ಪ್ರತಿಮೆಗೆ ಸಾಂತಾ–ಕ್ಲಾಸ್ ಟೋಪಿ ಹಾಕಿರುವ ಆರೋಪಿಗಳು
ಬೆಳಗಾವಿ| ಗಾಂಧಿ ಪ್ರತಿಮೆಗೆ ಸಾಂತಾ ಟೋಪಿ ಅಪಮಾನ ಪ್ರಕರಣದಲ್ಲಿ ಇಬ್ಬರ ಬಂಧನ
ಬಂಧಿತರನ್ನು ಕ್ಯಾಂಪ್ ಪ್ರದೇಶದ ಬೋಸ್ ಲೈನ್‌ನ ಪಿಲಿಪ್ ಸಿಮೋನ್ ಸಪ್ಪರಪು (25) ಹಾಗೂ ಹಿಂದವಾಡಿಯ ಆದರ್ಶ ನಗರದ ಆದಿತ್ಯ ನವಜೀತ್ ಹೆಡಾ (25) ಎಂದು ಗುರುತಿಸಲಾಗಿದೆ.
ಹಿಂಡಲಗಾ ರಸ್ತೆ ಗಾಂಧಿ ಚೌಕ್‌ನಲ್ಲಿ ಸ್ಥಾಪಿತವಾಗಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಸಾಂತಾ–ಕ್ಲಾಸ್ ಟೋಪಿ ಹಾಕಿ ಅವಮಾನ ಮಾಡಿದ ಆರೋಪದ ಮೇಲೆ ಇಬ್ಬರನ್ನು ಕ್ಯಾಂಪ್ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ.
ಬಂಧಿತರನ್ನು ಕ್ಯಾಂಪ್ ಪ್ರದೇಶದ ಬೋಸ್ ಲೈನ್‌ನ ಪಿಲಿಪ್ ಸಿಮೋನ್ ಸಪ್ಪರಪು (25) ಹಾಗೂ ಹಿಂದವಾಡಿಯ ಆದರ್ಶ ನಗರದ ಆದಿತ್ಯ ನವಜೀತ್ ಹೆಡಾ (25) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಡಿಸೆಂಬರ್ 27ರ ರಾತ್ರಿ ಈ ಇಬ್ಬರೂ ಗಾಂಧಿ ಪ್ರತಿಮೆಗೆ ಸಾಂತಾ ಟೋಪಿ ಹಾಕಿದ್ದರು ಮತ್ತು ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೊ ಆಧರಿಸಿ ತನಿಖೆ ಆರಂಭಿಸಿದ ಕ್ಯಾಂಪ್ ಠಾಣೆ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಕೃತ್ಯದಿಂದ ಸ್ಥಳೀಯರಲ್ಲಿ ಆಕ್ರೋಶ ಉಂಟಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಮುಂದುವರಿಸಿದ್ದಾರೆ.
Next Story