ವಂಚನೆ ಪ್ರಕರಣ | 2.75ಕೋಟಿ ಮೌಲ್ಯದ ವಜ್ರದ ಉಂಗುರ ಧರಿಸಿದ್ದ ಆರೋಪಿ ರೋಷನ್ ಸಲ್ಡಾನಾ
x

ವಂಚನೆ ಪ್ರಕರಣ | 2.75ಕೋಟಿ ಮೌಲ್ಯದ ವಜ್ರದ ಉಂಗುರ ಧರಿಸಿದ್ದ ಆರೋಪಿ ರೋಷನ್ ಸಲ್ಡಾನಾ

ರೋಷನ್ ಸಲ್ಡಾನಾ ವಂಚನೆಯ ಜಾಲದ ಮಾಹಿತಿ ಪಡೆದ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಆರೋಪಿ ರೋಷನ್ ಸಲ್ಡಾನಾ ದೇಶದ ಹಲವು ಉದ್ಯಮಿಗಳಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.


ಉದ್ಯಮಿಗಳಿಗೆ ಸಾಲ‌ ಕೊಡಿಸುವ ಆಮಿಷ ತೋರಿ ಕೋಟ್ಯಂತರ ರೂ. ಹಣ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ರೋಷನ್ ಸಲ್ಡಾನಾನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಹಲವು ರೋಚಕ ಸಂಗತಿಗಳು ಬಯಲಾಗುತ್ತಿವೆ.

ರೋಷನ್ ಸಲ್ಡಾನಾ ವಂಚನೆಯ ಜಾಲದ ಮಾಹಿತಿ ಪಡೆದ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಆರೋಪಿ ರೋಷನ್ ಸಲ್ಡಾನಾ ದೇಶದ ಹಲವು ಉದ್ಯಮಿಗಳಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.

ಉದ್ಯಮಿಗಳೇ ಈತನ ಟಾರ್ಗೆಟ್

ಆರೋಪಿ ರೋಷನ್ ಸಾಲ್ಡಾನಾ ಮಹಾರಾಷ್ಟ್ರದ ಒಬ್ಬ ಉದ್ಯಮಿಗೆ 5 ಕೋಟಿ ರೂ., ಮತ್ತೊಬ್ಬ ಉದ್ಯಮಿಗೆ 10 ಕೋಟಿ ರೂ. ಹಾಗೂ ಅಸ್ಸಾಂನ ಒಬ್ಬ ಉದ್ಯಮಿಯಿಂದ 20 ಲಕ್ಷ ರೂ. ಪಡೆದು ವಂಚಿಸಿರುವುದು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.

ಈ ಎಲ್ಲ ಉದ್ಯಮಿಗಳು ಇದೀಗ ಮಂಗಳೂರಿನ ಸಿಇಎನ್​ ಪೊಲೀಸ್​ ಠಾಣೆಗೆ ಆಗಮಿಸಿ, ದೂರು ನೀಡುತ್ತಿದ್ದಾರೆ.

ಪೊಲೀಸರು ಬ್ಯಾಂಕ್​ಗಳಿಗೆ ಸಂಪರ್ಕಿಸಿ ಮಹಾರಾಷ್ಟ್ರದ ಉದ್ಯಮಿಗೆ ಸಂಬಂಧಿಸಿದ ರೂ 3.5 ಕೋಟಿ ಹಣ ಹಾಗೂ ಅಸ್ಸಾಂ ವ್ಯಕ್ತಿಗೆ ಸಂಬಂಧಿಸಿದ 20 ಲಕ್ಷ ರೂ. ಹಣವನ್ನು ಫ್ರೀಜ್‌ ಮಾಡಿದ್ದಾರೆ.

2.75 ಕೋಟಿ ಮೌಲ್ಯದ ವಜ್ರದ ಉಂಗುರ ಧರಿಸಿದ್ದ ಆರೋಪಿ

ಆರೋಪಿ ರೋಷನ್ ಸಲ್ಡಾನಾ ಬರೋಬ್ಬರಿ 2.75 ಕೋಟಿ ರೂ. ಮೌಲ್ಯದ ವಜ್ರದ ಉಂಗುರ ಹಾಕುತ್ತಿದ್ದ ಎಂದು ತಿಳಿದುಬಂದಿದೆ. ಮಂಗಳೂರು ಪೊಲೀಸರು ಈ ಉಂಗುರವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ರೋಹನ್ ಗೆ ಸೇರಿದ ಮಂಗಳೂರಿನ ಜಪ್ಪಿನಮೊಗರುವಿನ‌ ಐಷಾರಾಮಿ ಬಂಗಲೆಯಲ್ಲಿ ಹಿಂದೂ ಗುರೂಜಿ ಫೋಟೋ ಹಾಕಿದ್ದ. ಈತ ಕ್ರೈಸ್ತ ಸಮುದಾಯಕ್ಕೆ ಸೇರಿದರೂ ಉತ್ತರ ಭಾರತದ ಉದ್ಯಮಿಗಳನ್ನು ಸೆಳೆಯುವ ಸಲುವಾಗಿ ಉತ್ತರ ಪ್ರದೇಶದ ಹಿಂದೂ ಗುರೂಜಿ ನೀಮ್ ಕರೋಲಿ ಬಾಬಾ ಫೋಟೋ ಹಾಕಿದ್ದ ಎನ್ನಲಾಗಿದೆ.

ಆರೋಪಿ ರೋಷನ್ ಸಾಲ್ಡಾನಾನನ್ನು ಉದ್ಯಮಿಗಳಿಗೆ ವಂಚಿಸಿದ ಆರೋಪದ ಮೇಲೆ ಈಚೆಗೆ ಪೊಲೀಸರು ಜಪ್ಪಿನಮೊಗರು ನಿವಾಸದಲ್ಲಿ ಮಲೇಷ್ಯಾ ಯುವತಿಯೊಂದಿಗೆ ಪಾರ್ಟಿ‌ ಮಾಡುವಾಗ ಬಂಧಿಸಿದ್ದರು.

ಈತನ ಐಶಾರಾಮಿ ಬಂಗಲೆ‌ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದರು. ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಬಾರ್ ಕೌಂಟರ್, ಮನೆಯ ಮುಂದೆ ಲಕ್ಷಾಂತರ ರೂಪಾಯಿ ಮೌಲ್ಯದ ಬೋನ್ಸಾಯಿ ಗಿಡಗಳು ಹಾಗೂ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ.

ರೋಹನ್‌ ಸಲ್ಡಾನಾನ ಬಂಗಲೆ, ಜೀವನ ಶೈಲಿ, ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ತರಹೇವಾರಿ ಮದ್ಯಗಳನ್ನು ಕಂಡು ಉದ್ಯಮಿಗಳು ಯಾಮಾರುತ್ತಿದ್ದರು. 3 ತಿಂಗಳಲ್ಲೇ 45 ಕೋಟಿ ರೂ. ವ್ಯವಹಾರ ಮಾಡಿದ್ದ ರೋಹನ್, ಹಲವು ವರ್ಷಗಳಿಂದ 200 ಕೋಟಿ ರೂ.ಗೂ ಅಧಿಕ ವಂಚನೆ ಮಾಡಿದ್ದಾನೆ ಎಂದು ಉದ್ಯಮಿಯೊಬ್ಬರು ನೀಡಿದ ದೂರಿನ ಆಧಾರದ‌ ಮೇಲೆ ಮಂಗಳೂರು ಪೊಲೀಸರು ರೋಹನ್‌ನನ್ನು ಬಂಧಿಸಿದ್ದರು.

ಮನೆಯಲ್ಲಿ ಅಡುಗುತಾಣ ನಿರ್ಮಾಣ

ಆರೋಪಿ ರೋಹನ್ ಸಲ್ಡಾನಾನ ಐಷಾರಾಮಿ ಬೆಡ್ ರೂಮ್​​ ಬಳಿ ಹೈಡ್ ಔಟ್ ರೂಮ್ ಇದೆ. ಬೆಡ್ ರೂಮ್​​ ಕಬೋರ್ಡ್ ಒಳಗೆ ಒಂದು ಹಿಡನ್ ಡೋರ್​ ಇದೆ. ಅದನ್ನು ತಳ್ಳಿದ್ದರೆ ವಿಶಾಲವಾದ ರೂಮ್​ ಇದೆ. ಪೊಲೀಸರು ಅಥವಾ ಮೋಸ ಹೋದವರು ಬಂದರೆ ಇದೇ ರೂಮ್​ನಲ್ಲಿ ಆತ ಅಡಗಿಕೊಳ್ಳುತ್ತಿದ್ದ ಎನ್ನಲಾಗಿದೆ.

Read More
Next Story