ಮರಕ್ಕೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್; ಚಾಲಕ ಸೇರಿ 20 ಮಂದಿಗೆ ಗಾಯ
x

ಜೋಗನಕೊಪ್ಪ ಗ್ರಾಮದ 10 ವರ್ಷದ ವಿದ್ಯಾರ್ಥಿ ಸೀಮಂತ್ ಮಹಾಂತೇಶ ಕಮ್ಮಾರ, ಬಸ್ಸಿನ ಎಂಜಿನ್ ಮತ್ತು ಸೀಟಿನ ನಡುವೆ ಕಾಲುಗಳು ಸಿಲುಕಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದನು.

ಮರಕ್ಕೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್; ಚಾಲಕ ಸೇರಿ 20 ಮಂದಿಗೆ ಗಾಯ

ಹುಬ್ಬಳ್ಳಿಯ ಕಲಘಟಗಿಯಿಂದ ಹಳಿಯಾಳಕ್ಕೆ ತೆರಳುತ್ತಿದ್ದ ಹಳಿಯಾಳ ಡಿಪೊದ ಕೆಎಸ್ಆರ್‌ಟಿಸಿ ಬಸ್ ಎದುರಿನಿಂದ ಬಂದ ಕಾರು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ.


Click the Play button to hear this message in audio format

ನಿಯಂತ್ರಣ ಕಳೆದುಕೊಂಡ ಕೆ.ಎಸ್.ಆರ್.ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 20 ಜನರು ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬಾಣಸಗೇರಿ ಗ್ರಾಮದಲ್ಲಿ ನಡೆದಿದೆ. ಬಸ್‌ನಲ್ಲಿ ಒಟ್ಟು 40 ಪ್ರಯಾಣಿಕರು ಇದ್ದರು.

ಹಳಿಯಾಳ ಡಿಪೋದ ಕೆಎಸ್ಆರ್‌ಟಿಸಿ ಬಸ್‌, ಹುಬ್ಬಳಿಯ ಕಲಘಟಗಿಯಿಂದ ಹಳಿಯಾಳಕ್ಕೆ ತೆರಳುತ್ತಿತ್ತು. ಬಾಣಸಗೇರಿ ಸಮೀಪ ಕಾರಿನೊಂದಿಗೆ ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆಯಲಾಗಿದೆ. ಜೋಗನಕೊಪ್ಪ ಗ್ರಾಮದ ಸೀಮಂತ್ ಮಹಾಂತೇಶ ಕಮ್ಮಾರ(10) ಬಸ್‌ ಸೀಟಿನಡಿ ಸಿಲುಕಿಕೊಂಡಿದ್ದರಿಂದ ಗಂಭೀರ ಗಾಯಗೊಂಡಿದ್ದಾನೆ.

ಅಲ್ಲದೇ ಬಸ್‌ ಅಪಘಾತದಲ್ಲಿ ಚಾಲಕನಿಗೂ ಗಂಭೀರ ಗಾಯಗಳಾಗಿವೆ. ಬಸ್‌ ಎಂಜಿನ್ ಭಾಗ ಹಾಗೂ ಮುಂದಿನ ಸೀಟ್ ನಡುವೆ ಶಾಲಾ ಬಾಲಕನ ಕಾಲುಗಳು ಸಿಲುಕಿಕೊಂಡಿದ್ದವು, ಕಟ್ಟರ್ ಸಹಾಯದಿಂದ ಬಸ್‌ನ ಸೀಡಿನ ಪಾರ್ಟ್‌ಗಳನ್ನು ಕತ್ತರಿಸಿ ಬಾಲಕನ ಕಾಲುಗಳನ್ನು ಹೊರತೆಗೆಯಲಾಗಿದೆ.

ಅದೃಷ್ಟವಶಾತ್ ಹೆಚ್ಚಿನ ತೊಂದರೆಯಾಗದೇ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗಾಯಾಳುಗಳನ್ನು ಹಳಿಯಾಳದ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬುಧವಾರ ರಾತ್ರಿ ಮೈಸೂರಿನಿಂದ ಚಾಮರಾಜನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಬಸ್ ಚಾಲಕ ಇರಸವಾಡಿ ಗ್ರಾಮದ ಮಂಜು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಅಪಘಾತದ ಪರಿಣಾಮ ಲಾರಿಯಲ್ಲಿ ತುಂಬಿದ್ದ ಗ್ರಾನೈಟ್‌ಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪಘಾತವಾದ ಕೂಡಲೇ ಸ್ಥಳಕ್ಕೆ ಬಂದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಹಾಗೂ ರಸ್ತೆಯ ಮೇಲೆ ಅಡ್ಡಲಾಗಿ ಬಿದ್ದಿದ್ದ ಗ್ರಾನೈಟ್ ತುಣುಕುಗಳನ್ನು ತೆರವುಗೊಳಿಸಲು ಸಹಾಯ ಮಾಡಿದರು. ಬಸ್‌ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿದ ಸ್ಥಳಕ್ಕೆ ಗುರುವಾರ ಜಿಲ್ಲಾಧಿಕಾರಿ ಶ್ರೀರೂಪಾ ಭೇಟಿ ನೀಡಿ ಪರಿಶೀಲಿಸಿದರು.

ಅಪಘಾತದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರ ಮಾಹಿತಿ ಪಡೆದುಕೊಂಡು ಜಿಲ್ಲಾಧಿಕಾರಿ ಬೆಂಡರವಾಡಿ ಗ್ರಾಮಸ್ಥರ ಬಳಿ ಮಾಹಿತಿ ಪಡೆದುಕೊಂಡರು. ಗ್ರಾಮಸ್ಥರ ದೂರಿನಂತೆ ಮುಂದೆ ಅಪಘಾತಗಳು ಸಂಭವಿಸಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶ್ರೀರೂಪಾ ಸೂಚನೆ ನೀಡಿದರು.

Read More
Next Story