
ರೋಬೊಟ್ ಮಾದರಿ ಪರೀಕ್ಷೆ ನಡೆಸುತ್ತಿರುವುದು
ಲಿಂಗರಾಜಪುರ ಕಲುಷಿತ ನೀರಿನ ಸ್ಥಳ ಪತ್ತೆ ಮಾಡಿದ ರೊಬೋಟ್ ವಿಶೇಷತೆ ಏನು?
ಜಲಮಂಡಳಿಯ ಈ ರೋಬೋಟಿಕ್ ಕ್ರಾಂತಿಯು ಬೆಂಗಳೂರಿನ ಮೂಲ ಸೌಕರ್ಯ ನಿರ್ವಹಣೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದ್ದು, ಈಗಾಗಲೇ ರೋಬೊಟ್ ಗಳು ಅಖಾಡಕ್ಕೆ ಇಳಿದಿವೆ.
ಬೆಂಗಳೂರಿನಲ್ಲಿ ಒಳಚರಂಡಿ ಮತ್ತು ಭೂಗತ ಪೈಪ್‌ಲೈನ್‌ಗಳ ತಪಾಸಣೆ, ತ್ವರಿತಗತಿಯ ದುರಸ್ತಿಗಾಗಿ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.
ಜಲಮಂಡಳಿಯ ಈ ರೋಬೋಟಿಕ್ ಕ್ರಾಂತಿಯು ಬೆಂಗಳೂರಿನ ಮೂಲ ಸೌಕರ್ಯ ನಿರ್ವಹಣೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದ್ದು, ಈಗಾಗಲೇ ರೋಬೊಟ್ ಗಳು ಅಖಾಡಕ್ಕೆ ಇಳಿದಿವೆ.
ಯಾವುದೇ ರಸ್ತೆ ಅಗೆಯದೆ, ಅಡೆತಡೆ ಸೃಷ್ಟಿಸದೇ ರೋಬೋಟ್‌ಗಳೇ ಭೂಗತ ಪೈಪ್‌ಲೈನ್‌ಗಳ ಒಳಗಿನ ದೋಷಗಳನ್ನು ಪತ್ತೆ ಹಚ್ಚುತ್ತವೆ. ಕಳೆದ ಐದಿನೈದು ದಿನಗಳಿಂದ ಲಿಂಗರಾಜಪುರಂ ಸಮೀಪದ ಕೆಎಸ್ ಎಫ್ ಸಿ ಬಡಾವಣೆಯಲ್ಲಿ ಕಲುಷಿತನರು ಪೂರೈಕೆಯಿಂದ ಉಂಟಾಗಿದ್ದ ತ್ವರಿತ ಹಾಗೂ ನಿಖರವಾಗಿ ಪತ್ತೆ ಹಚ್ಚುವಲ್ಲಿ ಈ ರೋಬೊಟಿಕ್ ತಂತ್ರಜ್ಞಾನ ಯಶಸ್ವಿಯಾಗಿದೆ.
ಕುಡಿಯುವ ನೀರಿನ ಪೈಪ್ ಲೈನ್ ಗೆ ಚರಂಡಿ ನೀರು ಮಿಶ್ರಣವಾಗುತ್ತಿದ್ದುದ್ದನ್ನು ರೊಬೊಟಿಕ್ ತಂತ್ರಜ್ಞಾನದ ನೆರವಿನಿಂದ ಪತ್ತೆ ಹಚ್ಚಿ ದುರಸ್ತಿ ಮಾಡುತ್ತಿರುವುದು ಜಲಮಂಡಳಿಯ ವಿಶಿಷ್ಟ ಸಾಧನೆಗೆ ಸಾಕ್ಷಿಯಾಗಿದೆ.
ರೋಬೊಟ್ ತಂತ್ರಜ್ಞಾನ ಹೇಗೆ ಕೆಲಸ ಮಾಡಲಿದೆ?
ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ನಿರ್ಮೂಲನೆ ಮಾಡಲು ಮತ್ತು ಮ್ಯಾನ್‌ಹೋಲ್ ಸ್ವಚ್ಛಗೊಳಿಸಲು 'ಬ್ಯಾಂಡಿಕೂಟ್' ರೋಬೋಟ್‌ಗಳನ್ನು ಬಳಸಲಾಗುತ್ತಿದೆ.
2025 ನವೆಂಬರ್ ತಿಂಗಳಿಂದ ರೋಬೊಟಕ್ ತಂತ್ರಜ್ಞಾನದಡಿ ಸುಮಾರು 38 ಸ್ಥಳಗಳಲ್ಲಿ ಅನಗತ್ಯ ರಸ್ತೆ ಅಗೆಯುವಿಕೆ ತಡೆಯಲಾಗಿದೆ. ಪೈಪ್‌ಲೈನ್‌ಗಳಲ್ಲಿನ 90 ಕ್ಕೂ ಹೆಚ್ಚು ದೋಷಗಳನ್ನು ಯಶಸ್ವಿಯಾಗಿ ಗುರುತಿಸಲಾಗಿದೆ. ಭೂಗತ ಪೈಪ್‌ಗಳಲ್ಲಿ ಸುಮಾರು 500 ಮೀಟರ್‌ವರೆಗೆ ಚಲಿಸಿ ತಪಾಸಣೆ ನಡೆಸುವ ಸಾಮರ್ಥ್ಯವನ್ನು ಈ ರೋಬೋಟ್‌ಗಳು ಹೊಂದಿವೆ.
ತಂತ್ರಜ್ಞಾನದ ಪ್ರಯೋಜನಗಳೇನು?
ರೋಬೊಟಿಕ್ ತಂತ್ರಜ್ಞಾನ ಅಳವಡಿಕೆಯಿಂದ ಜಲಮಂಡಳಿಗೆ ಸಾಕಷ್ಟು ವೆಚ್ಚ ಉಳಿತಾಯವಾಗಲಿದೆ.
ರಸ್ತೆ ಅಗೆದು, ಸರಿಪಡಿಸುವ ಪ್ರಮೇಯ ಇರುವುದಿಲ್ಲ. ಅಪಾಯಕಾರಿ ಮ್ಯಾನ್ ಹೋಲ್ ಗಳಲ್ಲಿ ಕಾರ್ಮಿಕರು ಇಳಿದು ಕೆಲಸ ಮಾಡುವುದನ್ನು ಈ ರೋಬೊಟ್ ಗಳು ತಪ್ಪಿಸಿವೆ. ಅಲ್ಲದೇ ಇದರಿಂದ ಮ್ಯಾನುವೆಲ್ ಸ್ಕ್ಯಾವೆಂಜಿರ್ ಕಾರ್ಯ ಪೂರ್ಣ ಪ್ರಮಾಣದಲ್ಲಿ ನಿಷೇಧಿಸಲು ಅನುವು ಮಾಡಿಕೊಡಲಿದೆ.
ಪೈಪ್ ಲೈನ್ ನಲ್ಲಿ ಇರುವ ದೋಷವನ್ನು ಬೇಗ ಪತ್ತೆ ಹಚ್ಚಿ,ತ್ವರಿತವಾಗಿ ಪರಿಹರಿಸಲಿದೆ. ಬೆಂಗಳೂರಿನಲ್ಲಿ ಅನಧಿಕೃತ ನೀರಿನ ಸಂಪರ್ಕಗಳನ್ನು ಪತ್ತೆ ಹಚ್ಚುವ ಮೂಲಕ ಶೇ 28 ರಷ್ಟು ನೀರಿನ ನಷ್ಟವನ್ನು ರೋಬೋಟ್ ಗಳು ತಪ್ಪಿಸಲಿವೆ.
"ಈ ಉಪಕ್ರಮವು ಕೇವಲ ತಾಂತ್ರಿಕ ಬದಲಾವಣೆಯಲ್ಲ, ಇದು ಬೆಂಗಳೂರಿನ ನಾಗರಿಕರಿಗೆ ಕಿರಿಕಿರಿ ಇಲ್ಲದ ಸೇವೆ ನೀಡುವ ಒಂದು ದೂರದೃಷ್ಟಿಯ ಯೋಜನೆ" ಎಂದು ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ಹೇಳಿದ್ದಾರೆ.
ಈ ಸ್ಮಾರ್ಟ್ ತಂತ್ರಜ್ಞಾನದ ಅಳವಡಿಕೆಯೊಂದಿಗೆ, ಬಿಡಬ್ಲ್ಯೂಎಸ್ಎಸ್‌ಬಿ ಭಾರತದ ಇತರ ನಗರಗಳಿಗೆ ಮಾದರಿಯಾಗಿದೆ. ಇದು ನಗರದ ಮೂಲಸೌಕರ್ಯದ ಬೆಳವಣಿಗೆ, ಸಾರ್ವಜನಿಕ ಹಣ ಮತ್ತು ಸಮಯವನ್ನು ಉಳಿಸುತ್ತಿದೆ.
ಬೇರೆ ರಾಜ್ಯಗಳಲ್ಲೂ ತಂತ್ರಜ್ಞಾನ ಅಳವಡಿಕೆ
ಬೆಂಗಳೂರು ನೀರು ಸರಬರಾಜು ಮಂಡಳಿಯು ರೋಬೊಟಿಕ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಳವಡಿಸಿಕೊಂಡ ಬಳಿಕ ಹೈದರಾಬಾದ್ ಜಲಮಂಡಳಿ ಸಹ ಈ ತಂತ್ರಜ್ಞಾನ ಅಳವಡಿಸಿಕೊಂಡಿದೆ. ನೀರು ಅಥವಾ ಒಳಚರಂಡಿ ಪೈಪ್‌ಲೈನ್‌ಗಳಲ್ಲಿ ಸಣ್ಣ ಸೋರಿಕೆಯನ್ನೂ ರೋಬೋಟ್‌ಗಳು ಪತ್ತೆ ಹಚ್ಚಲಿವೆ. ಇದರಿಂದ ನೀರಿನ ನಷ್ಟವನ್ನು ತಡೆಯಬಹುದು. ಅಲ್ಲದೇ ಕಿರಿದಾದ ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮಾಡುವಾಗ ಕಾರ್ಮಿಕರ ಸುರಕ್ಷತೆಯನ್ನು ಈ ತಂತ್ರಜ್ಞಾನ ಖಾತರಿಪಡಿಸಲಿದೆ.
ತಮಿಳುನಾಡಿನ ಚೆನ್ನೈ ಮಹಾನಗರದಲ್ಲೂ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರು ನಿರ್ವಹಣೆಯಲ್ಲಿನ ಲೋಪಗಳನ್ನು ಪತ್ತೆ ಮಾಡಲು ರೋಬೋಟ್‌ಗಳನ್ನು ನಿಯೋಜಿಸುತ್ತಿದೆ. ಸಮಸ್ಯೆಯನ್ನು ತ್ವರಿತವಾಗಿ ಗುರುತಿಸಿ, ಸ್ಥಿತಿಯನ್ನು ಅಧ್ಯಯನ ಮಾಡಲು ನೆರವಾಗಲಿದೆ. ಅತ್ಯಾಧುನಿಕ ಕ್ಯಾಮೆರಾ ಒಳಗೊಂಡಿರುವ ಈ ಎಐ ಆಧರಿತ ಯಂತ್ರಗಳು ಸೋರಿಕೆ ಮತ್ತು ಅಡೆತಡೆಯ ನಿಖರವಾದ ಸ್ಥಳವನ್ನು ಪತ್ತೆ ಮಾಡಲಿದೆ.

