ಬೆಂಗಳೂರು ಏರ್‌ಪೋರ್ಟ್‌ಗೆ ಉಪನಗರ ರೈಲು: ನಿಲ್ದಾಣದೊಳಗೆ ಅಂಡರ್‌ಗ್ರೌಂಡ್ ರೈಲು!
x

ಎಕ್ಸ್ ಪೋಸ್ಟ್​ (Devanahalli Rising-North Bengaluru)

ಬೆಂಗಳೂರು ಏರ್‌ಪೋರ್ಟ್‌ಗೆ 'ಉಪನಗರ ರೈಲು: ನಿಲ್ದಾಣದೊಳಗೆ 'ಅಂಡರ್‌ಗ್ರೌಂಡ್' ರೈಲು!

ರಾಜ್ಯ ಸರ್ಕಾರ ಮತ್ತು ಭಾರತೀಯ ರೈಲ್ವೆ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿರುವ ಈ ಮಾರ್ಗವು ಕೆಎಸ್‌ಆರ್ ಬೆಂಗಳೂರು-ದೇವನಹಳ್ಳಿ ಮಾರ್ಗದ 'ಸಂಪಿಗೆ ಲೈನ್'ನ (Sampige Line) ಭಾಗವಾಗಿದೆ.


Click the Play button to hear this message in audio format

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವ 8.5 ಕಿ.ಮೀ. ಉದ್ದದ ಮೀಸಲಾದ ಉಪನಗರ ರೈಲು ಮಾರ್ಗ (Dedicated Suburban Rail Spur) ನಿರ್ಮಾಣಕ್ಕೆ 4,100 ಕೋಟಿ ರೂಪಾಯಿ ಅನುದಾನ ಅನುಮೋದನೆಗೊಂಡಿದೆ.

Devanahalli Rising-North Bengaluru ( ಎಕ್ಸ್​ ಪೋಸ್ಟ್​​)

ರಾಜ್ಯ ಸರ್ಕಾರ ಮತ್ತು ಭಾರತೀಯ ರೈಲ್ವೆ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿರುವ ಈ ಮಾರ್ಗವು ಕೆಎಸ್‌ಆರ್ ಬೆಂಗಳೂರು-ದೇವನಹಳ್ಳಿ ಮಾರ್ಗದ 'ಸಂಪಿಗೆ ಲೈನ್'ನ (Sampige Line) ಭಾಗವಾಗಿದೆ. ಈ ಯೋಜನೆಯು 2030ರ ವೇಳೆಗೆ ಪೂರ್ಣಗೊಳ್ಳುವ 41.4 ಕಿ.ಮೀ. ಕಾರಿಡಾರ್‌ಗಿಂತ ಭಿನ್ನವಾಗಿದೆ.

ಯೋಜನೆಯ ಪ್ರಮುಖ ಅಂಶಗಳು

ಮುಖ್ಯ ರೈಲು ಮಾರ್ಗದಿಂದ ವಿಮಾನ ನಿಲ್ದಾಣಕ್ಕೆ ಕವಲೊಡೆಯುವ ಈ ಮಾರ್ಗವು 8.5 ಕಿ.ಮೀ. ಉದ್ದವಿರಲಿದೆ. ವಿಮಾನ ನಿಲ್ದಾಣದ ಆವರಣದೊಳಗೆ ರೈಲು 3.5 ಕಿ.ಮೀ. ದೂರ ನೆಲದಡಿಯ ಮಾರ್ಗದಲ್ಲಿ (Underground Section) ಚಲಿಸಲಿದೆ.


ಈ ಮಾರ್ಗದಲ್ಲಿ ಒಟ್ಟು ನಾಲ್ಕು ನಿಲ್ದಾಣಗಳನ್ನು ಯೋಜಿಸಲಾಗಿದೆ. ಕೆಐಎಡಿಬಿ ಏರೋಸ್ಪೇಸ್ ಪಾರ್ಕ್ (KIADB Aerospace Park) - ಕಾರ್ಯಾರಂಭ ಏರ್‌ಪೋರ್ಟ್ ಟರ್ಮಿನಲ್ (Airport Terminal) ಬಿ.ಕೆ. ಹಳ್ಳಿ (BK Halli) ಇದು ಭವಿಷ್ಯದ ಯೋಜನೆ ಹಾಗೂ ಏರ್‌ಪೋರ್ಟ್ ಸಿಟಿ (Airport City). ಇದು ಕೂಡ ಭವಿಷ್ಯದ ಯೋಜನೆ

ಪ್ರಯಾಣಿಕರಿಗೆ ಅನುಕೂಲವೇನು?

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಟ್ರಾಫಿಕ್ ದಟ್ಟಣೆ ಹೆಚ್ಚಾಗಿದೆ. ಈ ಹೊಸ ರೈಲು ಮಾರ್ಗವು ರಸ್ತೆ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದ್ದು, ಪ್ರಯಾಣಿಕರಿಗೆ ವೇಗದ ಮತ್ತು ಸುಗಮ ಸಂಪರ್ಕ ಒದಗಿಸಲಿದೆ. 'ಡೆಕ್ಕನ್ ಹೆರಾಲ್ಡ್' ವರದಿಯ ಪ್ರಕಾರ, ಮುಂದಿನ ಒಂದು ವರ್ಷದೊಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಯೋಜನೆಯು ಬೆಂಗಳೂರಿನ ಉತ್ತರ ಭಾಗದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡುವ ಆಶಾಕಿರಣವಾಗಿದೆ.

Read More
Next Story