MGNREGAಯಲ್ಲಿ ಗಾಂಧಿ ಹೆಸರು ಔಟ್| 'ಇವರು ಗೋಡ್ಸೆ ವಂಶದವರು' ಎಂದ ಸಚಿವ ಮಧು ಬಂಗಾರಪ್ಪ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಯಿಂದ 'ಮಹಾತ್ಮ ಗಾಂಧಿ' ಅವರ ಹೆಸರನ್ನು ಕೈಬಿಡುವ ಚರ್ಚೆಗೆ ಸಂಬಂಧಿಸಿದಂತೆ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಬಿಜೆಪಿಯವರು ಗೋಡ್ಸೆ ಪ್ರಿಯರು, ಅದಕ್ಕಾಗಿಯೇ ಅವರು ಗಾಂಧೀಜಿಯ ಹೆಸರನ್ನು ತೆಗೆದುಹಾಕಲು ಯೋಚಿಸುತ್ತಿದ್ದಾರೆ. ಇವರೊಬ್ಬರಿಂದ ಗಾಂಧೀಜಿಯ ಹೆಸರನ್ನು ಅಳಿಸಲು ಸಾಧ್ಯವಿಲ್ಲ" ಎಂದು ಮಧು ಬಂಗಾರಪ್ಪ ಅವರು ಬಿಜೆಪಿ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರದ ಈ ಚಿಂತನೆಯು ಮಹಾತ್ಮ ಗಾಂಧೀಜಿಗೆ ಮಾಡುವ ಅವಮಾನ ಎಂದು ಅವರು ಆರೋಪಿಸಿದ್ದಾರೆ. ಈ ವಿಡಿಯೋದಲ್ಲಿ, ಸಚಿವ ಮಧು ಬಂಗಾರಪ್ಪ ಅವರ ಸಂಪೂರ್ಣ ಹೇಳಿಕೆ ಮತ್ತು ಈ ವಿವಾದದ ಹಿನ್ನೆಲೆಯನ್ನು ವಿವರಿಸಲಾಗಿದೆ.


