Dharmasthala case | SIT investigation to be expedited, officers and staff assigned, orders issued
x

ಸಾಂದರ್ಭಿಕ ಚಿತ್ರ

ಧರ್ಮಸ್ಥಳ ಪ್ರಕರಣ|ಎಸ್‌ಐಟಿ ತನಿಖೆಗೆ ವೇಗ, ಅಧಿಕಾರಿ-ಸಿಬ್ಬಂದಿಗಳನ್ನು ನಿಯೋಜಿಸಿ ಆದೇಶ

ರಾಜ್ಯ ಸರ್ಕಾರ ಎಸ್‌ಐಟಿ ರಚಿಸಬೇಕೆಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು, ರಾಜ್ಯ ಮಹಿಳಾ ಆಯೋಗ, ವಕೀಲರು ಒತ್ತಾಯಿಸಿದ್ದರು. ಎಸ್‌ಐಟಿಗೆ ಇದೀಗ ಪೂರ್ಣಪ್ರಮಾಣದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಿದೆ.


ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳ ತನಿಖೆ ನಡೆಸಲು ರಾಜ್ಯ ಸರ್ಕಾರ ಇತ್ತೀಚೆಗೆ ರಚಿಸಿದ್ದ ಎಸ್‌ಐಟಿ ತಂಡಕ್ಕೆ ಇನ್ನಷ್ಟು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ ಪೊಲೀಸ್‌ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಬುಧವಾರ ಆದೇಶ ಹೊರಡಿಸಿದ್ದಾರೆ.

ಹಲವಾರು ವರ್ಷಗಳಿಂದ ಧರ್ಮಸ್ಥಳದಲ್ಲಿ ಕೊಲೆಗಳು ನಡೆದಿದ್ದು ಸ್ಥಳೀಯ ಪೊಲೀಸರಿಂದ ತನಿಖೆ ಸಾಧ್ಯವಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಬೇಕೆಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು, ರಾಜ್ಯ ಮಹಿಳಾ ಆಯೋಗ, ವಕೀಲರು ಸೇರಿದಂತೆ ಹಲವು ಸಂಘಟನೆಗಳು ಒತ್ತಾಯಿಸಿದ್ದವು. ಎಸ್‌ಐಟಿಗೆ ಇದೀಗ ಪೂರ್ಣಪ್ರಮಾಣದ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದ್ದು ತನಿಖೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ.

ಎಸ್‌ಪಿ ಹಾಗೂ ಡಿವೈಎಸ್‌ಪಿ ದರ್ಜೆಯ ಅಧಿಕಾರಿಗಳ ಪೈಕಿ ಮಂಗಳೂರು ಡಿಸಿಆರ್‌ಇ ಎಸ್‌ಪಿ ಸಿ.ಎ.ಸೈಮನ್, ಉಡುಪಿ ಸಿಎಎನ್ ಠಾಣೆಯ ಡಿವೈಎಸ್ಪಿ ಎ.ಸಿ.ಲೋಕೇಶ್, ದಕ್ಷಿಣ ಕನ್ನಡ ಸಿಇಎನ್ ಠಾಣೆಯ ಡಿವೈಎಸ್‌ಪಿ ಮಂಜುನಾಥ್ ಅವರನ್ನು ನೇಮಿಸಲಾಗಿದೆ.

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ದರ್ಜೆಯಲ್ಲಿ ಸಿಎಸ್‌ಪಿ ಎಸ್‌ಐ ಮಂಜುನಾಥ್, ಇ.ಸಿ.ಸಂಪತ್, ಕೆ.ಕುಸುಮಾಧರ್‌, ಉತ್ತರ ಕನ್ನಡದ ಶಿರಸಿ ಇನ್‌ಸ್ಪೆಕ್ಟರ್ ಮಂಜುನಾಥಗೌಡ, ಉಡುಪಿ, ಬೈಂದೂರು ಎಸ್‌ಐ ಪಿ.ಡಿ.ಸವಿತ್ರ ತೇಜ್, ಕೋಕಿಲ ನಾಯಕ್, ಶಿವಶಂಕರ್, ಶಿರಸಿ ಎನ್‌ಎಂ ಎಸ್‌ಐ ರಾಜ್‌ಕುಮಾರ್ ಉಕ್ಕಳ್ಳಿ, ಅಂಕೋಲ ಎಸ್‌ಐ ಆರ್.ಸುಹಾಸ್, ಮುಂಡಗೋಡ ಎಸ್‌ಐ ವಿನೋದ್ ಎಸ್.ಕಾಳಪ್ಪನವರ್ ಅವರನ್ನು ನೇಮಿಸಲಾಗಿದೆ.

ಮಂಗಳೂರು ಮೆಸ್ಕಾಂ ಠಾಣೆಯ ಪಿಎಸ್‌ಐ ಜೆ.ಗುಣಪಾಲ್‌, ಉಡುಪಿ ನಗರ ಪೊಲೀಸ್ ಠಾಣೆಯ ಎಎಸ್‌ಐ ಶುಭಾಷ್ ಕಾಮತ್, ಉಡುಪಿ ಕೌಪ್ ಪೊಲೀಸ್ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಹರೀಶ್‌ಬಾಬು, ಉಡುಪಿ ಮಲ್ಪೆ ವೃತ್ತದ ಹೆಡ್ ಕಾನ್‌ಸ್ಟೆಬಲ್ ಪ್ರಕಾಶ್, ಉಡುಪಿ ಕುಂದಾಪುರ ನಗರ ಠಾಣೆಯ ನಾಗರಾಜ್ ಮತ್ತು ಚಿಕ್ಕಮಗಳೂರಿನ ಎಎಂಎಸ್ ಹೆಡ್ ಕಾನ್‌ಸ್ಟೆಬಲ್ ದೇವರಾಜ್ ಅವರನ್ನು ಎಸ್‌ಐಟಿಗೆ ನಿಯೋಜಿಸಲಾಗಿದೆ.

Read More
Next Story