
ಬೆಂಗಳೂರಿಗೆ 'ಬಂಪರ್' ಕೊಡುಗೆ: ಸಿಲ್ಕ್ ಬೋರ್ಡ್-ಕೆ.ಆರ್.ಪುರಂ ರಸ್ತೆ ಅಭಿವೃದ್ಧಿಗೆ 450 ಕೋಟಿ ರೂ
ಕರ್ನಾಟಕ ಸರ್ಕಾರ ಅನುಮೋದನೆ ನೀಡಿರುವ ಈ ಯೋಜನೆಯಡಿ, ರಸ್ತೆಯ ಎರಡೂ ಬದಿಗಳನ್ನು ತಲಾ ಎರಡು ಪಥಗಳಿಗೆ (Two lanes per direction) ವಿಸ್ತರಿಸಲಾಗುತ್ತದೆ.
ಟ್ರಾಫಿಕ್ ದಟ್ಟಣೆಗೆ ಕುಖ್ಯಾತಿ ಪಡೆದಿರುವ ಬೆಂಗಳೂರಿನ ಹೊರ ವರ್ತುಲ ರಸ್ತೆಯ (ORR) ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರಂವರೆಗಿನ 17 ಕಿ.ಮೀ. ವ್ಯಾಪ್ತಿಯ ರಸ್ತೆಗೆ ಕಾಯಕಲ್ಪ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಮಹತ್ವದ ಯೋಜನೆಗೆ 450 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ನಗರದ ಪ್ರಮುಖ ಐಟಿ ಹಬ್ ಆಗಿರುವ ಈ ಭಾಗದಲ್ಲಿ ಸುಗಮ ಸಂಚಾರ ಮತ್ತು ನಗರ ಚಲನಶೀಲತೆಯನ್ನು (Urban Mobility) ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರ ಅನುಮೋದನೆ ನೀಡಿರುವ ಈ ಯೋಜನೆಯಡಿ, ರಸ್ತೆಯ ಎರಡೂ ಬದಿಗಳನ್ನು ತಲಾ ಎರಡು ಪಥಗಳಿಗೆ (Two lanes per direction) ವಿಸ್ತರಿಸಲಾಗುತ್ತದೆ. ವಾಹನಗಳ ದಟ್ಟಣೆ ಕಡಿಮೆ ಮಾಡಲು ಮತ್ತು ಸಂಚಾರ ಸುಗಮಗೊಳಿಸಲು ಬರೋಬ್ಬರಿ 143 ಜಂಕ್ಷನ್ಗಳನ್ನು ಮರು ಅಭಿವೃದ್ಧಿಪಡಿಸಲಾಗುತ್ತದೆ
ವಿಶೇಷವೆಂದರೆ, ಈ ರಸ್ತೆಯ ನಿರ್ವಹಣೆಯ ಜವಾಬ್ದಾರಿಯನ್ನು 10 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗುತ್ತಿದ್ದು, ಇದು ರಸ್ತೆಯ ಬಾಳಿಕೆ ಮತ್ತು ಗುಣಮಟ್ಟವನ್ನು ಕಾಪಾಡುವ ಗುರಿ ಹೊಂದಿದೆ. ದೀರ್ಘಕಾಲದ ಸಮಸ್ಯೆಯಾಗಿರುವ ಟ್ರಾಫಿಕ್ ಜಾಮ್ ಮತ್ತು ಮಳೆಗಾಲದಲ್ಲಿ ಉಂಟಾಗುವ ಪ್ರವಾಹದ (Flooding) ಸಮಸ್ಯೆಗೆ ಇದು ಶಾಶ್ವತ ಪರಿಹಾರ ಒದಗಿಸಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಸಾರ್ವಜನಿಕರ ಮಿಶ್ರ ಪ್ರತಿಕ್ರಿಯೆ:
ಡಿಕೆಶಿ ಅವರ ಈ ಘೋಷಣೆಗೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಎಕ್ಸ್ (ಟ್ವಿಟರ್) ತಾಣದಲ್ಲಿ ಪ್ರತಿಕ್ರಿಯಿಸಿರುವ ಅನೇಕರು, ಈಗಾಗಲೇ ವಿಳಂಬವಾಗಿರುವ ಮೆಟ್ರೋ ಕಾಮಗಾರಿಗಳನ್ನು ಉಲ್ಲೇಖಿಸಿ, ಈ ಯೋಜನೆಯ ಸಮಯಮಿತಿ ಮತ್ತು ವೆಚ್ಚದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. "ಹಳೆಯ ಯೋಜನೆಗಳೇ ಇನ್ನೂ ಮುಗಿದಿಲ್ಲ, ಹೊಸ ಯೋಜನೆಗಳು ಎಷ್ಟು ದಿನ ಹಿಡಿಯುತ್ತವೆಯೋ?" ಎಂದು ಕೆಲವರು ಪ್ರಶ್ನಿಸಿದ್ದಾರೆ.
ರ್ಕಾರದ ಪ್ರಕಾರ, ಈ ಯೋಜನೆಯು 'ಬೆಂಗಳೂರು ಪರಿಷ್ಕೃತ ಮಾಸ್ಟರ್ ಪ್ಲಾನ್ 2041' (Revised Master Plan 2041) ಅಡಿಯಲ್ಲಿ ರೂಪಿಸಲಾದ ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿಯ ಭಾಗವಾಗಿದೆ.

