ಲಿಂಗರಾಜಪುರ ನಿವಾಸಿಗಳಿಗೆ ಗುಡ್ ನ್ಯೂಸ್! ಕಲುಷಿತ ನೀರಿನಿಂದ ಕೊನೆಗೂ ಮುಕ್ತಿ
x

ಲಿಂಗರಾಜಪುರ ನಿವಾಸಿಗಳಿಗೆ ಗುಡ್ ನ್ಯೂಸ್! ಕಲುಷಿತ ನೀರಿನಿಂದ ಕೊನೆಗೂ ಮುಕ್ತಿ

ಲಿಂಗರಾಜಪುರದ ಕೆಎಸ್‌ಎಫ್‌ಸಿ ಲೇಔಟ್‌ನಲ್ಲಿ ಕಲುಷಿತ ನೀರು ಕುಡಿದು ಜನ ಅನಾರೋಗ್ಯಕ್ಕೆ ಈಡಾಗುವ ಭೀತಿಯಲ್ಲಿದ್ದರು. ಜಲಮಂಡಳಿ ಅಧಿಕಾರಿಗಳು ಹಗಲಿರುಳು ಶ್ರಮಿಸಿ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಿದರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.


Click the Play button to hear this message in audio format

ಕಳೆದ ಹಲವು ದಿನಗಳಿಂದ ಲಿಂಗರಾಜಪುರದ ಕೆಎಸ್‌ಎಫ್‌ಸಿ ಲೇಔಟ್ ನಿವಾಸಿಗಳನ್ನು ಹೈರಾಣಾಗಿಸಿದ್ದ ಕಲುಷಿತ ನೀರಿನ ಸಮಸ್ಯೆಗೆ ಅಂತಿಮವಾಗಿ ತೆರೆ ಬಿದ್ದಿದೆ. ಬೆಂಗಳೂರು ಜಲಮಂಡಳಿ (BWSSB) ಅಧಿಕಾರಿಗಳ ಸತತ ಪ್ರಯತ್ನ ಮತ್ತು ಆಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ ಕಲುಷಿತ ನೀರು ಪೂರೈಕೆಯಾಗುತ್ತಿದ್ದ ಮೂಲವನ್ನು ಪತ್ತೆಹಚ್ಚಿ ಸರಿಪಡಿಸಲಾಗಿದೆ.

ಸವಾಲಾಗಿದ್ದ ಸಮಸ್ಯೆ

ಲೇಔಟ್‌ನ ಮನೆಗಳಿಗೆ ಪೂರೈಕೆಯಾಗುತ್ತಿದ್ದ ಕುಡಿಯುವ ನೀರಿನಲ್ಲಿ ಒಳಚರಂಡಿ ನೀರು ಮಿಶ್ರಣವಾಗುತ್ತಿತ್ತು. ಈ ಸಮಸ್ಯೆಯನ್ನು ಪತ್ತೆಹಚ್ಚಲು ಜಲಮಂಡಳಿ ಅಧಿಕಾರಿಗಳು ಹಲವು ದಿನಗಳಿಂದ ಹರಸಾಹಸ ಪಟ್ಟಿದ್ದರು.

ಆಧುನಿಕ ತಂತ್ರಜ್ಞಾನದ ಬಳಕೆ

ಸಾಂಪ್ರದಾಯಿಕ ವಿಧಾನಗಳಿಂದ ಸೋರಿಕೆ ಪತ್ತೆಯಾಗದಿದ್ದಾಗ, ಜಲಮಂಡಳಿ ಆಧುನಿಕ ಸೆನ್ಸರ್ ಮತ್ತು ಇನ್ಸ್‌ಪೆಕ್ಷನ್ ತಂತ್ರಜ್ಞಾನವನ್ನು ಬಳಸಿತು. ಇದರಿಂದ ಪೈಪ್‌ಲೈನ್‌ನಲ್ಲಿ ಯಾವ ಭಾಗದಲ್ಲಿ ಕಲುಷಿತ ನೀರು ಸೇರ್ಪಡೆಯಾಗುತ್ತಿದೆ ಎಂಬುದನ್ನು ನಿಖರವಾಗಿ ಗುರುತಿಸಲು ಸಾಧ್ಯವಾಯಿತು.

ಮಾದರಿ ಪರೀಕ್ಷೆ

ಸಮಸ್ಯೆ ಬಗೆಹರಿಸಿದ ನಂತರ ಅಧಿಕಾರಿಗಳು ವಿವಿಧ ಮನೆಗಳಿಂದ ನೀರಿನ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಲ್ಯಾಬ್ ಪರೀಕ್ಷೆಗೆ ಕಳುಹಿಸಿದ್ದಾರೆ. ನೀರು ಈಗ ಬಳಕೆಗೆ ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಂಡ ನಂತರವೇ ಪೂರೈಕೆಯನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗಿದೆ.

ಕಲುಷಿತ ನೀರಿನ ಮೂಲ ಪತ್ತೆ ಮಾಡಿದ ರೋಬೋಟ್‌

ಬೆಂಗಳೂರಿನಲ್ಲಿ ಒಳಚರಂಡಿ ಮತ್ತು ಭೂಗತ ಪೈಪ್‌ಲೈನ್‌ಗಳ ತಪಾಸಣೆ, ತ್ವರಿತಗತಿಯ ದುರಸ್ತಿಗಾಗಿ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿತ್ತು. ಜಲಮಂಡಳಿಯ ಈ ರೋಬೋಟಿಕ್ ಕ್ರಾಂತಿಯು ಬೆಂಗಳೂರಿನ ಮೂಲ ಸೌಕರ್ಯ ನಿರ್ವಹಣೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದು, ಯಾವುದೇ ರಸ್ತೆ ಅಗೆಯದೆ, ಅಡೆತಡೆ ಸೃಷ್ಟಿಸದೇ ರೋಬೋಟ್‌ಗಳೇ ಭೂಗತ ಪೈಪ್‌ಲೈನ್‌ಗಳ ಒಳಗಿನ ದೋಷಗಳನ್ನು ಪತ್ತೆ ಹಚ್ಚಿದೆ. ಕಳೆದ ಐದಿನೈದು ದಿನಗಳಿಂದ ಲಿಂಗರಾಜಪುರಂ ಸಮೀಪದ ಕೆಎಸ್ ಎಫ್ ಸಿ ಬಡಾವಣೆಯಲ್ಲಿ ಕಲುಷಿತ ನೀರು ಪೂರೈಕೆಯಿಂದ ಉಂಟಾಗಿದ್ದ ತ್ವರಿತ ಹಾಗೂ ನಿಖರವಾಗಿ ಪತ್ತೆ ಹಚ್ಚುವಲ್ಲಿ ಈ ರೋಬೋಟಿಕ್ ತಂತ್ರಜ್ಞಾನ ಯಶಸ್ವಿಯಾಗಿದೆ.

ಕುಡಿಯುವ ನೀರಿನ ಪೈಪ್ ಲೈನ್ ಗೆ ಚರಂಡಿ ನೀರು ಮಿಶ್ರಣವಾಗುತ್ತಿದ್ದುದ್ದನ್ನು ರೊಬೊಟಿಕ್ ತಂತ್ರಜ್ಞಾನದ ನೆರವಿನಿಂದ ಪತ್ತೆ ಹಚ್ಚಿ ದುರಸ್ತಿ ಮಾಡುತ್ತಿರುವುದು ಜಲಮಂಡಳಿಯ ವಿಶಿಷ್ಟ ಸಾಧನೆಗೆ ಸಾಕ್ಷಿಯಾಗಿದೆ.

ರೋಬೊಟ್ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತೆ?

ಹೈ ರೆಸಲ್ಯೂಶನ್ ಕ್ಯಾಮೆರಾ ಹೊಂದಿರುವ ಈ ರೋಬೋಟ್‌ಗಳು ಭೂಗತ ಪೈಪ್‌ಲೈನ್‌ಗಳನ್ನು ತಪಾಸಣೆ ಮಾಡಿತ್ತು. ರಸ್ತೆಯನ್ನು ಅಗೆಯದೇ ಆಗಿರುವ ಹಾನಿ ಅಥವಾ ಲೋಪಗಳನ್ನು ಪತ್ತೆ ಮಾಡಿತ್ತು. ಒಳಚರಂಡಿ ಹಾಗೂ ನೀರಿನ ಪೈಪ್ ಲೈನ್ ಗಳಲ್ಲಿ ಚಲಿಸುವ ಈ ರೋಬೊಟ್ ಯಂತ್ರವು ಹಾನಿಯನ್ನು ಸ್ಪಷ್ಟವಾಗಿ ಗುರುತಿಸಿದೆ.

Read More
Next Story