ಪೆನ್‌ಡ್ರೈವ್‌ ಪ್ರಕರಣ ಕುಖ್ಯಾತಿ: ಗೂಗಲ್‌ ಸರ್ಚ್‌ನಲ್ಲಿ ನಂ.1  ಪ್ರಜ್ವಲ್‌ ರೇವಣ್ಣ
x

ಪೆನ್‌ಡ್ರೈವ್‌ ಪ್ರಕರಣ ಕುಖ್ಯಾತಿ: ಗೂಗಲ್‌ ಸರ್ಚ್‌ನಲ್ಲಿ ನಂ.1 ಪ್ರಜ್ವಲ್‌ ರೇವಣ್ಣ


ಗೂಗಲ್‌ನಲ್ಲಿ ಏನೀಗ ಟ್ರೆಂಡಿಂಗ್‌? ಆರ್‌ಸಿಬಿ? ನರೇಂದ್ರ ಮೋದಿ? ರಾಹುಲ್‌ ಗಾಂಧಿ? ರಶ್ಮಿಕಾ ಮಂದಣ್ಣ? ಎಲ್ಲವೂ ಟ್ರೆಂಡಿಂಗ್‌ ಹೆಸರುಗಳೇ! ಆದರೆ ಅವರೆಲ್ಲರನ್ನೂ ಪೆನ್‌ಡ್ರೈವ್‌ ಪ್ರಕರಣದ ಕುಖ್ಯಾತಿ ಪಡೆದ ಪ್ರಜ್ವಲ್‌ ರೇವಣ್ಣ ಮೀರಿಸಿಬಿಟ್ಟಿದ್ದಾರೆ. ಜತೆಗೆ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಹಗರಣದ ವೀಡಿಯೊಗಳನ್ನು ವೀಕ್ಷಿಸಲು ನೆಟ್ಟಿಗರು ಹೆಚ್ಚು ಆಸಕ್ತಿ ತೋರುತ್ತಿರುವುದು ಕಂಡುಬಂದಿದೆ.

ಗೂಗಲ್‌ನ Search Engine ನಲ್ಲಿ P ಎಂದು ಟೈಪ್‌ ಮಾಡಿದ ತಕ್ಷಣ ಪ್ರಜ್ವಲ್‌ ರೇವಣ್ಣ ಅವರ ಚರಿತ್ರೆ ತೆರೆದುಕೊಳ್ಳುತ್ತದೆ. ಅತಿ ಹೆಚ್ಚು ಜನರು ಪ್ರಜ್ವಲ್‌ ರೇವಣ್ಣ ಎಂದು ಹುಡುಕಾಟ ನಡೆಸಿರುವುದರಿಂದ ಈ ರೀತಿ ಕಾಣಿಸುತ್ತಿದೆ. ಇದರಿಂದ ಜನರು ಪ್ರಜ್ವಲ್‌ ರೇವಣ್ಣ ಅವರ ಹಗರಣದ ಕುರಿತು ತಿಳಿದುಕೊಳ್ಳಲು ಎಷ್ಟು ಉತ್ಸುಕರಾಗಿದ್ದಾರೆ ಎನ್ನುವುದು ಕಾಣಿಸುತ್ತದೆ. ಜನರು Search Engine ನಲ್ಲಿ ಮೋದಿ, ಮತ್ತು ರಾಹುಲ್‌ ಗಾಂಧಿ ಅವರಿಗಿಂದ ಪ್ರಜ್ವಲ್‌ರನ್ನು ಹುಡುಕಲು ಆಸಕ್ತಿ ಹೊಂದಿದ್ದಾರೆ!

ಗೂಗಲ್ ಟ್ರೆಂಡ್ಸ್ ಮತ್ತು ಎಕ್ಸ್‌ನ ಮಾಹಿತಿಯ ಪ್ರಕಾರ, ಜನರು ಒಂದು ವಾರದಿಂದ ತಮ್ಮ ಮೊಬೈಲ್ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳಲ್ಲಿ 'ಪ್ರಜ್ವಲ್ ರೇವಣ್ಣ ವೀಡಿಯೊಗಳು', 'ಪ್ರಜ್ವಲ್ ರೇವಣ್ಣ ವಿಡಿಯೋ', 'ರೇವಣ್ಣ ವೀಡಿಯೊಗಳು', 'ರೇವಣ್ಣ ಸೆಕ್ಸ್' ಎಂದು ಟೈಪ್‌ ಮಾಡಿ ಹುಡುಕಾಟ ನಡೆಸಿದ್ದಾರೆ.

ʻಪ್ರಜ್ವಲ್ ರೇವಣ್ಣ ವೀಡಿಯೊಗಳು ಪೋರ್ನ್', 'ಪ್ರಜ್ವಲ್ ರೇವಣ್ಣ xxx ವೀಡಿಯೊ', 'ಪ್ರಜ್ವಲ್ ರೇವಣ್ಣ ವೈರಲ್ ವೀಡಿಯೊಗಳು', 'ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣದ ವೀಡಿಯೊಗಳು', 'ಪ್ರಜ್ವಲ್ ರೇವಣ್ಣ ಸೆಕ್ಸ್ ವೀಡಿಯೊ ಡೌನ್‌ಲೋಡ್', 'ಪ್ರಜ್ವಲ್ ರೇವಣ್ಣ ಸೆಕ್ಸ್ ವೀಡಿಯೊಗಳು', ʻರೇವಣ್ಣ ವೈರಲ್ ಸೆಕ್ಸ್ ವೀಡಿಯೋʼ ಮತ್ತು 'ಪ್ರಜ್ವಲ್' ಎನ್ನುವ ಮುಂತಾದ ಪದಗಳನ್ನು ಬಳಸಿ‌ ಜನರು ಪ್ರಜ್ವಲ್ ವಿಡಿಯೋಗಳಿಗಾಗಿ ಭಾರೀ ಪ್ರಮಾಣದಲ್ಲಿ ಹುಡುಕಾಟ ನಡೆಸಿದ್ದಾರೆ. ಏಪ್ರಿಲ್ 26 ಮತ್ತು ಮೇ ೩ರವರೆಗೂ ಅವೇ ಪದಗಳು ಟ್ರೆಂಡಿಂಗ್‌ನಲ್ಲಿವೆ.

ಹೆಚ್ಚಿನ ಭಾರತೀಯರು ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ವೀಡಿಯೊಗಳನ್ನು ಹುಡುಕುತ್ತಿದ್ದಾರೆ ಎಂದು ಡೇಟಾ ತೋರಿಸುತ್ತದೆ. ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮೇಲಿನ ಆಸಕ್ತಿಗಿಂತ ಈ ಹಗರಣದ ಬಗ್ಗೆ ಜನರು ಹೆಚ್ಚು ಆಸಕ್ತಿ ಹೊಂದಿದ್ದಾರೆ ಎನ್ನುವುದು ತಿಳಿದುಬಂದಿದೆ.

ಕರ್ನಾಟಕ, ಗೋವಾ, ತೆಲಂಗಾಣ, ಮಹಾರಾಷ್ಟ್ರ, ದೆಹಲಿ, ಸಿಕ್ಕಿಂ, ಮಿಜೋರಾಂ, ನಾಗಾಲ್ಯಾಂಡ್, ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿನ ಜನರು ಹೆಚ್ಗಚಿನ ಪ್ರಮಾಣದಲ್ಲಿ ಪ್ರಜ್ವಲ್‌ ರೇವಣ್ಣನ ಅಶ್ಲೀಲ ವೀಡಿಯೊಗಳಿಗಾಗಿ ಹುಡುಕಾಟ ನಡೆಸಿರುವುದು ಡೇಟಾ ದಲ್ಲಿ ಕಂಡುಬಂದಿದೆ. ಚುನಾವಣೆಯ ಹೊತ್ತಲ್ಲಿ ಸಹಜವಾಗಿ ಗೂಗಲ್‌ನಲ್ಲಿ 'ಲೋಕಸಭಾ ಚುನಾವಣೆ 2024', 'ನರೇಂದ್ರ ಮೋದಿ' ಮತ್ತು 'ರಾಹುಲ್ ಗಾಂಧಿ' ಎಂದು ಹುಡುಕಾಟ ನಡೆಸುತ್ತಾರೆ. ಆದರೆ ಇದೀಗ ಆ ಸಂಖ್ಯೆಯನ್ನೂ ಮೀರಿಸಿ ಜನರು ಪ್ರಜ್ವಲ್‌ನ ವಿಡಿಯೋಗಳಿಗಾಗಿ ಮುಗಿಬಿದ್ದು ಹುಡುಕಾಟ ನಡೆಸಿದ್ದಾರೆ.

ಏಪ್ರಿಲ್ 29 ರಿಂದ ಜನರು ಗೂಗಲ್‌ನಲ್ಲಿ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಯವರ ಭಾಷಣಗಳನ್ನು ಕೇಳುವುದಕ್ಕಿಂತ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವೀಡಿಯೊಗಳನ್ನು ಹುಡುಕಲು ಆಸಕ್ತಿ ತೋರಿಸಿದ್ದಾರೆ. ಅಷ್ಟೇಅಲ್ಲದೇ, X ನಲ್ಲಿಯೂ ಕೂಡ ಜನರು ಪ್ರಧಾನಿ ಮೋದಿಯವರಿಗಿಂತ ಪ್ರಜ್ವಲ್ ರೇವಣ್ಣನ ಬಗ್ಗೆ ಹೆಚ್ಚು ಚರ್ಚಿಸಿದ್ದಾರೆ.

ವಿಕೀಪಿಡಿಯಾದಲ್ಲೂ ಪ್ರಜ್ವಲ್‌ ಪ್ರಕರಣ ದಾಖಲು

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣವು ಕರ್ನಾಟಕ ಮಾತ್ರವಲ್ಲದೇ ದೇಶದಲ್ಲಿಯೇ ಭಾರೀ ಸಂಚಲನ ಸೃಷ್ಟಿಸಿದೆ. ಸಂಸದನ ಈ ಪ್ರಕರಣದ ವಿವರ 'ಗೂಗಲ್‌ ವಿಕೀಪಿಡಿಯಾ' (Wikipedia) ಸೇರಿದೆ. ಗೂಗಲ್‌ ನಲ್ಲಿ ಪ್ರಜ್ವಲ್ ರೇವಣ್ಣ ಅವರ ಹಿನ್ನೆಲೆ ತಿಳಿಸುವ Wikipedia Profile ನಲ್ಲೂ 'ಸೆಕ್ಸ್‌ ಸ್ಕ್ಯಾಂಡಲ್' ಹೆಸರಿನಲ್ಲಿ ಮಾಹಿತಿ ಅಪ್ಲೋಡ್ ಆಗಿದೆ.

ಈ ಮೂಲಕ ಪ್ರಜ್ವಲ್ ರೇವಣ್ಣ ಅವರ ಬಾಲ್ಯ, ಶಿಕ್ಷಣ, ರಾಜಕೀಯ ಪ್ರವೇಶ, ಕ್ಷೇತ್ರ, ರಾಜಕೀಯ ಪಕ್ಷ ಸೇರಿದಂತೆ ಇಡೀ ಅವರ ಇತಿಹಾಸ ತಿಳಿಸುವ ಗೂಗಲ್ ವಿಕೀಪಿಡಿಯಾದಲ್ಲಿ ಅವರ ಅಶ್ಲೀಲ ವಿಡಿಯೋ ಜಾತಕ ಕೂಡ ಲಭ್ಯವಾಗಲಿದೆ. ಪ್ರಜ್ವಲ್ ರೇವಣ್ಣ ಗೂಗಲ್ ಪ್ರೋಫೈಲ್ ಅಪ್ಡೇಟ್ ಸಾಮಾನ್ಯವಾಗಿ ಒಬ್ಬರ ರಾಜಕಾರಣಿಯಾಗಲಿ, ಸೆಲೆಬ್ರೆಟಿಗಳಾಗಲಿ ಅಥವಾ ಇನ್ನಿತರ ಸಾರ್ವಜನಿಕ ಜೀವನದಲ್ಲಿರುವ ಪ್ರಮುಖ ವ್ಯಕ್ತಿಗಳ ಜೀವನ, ಇತಿಹಾಸ ಎಲ್ಲವು ಗೂಗಲ್‌ನಲ್ಲಿ (ವೀಕಿಪಿಡಿಯಾ) ಲಭ್ಯವಿರುತ್ತವೆ. ಅದೇ ರೀತಿ ಪ್ರಜ್ವಲ್ ರೇವಣ್ಣ ಅವರ ಮಾಹಿತಿ ಸಹ ಲಭ್ಯವಿತ್ತು. ಆದರೆ ಪೆನ್‌ಡ್ರೈವ್ ಅಶ್ಲೀಲ ವಿಡಿಯೋ ಪ್ರಕರಣ ಹೊರ ಬರುತ್ತಿದ್ದಂತೆ ಅವರ ಗೂಗಲ್ ಪ್ರೋಪೈಲ್‌ ನಲ್ಲಿ 'ಸೆಕ್ಸ್ ಸ್ಕ್ಯಾಂಡಲ್-ತನಿಖೆ' ಉಪ ಶಿರ್ಷಿಕೆಯಡಿ ಪ್ರಕರಣದ ಮಾಹಿತಿ ಅಪ್ಲೋಡ್ ಆಗಿವೆ.

Read More
Next Story