಂದು ಪ್ರಿಯಾಂಕ್‌ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಆಳಂದ, ಮಹದೇವಪುರ ಮತ್ತು ಚಿಲುಮೆ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.


ರಾಜ್ಯದಲ್ಲಿ ನಡೆದಿರುವ 'ಮತಗಳ್ಳತನ' ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕಾಣಿಸಲು ಸರ್ಕಾರ ನಿರ್ಧರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರಿನ ವಿಧಾನಸಭೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಪ್ರತಿ ವೋಟಿಗೆ 80 ರೂ.ನೀಡಲಾಗಿದೆ. ಈ ಬಗ್ಗೆ ಹೊಸ ಸಾಕ್ಷ್ಯಗಳನ್ನು ಎಸ್‌ಐಟಿ ಅಧಿಕಾರಿಗಳು ಕಲೆ ಹಾಕಿದ್ದಾರೆ. ಈ ಮತಗಳ್ಳತನದ ಹಿಂದೆ ಬಿಜೆಪಿಯ ಸ್ಥಳೀಯ ನಾಯಕರು ಹಾಗೂ ಖಾಸಗಿ ಡೇಟಾ ಸೆಂಟರ್‌ ಕೈವಾಡವಿರುವುದು ಎಸ್ಐಟಿ ತನಿಖೆಯಿಂದ ತಿಳಿದುಬಂದಿರುವ ಮಾಹಿತಿ ಹೊರಬಿದ್ದಿದೆ. ರಾಹುಲ್ ಗಾಂಧಿ ಮತಗಳ್ಳತನದ ಬಗ್ಗೆ ಮಾತನಾಡಿದಾಗ ಅಫಿಡವಿಟ್ ಕೊಡಿ ಎನ್ನುವ ಚುನಾವಣಾ ಆಯೋಗವು, ಈಗ ಸಾಕ್ಷ್ಯಗಳು ಸಿಕ್ಕಿರುವಾಗ ಏನು ಹೇಳುತ್ತದೆ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ಚುನಾವಣಾ ಆಯೋಗವು ಒಂದು ಪಕ್ಷದ ವಕ್ತಾರರಂತೆ ವರ್ತಿಸುತ್ತಿದೆ. ಆಳಂದ, ಮಹದೇವಪುರ ಮತ್ತು ಚಿಲುಮೆ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಕುರಿತು ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯತೀಂದ್ರ ಅವರು ಸತೀಶ್ ಜಾರಕಿಹೊಳಿ ಸಿಎಂ ಆಗುವ ಅರ್ಹತೆ ಇದೆ ಎಂದು ಹೇಳಿದ್ದನ್ನು ಸಮರ್ಥಿಸಿದ ಪ್ರಿಯಾಂಕ್ ಖರ್ಗೆ,"ಅದು ಐಡಿಯಾಲಜಿಕಲ್ ಹೇಳಿಕೆ. ಅದರಲ್ಲಿ ತಪ್ಪೇನಿದೆ?, ಸತೀಶ್ ಜಾರಕಿಹೊಳಿ ಅವರು ವೈಚಾರಿಕತೆ, ಮೂಢನಂಬಿಕೆ ನಿವಾರಣೆಗೆ ಕೆಲಸ ಮಾಡುತ್ತಿರುವ ನಾಯಕರು ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ನಾಯಕತ್ವದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ" ಎಂದು ಹೇಳಿ ಆಕಾಶದತ್ತ ಕೈತೋರಿಸುವ ಮೂಲಕ ಈ ವಿಚಾರವನ್ನು ಮುಕ್ತಾಯಗೊಳಿಸಿದರು. ಸಿಎಂ ಬದಲಾವಣೆ ಕುರಿತ ಯಾವುದೇ ಊಹಾಪೋಹಗಳಿಗೆ ಸರ್ಕಾರದಲ್ಲಿ ಸ್ಥಾನವಿಲ್ಲ ಎಂದು ತಿಳಿಸಿದ್ದಾರೆ.

Read More
Next Story