Recruitment for 11,127 Assistant Loco Pilot posts in Indian Railways
x

ಸಾಂದರ್ಭಿಕ ಚಿತ್ರ

ಭಾರತೀಯ ರೈಲ್ವೆಯಲ್ಲಿ 11,127 ಅಸಿಸ್ಟಂಟ್ ಲೋಕೊ ಪೈಲಟ್ ಹುದ್ದೆಗಳ ನೇಮಕ

ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ಮಾನಸಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ತಪಾಸಣೆ ಮತ್ತು ದಾಖಲೆ ಪರಿಶೀಲನೆಯ ಮೂಲಕ ನೇಮಕಾತಿ ನಡೆಯಲಿದೆ ಎಂದು ರೈಲ್ವೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


Click the Play button to hear this message in audio format

ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡಬೇಕೆಂಬ ಆಕಾಂಕ್ಷೆ ಹೊಂದಿರುವ ಅಭ್ಯರ್ಥಿಗಳಿಗೆ ಒಳ್ಳೆಯ ಸುದ್ದಿ ಇದೆ. ಕೇಂದ್ರ ಸರ್ಕಾರದ ರೈಲ್ವೆ ಸಚಿವಾಲಯ ಫೆಬ್ರವರಿ 19, 2026ರಂದು ಅಧಿಕೃತವಾಗಿ 11,127 ಅಸಿಸ್ಟಂಟ್ ಲೋಕೊ ಪೈಲಟ್ (ALP) ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಿ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳನ್ನು CEN 01/2026 ಕೇಂದ್ರೀಕೃತ ಉದ್ಯೋಗ ಅಧಿಸೂಚನೆ ಮೂಲಕ ದೇಶದ 17 ರೈಲ್ವೆ ವಲಯಗಳಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತದೆ.

ರೈಲ್ವೆ ವಲಯವಾರು ಹುದ್ದೆಗಳ ವಿವರ

17 ರೈಲ್ವೆ ವಲಯಗಳಲ್ಲಿ 11,127 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದ್ದು, ಅದರಲ್ಲಿ ಪ್ರಮುಖ ವಲಯಗಳ ಮಾಹಿತಿ ಹೀಗಿದೆ.

- ಈಸ್ಟ್ ಕೋಸ್ಟ್ ರೈಲ್ವೆ: 1,625 ಹುದ್ದೆಗಳು (ಅತಿ ಹೆಚ್ಚು)

- ಸೆಂಟ್ರಲ್ ರೈಲ್ವೆ: 1,400 ಹುದ್ದೆಗಳು

- ಸೌತ್ ಈಸ್ಟರ್ನ್ ರೈಲ್ವೆ: 1,531 ಹುದ್ದೆಗಳು

- ನಾರ್ತ್ ಈಸ್ಟ್ ಫ್ರಾಂಟಿಯರ್ ರೈಲ್ವೆ: 1,276 ಹುದ್ದೆಗಳು

- ಸೌತ್ ವೆಸ್ಟರ್ನ್ ರೈಲ್ವೆ (ಕರ್ನಾಟಕ): 200 ಹುದ್ದೆಗಳು

- ಚಿತ್ತರಂಜನ್ ಲೋಕೊಮೋಟಿವ್ ವರ್ಕ್ಸ್ (CLW): 6 ಹುದ್ದೆಗಳು

ಅರ್ಹತೆ ಮತ್ತು ವಯೋಮಿತಿ

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಎಸ್ಸೆಸ್ಸೆಲ್ಸಿ, ಐಟಿಐ, ಡಿಪ್ಲೊಮಾ ಅಥವಾ ಪದವಿ ಮುಗಿಸಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷ ವಯೋಮಿತಿ ನಿಗದಿಯಾಗಿದ್ದು, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 500 ರೂ. ಹಾಗೂ ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕರು ಮತ್ತು ಮಹಿಳೆಯರಿಗೆ 250 ರೂ. ಅರ್ಜಿ ಶುಲ್ಕ ಇರುತ್ತದೆ (ಪರೀಕ್ಷೆಗೆ ಹಾಜರಾದ ನಂತರ ಮರಳಿ ನೀಡಲಾಗುತ್ತದೆ).

ಆಯ್ಕೆ ಪ್ರಕ್ರಿಯೆ ಮತ್ತು ಮಹತ್ವದ ದಿನಾಂಕಗಳು

ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ಮಾನಸಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ತಪಾಸಣೆ ಮತ್ತು ದಾಖಲೆ ಪರಿಶೀಲನೆಯ ಮೂಲಕ ನೇಮಕಾತಿ ನಡೆಯಲಿದೆ. ಸಂಪೂರ್ಣ ಅಧಿಸೂಚನೆ ಮೇ 2026ರಲ್ಲಿ ಹೊರಡಿಸಲಾಗುವ ನಿರೀಕ್ಷೆ ಇದ್ದು, ಆನ್‌ಲೈನ್ ಅರ್ಜಿ ಸ್ವೀಕಾರ ಮೇ-ಜೂನ್ 2026ರ ನಡುವೆ ಆರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ indianrailways.gov.in ಅಥವಾ rrbapply.gov.in ಗೆ ಭೇಟಿ ನೀಡಿ ಅಧಿಸೂಚನೆ ಪರಿಶೀಲಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳುವುದು ಸೂಕ್ತ.

Read More
Next Story