ಮಾಸ್ಕ್‌ ಮ್ಯಾನ್‌ ಬುರುಡೆ ಚಿನ್ನಯ್ಯ ಜೈಲಿನಿಂದ ರಿಲೀಸ್‌!
x
ಆರೋಪಿ ಚಿನ್ನಯ್ಯ

ಮಾಸ್ಕ್‌ ಮ್ಯಾನ್‌ ಬುರುಡೆ ಚಿನ್ನಯ್ಯ ಜೈಲಿನಿಂದ ರಿಲೀಸ್‌!

ಬುಧವಾರ ಚಿನ್ನಯ್ಯನಿಗೆ ಬೆಳ್ತಂಗಡಿ ಕೋರ್ಟ್‌, ಜಾಮೀನು ಮಂಜೂರು ಮಾಡಿ ತಾತ್ಕಾಲಿಕ್‌ ರಿಲೀಫ್‌ ಕೊಟ್ಟಿತ್ತು. ಇಂದು ಬೆಳಗ್ಗೆ ಜೈಲಿನಿಂದ ರಿಲೀಸ್‌ ಆಗಿದ್ದಾನೆ.


Click the Play button to hear this message in audio format

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಇಂದು ಬೆಳಿಗ್ಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾನೆ. ನಿನ್ನೆ ಚಿನ್ನಯ್ಯನಿಗೆ ಬೆಳ್ತಂಗಡಿ ಕೋರ್ಟ್‌, ಜಾಮೀನು ಮಂಜೂರು ಮಾಡಿ ತಾತ್ಕಾಲಿಕ್‌ ರಿಲೀಫ್‌ ಕೊಟ್ಟಿತ್ತು. ನ್ಯಾಯಾಲಯದ ಆದೇಶದನ್ವಯ ಇಂದು ಬೆಳಿಗ್ಗೆ ಸರಿಯಾಗಿ 7:30ಕ್ಕೆ ಜೈಲಾಧಿಕಾರಿಗಳು ಬುರುಡೆ ಚಿನ್ನಯ್ಯನನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಜೈಲಿನ ನಿಯಮಾವಳಿಗಳ ಪ್ರಕಾರ ಪ್ರಕ್ರಿಯೆಗಳು ಮುಗಿದ ತಕ್ಷಣ ಅವರು ಹೊರಬಂದಿದ್ದಾನೆ.

ಪತ್ನಿಯಿಂದ ಶ್ಯೂರಿಟಿ ಬಾಂಡ್ ಸಲ್ಲಿಕೆ

ಡಿ.17ರಂದು ಇಬ್ಬರು ಜಾಮೀನುದಾರರು ಮತ್ತು ಒಂದು ಲಕ್ಷ ರೂಪಾಯಿ ಬಾಂಡ್ ಜೊತೆಗೆ ಬೆಳ್ತಂಗಡಿ ಪ್ರಧಾನ ಹಿರಿಯ ನ್ಯಾಯಾಲಯಕ್ಕೆ ಬಂದಿದ್ದ ಚಿನ್ನಯ್ಯನ ಪತ್ನಿ ಮಲ್ಲಿಕಾ, ವಕೀಲರೋರ್ವರ ಸಹಾಯದಿಂದ ಕಾನೂನು ಪ್ರಕ್ರಿಯೆ ಪೂರೈಸಿದ್ದಾಳೆ. ಈ ಪ್ರಕ್ರಿಯೆ ಮಧ್ಯಾಹ್ನದ ಊಟದ ವಿರಾಮದ ವರೆಗೂ ಮುಂದುವರೆದಿತ್ತು. ನವೆಂಬರ್ 26ರಂದು ಬೆಳ್ತಂಗಡಿ ನ್ಯಾಯಾಲಯದಿಂದ 12 ಷರತ್ತುಗಳೊಂದಿಗೆ ಜಾಮೀನು ಪಡೆದಿದ್ದ 'ಬುರುಡೆ ' ಖ್ಯಾತಿಯ ಮುಸುಕುಧಾರಿ ಚಿನ್ನಯ್ಯನಿಗೆ ಜಾಮೀನುದಾರರು ಮತ್ತು ಒಂದು ಲಕ್ಷ ರೂಪಾಯಿ ಶೂರಿಟಿ ಬಾಂಡ್ ಹೊಂದಿಸುವುದು ಕಷ್ಟವಾಗಿತ್ತು. ಇದಕ್ಕಾಗಿ ಆತನ ಸಹೋದರಿ, ಪತ್ನಿ ಮತ್ತು ಸಂಬಂಧಿಕರು ಶಿವಮೊಗ್ಗ ಜೈಲಿಗೆ ಬಂದು ಚಿನ್ನಯ್ಯನನ್ನು ಭೇಟಿಯಾಗಿ ಹೋಗುತ್ತಿದ್ದರು. ಇದೀಗ ಪತ್ನಿ ತನ್ನ ಸಂಬಂಧಿಕರ ಮೂಲಕ ಬಾಂಡ್ ಹಣ ಹೊಂದಿಸಿದ್ದಾಗಿ ತಿಳಿದು ಬಂದಿದೆ.

ನ್ಯಾಯಾಲಯವು ಬಿಡುಗಡೆಗೆ ಅನುಮತಿ ನೀಡಿದ ಪತ್ರವು ನಿನ್ನೆ ಸಂಜೆ ಸುಮಾರು 7:20ಕ್ಕೆ ಇ-ಮೇಲ್ ಮೂಲಕ ಶಿವಮೊಗ್ಗ ಜೈಲಿನ ಅಧಿಕಾರಿಗಳಿಗೆ ತಲುಪಿದೆ. ತಾಂತ್ರಿಕ ಪ್ರಕ್ರಿಯೆಗಳು ನಿನ್ನೆ ರಾತ್ರಿಯೇ ಪೂರ್ಣಗೊಂಡಿರುವುದರಿಂದ ಇಂದು ಬೆಳಿಗ್ಗೆ ಆತನನ್ನು ಬಿಡುಗಡೆ ಮಾಡಲಾಗಿದೆ.

ಯಾರು ಈ ಬುರುಡೆ ಚಿನ್ನಯ್ಯ?

ಬುರುಡೆ ಚಿನ್ನಯ್ಯ (ಸಿಎನ್‌ ಚಿನ್ನಯ್ಯ) ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ಮಾಸ್ಕ್‌ ಧರಿಸಿ ತಲೆಬುರುಡೆ ಹಿಡಿದುಕೊಂಡು ನ್ಯಾಯಾಲಯಕ್ಕೆ ಬಂದು ದೂರು ನೀಡಿದ್ದ. ಈ ಹಿಂದೆ ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದ. ಬುರುಡೆ ಪ್ರಕರಣದಲ್ಲಿ ಸುಳ್ಳು ಹೇಳಿಕೆ ನೀಡಿರುವುದು ತನಿಖೆಯಲ್ಲಿ ಬಯಲಾಗಿದ್ದರಿಂದ ಆತನನ್ನು SIT ಬಂಧಿಸಿತ್ತು.

Read More
Next Story