
ಕಂಬಳದ ದೃಶ್ಯ
ಉಳ್ಳಾಲದ 'ನರಿಂಗಾನ ಕಂಬಳ'ದಲ್ಲಿ ಡಿಸಿಎಂ ಭಾಗಿ: ತುಳುನಾಡು ಸಂಸ್ಕೃತಿಗೆ ಮೆಚ್ಚುಗೆ
ಕೆಸರು ಗದ್ದೆಯಲ್ಲಿ ಕೋಣಗಳ ಓಟವನ್ನು ಕಣ್ತುಂಬಿಕೊಂಡ ಅವರು, ಸಂಘಟಕರಾದ ವೆಂಕಪ್ಪ ಕಾಜವ ಅವರ ನಾಯಕತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಸ್ಥಳೀಯ ಪರಂಪರೆ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ ಎಂದು ಶ್ಲಾಘಿಸಿದರು.
ಕರಾವಳಿಯ ಜಾನಪದ ಕ್ರೀಡೆ ಕಂಬಳವು ನಾಡಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಪ್ರತಿಬಿಂಬಿಸುವ ಜೀವಂತ ಪರಂಪರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣ್ಣಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದಲ್ಲಿ ನಡೆದ 'ಲವ-ಕುಶ ಜೋಡುಕರೆ ಕಂಬಳ'ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನರಿಂಗಾನದ ಮೋರ್ಲ-ಬೋಳ ಎಂಬಲ್ಲಿ ಆಯೋಜಿಸಲಾಗಿದ್ದ ಈ ಕಂಬಳ ಉತ್ಸವದಲ್ಲಿ ಡಿಸಿಎಂ ಶಿವಕುಮಾರ್ ಅವರು ಕರಾವಳಿಯ ಸಂಸ್ಕೃತಿಗೆ ಮನಸೋತರು. ಕೆಸರು ಗದ್ದೆಯಲ್ಲಿ ಕೋಣಗಳ ಓಟವನ್ನು ಕಣ್ತುಂಬಿಕೊಂಡ ಅವರು, ಸಂಘಟಕರಾದ ವೆಂಕಪ್ಪ ಕಾಜವ ಅವರ ನಾಯಕತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಸ್ಥಳೀಯ ಪರಂಪರೆ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ ಎಂದು ಶ್ಲಾಘಿಸಿದರು.
ಕಂಬಳದ ವೈಭವ ಕಣ್ತುಂಬಿಕೊಂಡ ಡಿಕೆಶಿ
ಕಂಬಳದ ಗದ್ದೆಯ ಬಳಿ ನಿಂತು ಕೋಣಗಳ ಓಟವನ್ನು ವೀಕ್ಷಿಸಿದ ಡಿಕೆಶಿ, ಕರಾವಳಿಯ ಜನರ ಉತ್ಸಾಹಕ್ಕೆ ತಲೆಬಾಗಿದರು. ಈ ವೇಳೆ ಅವರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು ಮತ್ತು ಹಣೆಗೆ ತಿಲಕವನ್ನಿಟ್ಟು ಗೌರವಿಸಲಾಯಿತು. ಕಂಬಳ ವೀಕ್ಷಣೆ ಬಳಿಕ ಮಾತನಾಡಿದ ಅವರು, "ಇಂತಹ ಗ್ರಾಮೀಣ ಕ್ರೀಡೆಗಳು ನಮ್ಮ ಮಣ್ಣಿನ ಸೊಗಡನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ," ಎಂದು ಹೇಳಿದರು.
ಕಂಬಳ ಕಣ್ತುಂಬಿಕೊಂಡ ಡಿಸಿಎಂ ಡಿ.ಕೆ. ಶಿವಕುಮಾರ್
ಅದ್ದೂರಿ ಆಯೋಜನೆ
ಈ ಬಾರಿಯ ನರಿಂಗಾನ ಕಂಬಳದಲ್ಲಿ ನೂರಾರು ಜೋಡಿ ಕೋಣಗಳು ಭಾಗವಹಿಸಿದ್ದು, ಸ್ಪರ್ಧೆಯ ರೋಚಕತೆ ನೋಡುಗರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಲವ ಮತ್ತು ಕುಶ ಎಂಬ ಹೆಸರಿನ ಜೋಡುಕರೆಗಳಲ್ಲಿ ನಡೆದ ಓಟವು ಕಂಬಳ ಪ್ರಿಯರಿಗೆ ರಸದೌತಣ ನೀಡಿತು.

