Karnataka Police Receive ‘Peak Cap’ Uniforms; CM Launches New Special Task Force
x

ಹೊಸ ಕ್ಯಾಪ್‌ ಧರಿಸಿರುವ ಪೊಲೀಸ್‌ ಸಿಬ್ಬಂದಿ

ಕರ್ನಾಟಕ ಪೊಲೀಸರಿಗೆ 'ಪೀಕ್ ಕ್ಯಾಪ್' ವಿತರಣೆ, ವಿಶೇಷ ಕಾರ್ಯಪಡೆಗೆ ಸಿಎಂ ಚಾಲನೆ

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಉಪಸ್ಥಿತಿಯಲ್ಲಿ ಈ ಎರಡೂ ಮಹತ್ವದ ಯೋಜನೆಗಳನ್ನು ಉದ್ಘಾಟಿಸಲಾಯಿತು.


Click the Play button to hear this message in audio format

ರಾಜ್ಯ ಪೊಲೀಸ್ ಇಲಾಖೆಯ ನವೀಕರಣ ಮತ್ತು ಬಲವರ್ಧನೆಗೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪೊಲೀಸ್ ಕಾನ್‌ಸ್ಟೆಬಲ್‌ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ಗಳಿಗೆ ನೂತನ 'ಪೀಕ್ ಕ್ಯಾಪ್' ವಿತರಿಸುವ ಯೋಜನೆಗೆ ಮತ್ತು ಮಾದಕ ದ್ರವ್ಯ ಜಾಲವನ್ನು ಮಟ್ಟಹಾಕಲು 'ವಿಶೇಷ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ'ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಅ. 28) ಚಾಲನೆ ನೀಡಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಉಪಸ್ಥಿತಿಯಲ್ಲಿ ಈ ಎರಡೂ ಮಹತ್ವದ ಯೋಜನೆಗಳನ್ನು ಉದ್ಘಾಟಿಸಲಾಯಿತು.

ಪೊಲೀಸರಿಗೆ ಹೊಸ ‘ಪೀಕ್ ಕ್ಯಾಪ್’

ಪೊಲೀಸ್ ಕಾನ್‌ಸ್ಟೆಬಲ್‌ಗಳು ಮತ್ತು ಹೆಡ್‌ ಕಾನ್‌ಸ್ಟೆಬಲ್‌ಗಳು ದಶಕಗಳಿಂದ ಧರಿಸುತ್ತಿದ್ದ 'ಸ್ಲೋಚ್ ಹ್ಯಾಟ್' ಬದಲಿಗೆ, ಹೆಚ್ಚು ಅನುಕೂಲಕರ ಮತ್ತು ವೃತ್ತಿಪರ ನೋಟ ನೀಡುವ 'ಪೀಕ್ ಕ್ಯಾಪ್'ಗಳನ್ನು ವಿತರಿಸಲಾಯಿತು. ಈ ಹೊಸ ಟೋಪಿಗಳು ತೆಳುವಾಗಿದ್ದು, ಹಗುರವಾಗಿವೆ. ತೆಲಂಗಾಣ ಪೊಲೀಸರು ಇದೇ ಮಾದರಿಯ ಟೋಪಿಯನ್ನು ಬಳಸುತ್ತಿದ್ದು, ಸಿಬ್ಬಂದಿಯ ಆರೋಗ್ಯ ಮತ್ತು ದಕ್ಷತೆಯ ದೃಷ್ಟಿಯಿಂದ ಈ ಬದಲಾವಣೆ ಅನುಕೂಲಕರವಾಗಿದೆ ಎಂದು ಇಲಾಖೆ ತಿಳಿಸಿದೆ.

ಮಾದಕ ದ್ರವ್ಯ ಜಾಲಕ್ಕೆ ಕಡಿವಾಣ ಹಾಕಲು ವಿಶೇಷ ಕಾರ್ಯಪಡೆ

ಇದೇ ಕಾರ್ಯಕ್ರಮದಲ್ಲಿ, ರಾಜ್ಯದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಜಾಲವನ್ನು ಸಂಪೂರ್ಣವಾಗಿ ಮಟ್ಟಹಾಕುವ ದೃಢ ಸಂಕಲ್ಪದೊಂದಿಗೆ 'ವಿಶೇಷ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ'ಗೆ (Anti-Narcotics Task Force) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಚಾಲನೆ ನೀಡಿದರು. ಈ ಕಾರ್ಯಪಡೆಯು ರಾಜ್ಯಾದ್ಯಂತ ಮಾದಕ ವಸ್ತುಗಳ ಮಾರಾಟ, ಸಾಗಾಟ ಮತ್ತು ಸೇವನೆಯನ್ನು ತಡೆಗಟ್ಟಲು ವಿಶೇಷವಾಗಿ ಕಾರ್ಯನಿರ್ವಹಿಸಲಿದೆ. ವಿದ್ಯಾರ್ಥಿಗಳು ಮತ್ತು ಯುವಜನರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಡ್ರಗ್ಸ್ ಜಾಲವನ್ನು ಬೇರುಸಹಿತ ಕಿತ್ತೊಗೆಯುವುದು ಇದರ ಪ್ರಮುಖ ಉದ್ದೇಶವಾಗಿದೆ.

Read More
Next Story