Police Recruitment | Order to prepare for filling 8,176 posts, how many posts for which department?
x

ಪ್ರಕಟಣೆ ಹೊರಡಿಸಿರುವ ಪೊಲೀಸ್‌ ಇಲಾಖೆ

Police Recruitment |8,176 ಹುದ್ದೆಗಳ ಭರ್ತಿ ಸಿದ್ಧತೆಗೆ ಆದೇಶ- ಯಾವ ವಿಭಾಗಕ್ಕೆ ಎಷ್ಟು ಹುದ್ದೆ?

ಮೀಸಲಾತಿ ಆದೇಶದಂತೆ ಶೇ.50ಕ್ಕೆ ನಿಗದಿಪಡಿಸಲಾಗಿರುವ ರೋಸ್ಟರ್ ಬಿಂದುಗಳ ಅನುಸಾರ ವರ್ಗೀಕರಣ ವಿವರವನ್ನು ತಯಾರಿಸಿ ಮಾ.5ರೊಳಗೆ ನೇಮಕಾತಿ ವಿಭಾಗಕ್ಕೆ ಕಳುಹಿಸಲು ನಿಯಮಾನುಸಾರ ಕ್ರಮವಹಿಸುವಂತೆ ಕೋರಲಾಗಿದೆ.


Click the Play button to hear this message in audio format

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.80 ಲಕ್ಷ ಹುದ್ದೆಗಳ ಪೈಕಿ ಮೊದಲ ಹಂತವಾಗಿ 56,342 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಇತ್ತೀಚೆಗೆ ತಿಳಿಸಿತ್ತು. ಅದರ ಭಾಗವಾಗಿ ಪೊಲೀಸ್‌ ಇಲಾಖೆ 8,176 ಹುದ್ದೆಗಳನ್ನು ಭರ್ತಿ ಮಾಡಲು ಸಿದ್ಧತೆ ಆರಂಭಿಸಿದೆ.

ಈ ಕುರಿತು ಡೈರೆಕ್ಟರ್‌ ಜನರಲ್‌ ಮತ್ತು ಇನ್ಸ್‌ಪೆಕ್ಟರ್‌ ಜನರಲ್‌ ಪೊಲೀಸ್‌ ಆಫ್‌ ಪೊಲೀಸ್‌ ಡಾ.ಎಂ.ಎ. ಸಲೀಂ ಆದೇಶ ಹೊರಡಿಸಿದ್ದು, ಇಲಾಖೆಯ ವಿವಿಧ ವಿಭಾಗಗಳಿಗೆ ಹಂಚಿಕೆ ಮಾಡಿರುವ ಹುದ್ದೆಗಳಿಗೆ ಸರ್ಕಾರದ ನೇಮಕಾತಿ ನಿಯಮಗಳನ್ವಯ ಭರ್ತಿ ಮಾಡುವಂತೆ ಸಿಐಡಿ, ಕೆಎಸ್‌ಆರ್‌ಪಿ, ನಗರ ಪೊಲೀಸ್‌ ಆಯುಕ್ತರು ಹಾಗೂ ಎಲ್ಲಾ ಜಿಲ್ಲಾ ಪೊಲೀಸ್‌ ಅಧೀಕ್ಷರುಗಳಿಗೆ ಸೂಚನೆ ನೀಡಿದ್ದಾರೆ.

ಯಾವ ವಿಭಾಗಕ್ಕೆ ಎಷ್ಟು ಹುದ್ದೆಗಳು ?

ರಾಜ್ಯ ಪೊಲೀಸ್‌ ಇಲಾಖೆಯ ಡಿಟೆಕ್ಟಿವ್‌ ಸಬ್‌ ಇನ್ಸ್‌ಪೆಕ್ಟರ್‌ 20 ಹುದ್ದೆಗಳು, ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ 1,650 ಹುದ್ದೆಗಳು, ಸಿವಿಲ್‌ ಪೊಲೀಸ್‌ ಕಾನ್ಸ್‌ಟೇಬಲ್‌ 4,110 ಹುದ್ದೆಗಳು, ಕೆಎಸ್‌ಆರ್‌ಪಿ 2,032 ಹುದ್ದೆಗಳು ಹಾಗೂ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಪೊಲೀಸ್‌ ಕಾನ್ಸ್‌ಟೇಬಲ್‌ 364 ಹುದ್ದೆಗಳನ್ನು ಭರ್ತಿ ಮಾಡಲು ಸಿದ್ಧತೆ ಮಾಡಿದೆ. ಇದರಲ್ಲಿ ಕಲ್ಯಾಣ ಕರ್ನಾಟಕಕ್ಕೆ 1,786 ಹಾಗೂ ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳ ಅಭ್ಯರ್ಥಿಗಳಿಗೆ 6,390 ಹುದ್ದೆಗಳನ್ನು ವಿಂಗಡಿಸಲಾಗಿದೆ.

ಆದೇಶದಲ್ಲೇನಿದೆ ?

ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ.15 ರಿಂದ ಶೇ. 17 ಕ್ಕೆ ಹಾಗೂ ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಿಸಲಾದ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಅಧಿನಿಯಮ-2022 ಅನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ಹೈಕೋರ್ಟ್‌ ಅರ್ಜಿಗಳ ಸಂಬಂಧ 2025 ನವೆಂಬರ್‌ 27ರಂದು ನೀಡಿರುವ ಮಧ್ಯಂತರ ಆದೇಶವನ್ನು ಪರಿಗಣಿಸಿ ಸರ್ಕಾರವು ಸಿವಿಲ್ ಸೇವಾ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ನಿರ್ದೇಶನಗಳನ್ನು ನೀಡಿದೆ.

ಶೇ.5 ಹುದ್ದೆ ಬ್ಯಾಕ್‌ಲಾಗ್‌ಗೆ ?

ಮುಂದುವರಿದು, ಈಗಾಗಲೇ ತಮ್ಮ ಘಟಕಗಳಿಂದ ಖಾಲಿ ಹುದ್ದೆಗಳಿಗೆ ಸಂಬಂಧಿಸಿಂದತೆ ಒದಗಿಸಲಾಗಿರುವ ವರ್ಗಿಕರಣದ ವಿವರವನ್ನು ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ನೀಡಿರುವ ನಿರ್ದೇಶನಗಳ ಅನುಸಾರ ಮರು ಪರಿಶೀಲಿಸಿ ತಮ್ಮ ಘಟಕಗಳಿಗೆ ಹಂಚಿಕೆಮಾಡಿರುವ ಒಟ್ಟು ಹುದ್ದೆಗಳಲ್ಲಿ ಶೇ.5 ರಷ್ಟು ಹುದ್ದೆಗಳನ್ನು ಕಾಯ್ದಿರಿಸಿಕೊಂಡು ಉಳಿದ ಹುದ್ದೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಜಾರಿಯಲ್ಲಿ ಮೀಸಲಾತಿ ಆದೇಶದಂತೆ ಶೇ.50ಕ್ಕೆ ನಿಗದಿಪಡಿಸಲಾಗಿರುವ ರೋಸ್ಟರ್ ಬಿಂದುಗಳ ಅನುಸಾರ ವರ್ಗೀಕರಣ ವಿವರವನ್ನು ತಯಾರಿಸಿ ಮಾ.5ರೊಳಗೆ ನೇಮಕಾತಿ ವಿಭಾಗಕ್ಕೆ ಕಳುಹಿಸಲು ನಿಯಮಾನುಸಾರ ಕ್ರಮವಹಿಸುವಂತೆ ಕೋರಲಾಗಿದೆ ಎಂದು ಆದೇಶದಲ್ಲಿ ಸೂಚನೆ ನೀಡಿದ್ದಾರೆ.

Read More
Next Story