ʻಬ್ರದರ್ ಸ್ವಾಮಿʼಯವರಿಗೆ ಮೊದಲೇ ಪ್ರಜ್ವಲ್ ಕರ್ಮಕಾಂಡ ತಿಳಿದಿತ್ತು: ಕಾಂಗ್ರೆಸ್
x
ಕಾಂಗ್ರೆಸ್‌

ʻಬ್ರದರ್ ಸ್ವಾಮಿʼಯವರಿಗೆ ಮೊದಲೇ ಪ್ರಜ್ವಲ್ ಕರ್ಮಕಾಂಡ ತಿಳಿದಿತ್ತು: ಕಾಂಗ್ರೆಸ್

ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಲೈಂಗಿಕ ಹಗರಣದ ವಿಡಿಯೋಗಳಿರುವ ಪೆನ್‌ಡ್ರೈವ್‌ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಪ್ರಕರಣದ ವಿಡಿಯೋಗಳನ್ನು ಹಂಚಿಕೊಂಡ ಆರೋಪದ ಮೇಲೆ ಬಿಜೆಪಿ ಮುಖಂಡ ಮತ್ತು ವಕೀಲ ಜಿ.ದೇವರಾಜೇಗೌಡ ಅವರನ್ನು ಮೇ 10ರಂದು ಪೊಲೀಸರು ಬಂಧಿಸಿದ್ದು, ಕಾಂಗ್ರೆಸ್ ಈ ಸಂಬಂಧ ಸರಣಿ ಟ್ವೀಟ್ ಮಾಡಿದೆ.


ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಲೈಂಗಿಕ ಹಗರಣದ ವಿಡಿಯೋಗಳಿರುವ ಪೆನ್‌ಡ್ರೈವ್‌ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ಪ್ರಕರಣದ ವಿಡಿಯೋಗಳನ್ನು ಹಂಚಿಕೊಂಡ ಆರೋಪದ ಮೇಲೆ ಬಿಜೆಪಿ ಮುಖಂಡ ಮತ್ತು ವಕೀಲ ಜಿ ದೇವರಾಜೇಗೌಡ ಅವರನ್ನು ಮೇ ೧೦ ರಾತ್ರಿ ಬಂಧಿಸಲಾಗಿದ್ದು, ಕಾಂಗ್ರೆಸ್ ಈ ಸಂಬಂಧ ಸರಣಿ ಟ್ವೀಟ್ ಮಾಡಿದೆ.

ʻದೇವರಾಜೇಗೌಡ ಏಕಾಏಕಿ ಪತ್ರಿಕಾಗೋಷ್ಠಿ ನಡೆಸಿ ಪೆನ್ ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರನ್ನು ಎಳೆದು ತಂದಾಗಲೇ ಇಲ್ಲೇನೋ ಮಸಲತ್ತಿದೆ ಎಂಬ ಗುಮಾನಿ ದಟ್ಟವಾಗಿತ್ತು. ಆದರೆ, ದೇವರಾಜೇಗೌಡನ ಮಾತುಗಳ ಸ್ಕ್ರೀಪ್, ಡೈರೆಕ್ಷನ್ ಎಲ್ಲವೂ ಬಿಜೆಪಿ ಹೈಕಮಾಂಡ್‌ದ್ದು ಎನ್ನುವ ವಿಷಯ ಈಗ ಬಹಿರಂಗವಾಗಿದೆʼ ಎಂದು ಕಾಂಗ್ರೆಸ್ ಆರೋಪಿಸಿದೆ.

ʻಒಂದೇ ಕಲ್ಲಿನಲ್ಲಿ ಜೆಡಿಎಸ್ ಪಕ್ಷವನ್ನು ಮುಳುಗಿಸುವುದರ ಜೊತೆಗೆ ಕಾಂಗ್ರೆಸ್ ನಾಯಕರನ್ನೂ ಟಾರ್ಗೆಟ್ ಮಾಡುವ ಮಹಾ ಕುತಂತ್ರವನ್ನು ಗೃಹ ಸಚಿವ ಅಮಿತ್ ಶಾ ಮಾಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕರ ಕೂದಲು ಕೊಂಕಿಸಲು ಅಸಾಧ್ಯದ ಮಾತು ಎಂಬುದನ್ನು ಅರ್ಥ ಮಾಡಿಕೊಂಡರೆ ಒಳಿತು. ಈ ಪೆನ್ ಡ್ರೈವ್ ಪ್ರಕರಣದ ಹಿಂದೆ ಬಿಜೆಪಿ ಹಾಗೂ ಬ್ರದರ್ ಸ್ವಾಮಿಯ ಬಹುದೊಡ್ಡ ಷಡ್ಯಂತ್ರ ಅಡಗಿದೆʼ ಎಂದು ದೂರಿದೆ.

ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಪರೋಕ್ಷವಾಗಿ (ಹೆಸರು ಉಲ್ಲೇಖಿಸದೆ) ಟ್ವೀಟ್ ಮಾಡಿರುವ ಕಾಂಗ್ರೆಸ್, ʻಬ್ರದರ್ ಸ್ವಾಮಿಯವರಿಗೆ ಮೊದಲೇ ಪ್ರಜ್ವಲ್ ರೇವಣ್ಣನ ಕರ್ಮಕಾಂಡದ ಬಗ್ಗೆ ತಿಳಿದಿತ್ತು ಎಂಬುದನ್ನು ಸ್ವತಃ ದೇವರಾಜೇಗೌಡನೇ ಒಪ್ಪಿಕೊಂಡಿದ್ದಾರೆ. "ನಾನು 2 ತಿಂಗಳ ಹಿಂದೆಯೇ ಫೋನ್ ಮೂಲಕ ಬ್ರದರ್ ಸ್ವಾಮಿಯವರನ್ನು ಮಾತಾಡಿಸಿದ್ದೆ, ಡ್ರೈವರ್ ಕಾರ್ತಿಕ್ ನ ಜಮೀನು ವಿವಾದವನ್ನು ಬಗೆಹರಿಸಲು ಹೇಳಿದ್ದೆ" ಎಂದು ದೇವರಾಜೇಗೌಡ ಅವರು ಹೇಳಿದ್ದಾರೆ. ಈ ವಿಷಯ ಮೊದಲೇ ತಿಳಿದಿದ್ದರೂ ಬ್ರದರ್ ಸ್ವಾಮಿಗಳು ಏಕೆ ಸುಮ್ಮನಿದ್ದರು?, ರೇವಣ್ಣ ಕುಟುಂಬದ ಹಗರಣ ಹೊರಗೆ ಬಂದರೆ ಬರಲಿ ಎಂಬ ಧೋರಣೆಯಲ್ಲಿದ್ದರೆ? ಮಹಿಳೆಯರಿಗಾದ ಅನ್ಯಾಯದ ಬಗ್ಗೆ ಕಾಳಜಿ ಬರಲಿಲ್ಲವೇ?ʼ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ʻಬ್ರದರ್ ಸ್ವಾಮಿಯವರ ಪ್ರಕಾರ, ಮಹಿಳೆಯರನ್ನು ಅತ್ಯಾಚಾರ ಮಾಡಿದ್ದು ತಪ್ಪಲ್ಲ, ಅದನ್ನು ವಿಡಿಯೋ ಮಾಡಿಕೊಂಡಿದ್ದೂ ತಪ್ಪಲ್ಲ, ಪ್ರಜ್ವಲ್ ಮಾಡಿದ ಮಹಾ ಸಾಧನೆಯನ್ನು ಹೊರ ಜಗತ್ತಿಗೆ ತಿಳಿಸಿದ್ದು ಮಾತ್ರ ಮಹಾ ಅಪರಾಧ. ಮಹಿಳೆಯರ ಗೌರವದ ಹಿತದೃಷ್ಟಿಯಿಂದ ವಿಡಿಯೋಗಳಲ್ಲಿ ಗೌಪ್ಯತೆ ಕಾಪಾಡದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ, ಆದರೆ ಬ್ರದರ್ ಸ್ವಾಮಿಗಳು ಪ್ರಜ್ವಲ್ ಮಾಡಿದ ಮಹಾ ಪಾಪವನ್ನು ಗೌಣವಾಗಿಸುವ ನರೇಟಿವ್ ಕಟ್ಟುತ್ತಿದ್ದಾರೆʼ ಎಂದು ಕಾಂಗ್ರೆಸ್ ದೂರಿದೆ.

ಮುಂದುವರಿದು ಬ್ರದರ್ ಸ್ವಾಮಿಗಳೇ, ನಾಲ್ಕು ತಿಂಗಳ ಹಿಂದೆಯೇ ಈ ಸಂಗತಿಗಳನ್ನು ದೇವರಾಜೇಗೌಡ ಹೊರಗೆಡವಿದಾಗ ಮೌನವಹಿಸಿದ್ದೇಕೆ? ದೇವರಾಜೇಗೌಡನನ್ನು ಭೇಟಿಯಾಗಿ ಪೆನ್ ಡ್ರೈವ್ ಬಿಡುಗಡೆಗೆ ಕುಮ್ಮಕ್ಕು ಕೊಟ್ಟಿದ್ದೇಕೆ ಎಂದು ಪ್ರಶ್ನೆ ಮಾಡಿದೆ.

Read More
Next Story