NASA’s Artemis II Launch| ನಾಸಾ ಆರ್ಟೆಮಿಸ್-2 ಮಿಷನ್ ಉಡಾವಣೆ: 50 ವರ್ಷಗಳ ನಂತರ ಚಂದ್ರನತ್ತ ಮಾನವ ಪಯಣ!
x
ನಾಸಾ ಆರ್ಟೆಮಿಸ್-2 ಮಿಷನ್ ಉಡಾವಣೆ(ಸಂಗ್ರಹ ಚಿತ್ರ)

NASA’s Artemis II Launch| ನಾಸಾ ಆರ್ಟೆಮಿಸ್-2 ಮಿಷನ್ ಉಡಾವಣೆ: 50 ವರ್ಷಗಳ ನಂತರ ಚಂದ್ರನತ್ತ ಮಾನವ ಪಯಣ!

ನಾಸಾದ ಆರ್ಟೆಮಿಸ್-2 ಮಿಷನ್ ಬುಧವಾರ ಯಶಸ್ವಿಯಾಗಿ ಉಡಾವಣೆಯಾಗಿದೆ. 50 ವರ್ಷಗಳ ನಂತರ ಮಾನವ ಚಂದ್ರನತ್ತ ಪ್ರಯಾಣ ಬೆಳೆಸಿದ್ದಾರೆ.


ಜಾಗತಿಕ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಬರೆಯಲು ನಾಸಾ (NASA) ಸಜ್ಜಾಗಿದೆ. ಬುಧವಾರ ಸಂಜೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಬೃಹತ್ ರಾಕೆಟ್ ಚಂದಿರನತ್ತ ತನ್ನ ಪಯಣ ಬೆಳೆಸಿದೆ. ಕಳೆದ 50 ವರ್ಷಗಳಿಗೂ ಹೆಚ್ಚು ಸಮಯದ ನಂತರ ಮಾನವ ಚಂದ್ರನತ್ತ ಕೈಗೊಂಡ ಮೊದಲ ಪಯಣ ಇದಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಚಂದ್ರನ ಮೇಲೆ ಮಾನವನನ್ನು ಇಳಿಸುವ ನಾಸಾದ ಮಹತ್ವಾಕಾಂಕ್ಷೆಯ ಮೊದಲ ಹೆಜ್ಜೆಯಾಗಿದೆ.

ಗಗನಯಾತ್ರಿಗಳ ತಂಡ ಮತ್ತು ವಿಶೇಷತೆ

ಈ ಐತಿಹಾಸಿಕ 'ಆರ್ಟೆಮಿಸ್-2' ಮಿಷನ್‌ನಲ್ಲಿ ಮೂವರು ಅಮೆರಿಕನ್ನರು ಮತ್ತು ಒಬ್ಬ ಕೆನಡಿಯನ್ ಗಗನಯಾತ್ರಿಗಳನ್ನು ಒಳಗೊಂಡ ಅತ್ಯಂತ ವೈವಿಧ್ಯಮಯ ತಂಡವಿದ್ದು, ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳೆ ಕ್ರಿಸ್ಟಿನಾ ಕೋಚ್, ಕಪ್ಪು ವರ್ಣೀಯ ಪೈಲಟ್ ವಿಕ್ಟರ್ ಗ್ಲೋವರ್ ಹಾಗೂ ಅಮೆರಿಕದ ಹೊರಗಿನ ವ್ಯಕ್ತಿಯಾಗಿ ಕೆನಡಾದ ಜೆರೆಮಿ ಹ್ಯಾನ್ಸೆನ್ ಅವರು ಕಮಾಂಡರ್ ರೀಡ್ ವೈಸ್‌ಮನ್ ನೇತೃತ್ವದಲ್ಲಿ ಚಂದ್ರನತ್ತ ಪಯಣ ಬೆಳೆಸಿದ್ದಾರೆ; ಈ ತಂಡವು "ಲೆಟ್ಸ್ ಗೋ ಟು ದಿ ಮೂನ್!" (ಚಂದ್ರನತ್ತ ಹೋಗೋಣ!) ಎಂಬ ಘೋಷಣೆಯೊಂದಿಗೆ ನಾಸಾದ ಅತ್ಯಾಧುನಿಕ 'ಓರಿಯನ್' (Orion) ಕ್ಯಾಪ್ಸುಲ್ ಏರಿ ಹೊಸ ಯುಗದ ಆರಂಭಕ್ಕೆ ಸಾಕ್ಷಿಯಾಗಿದೆ.


ಲಾಂಚ್ ಮತ್ತು ಮಿಷನ್ ವಿವರ

ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್‌ನಿಂದ 32 ಅಂತಸ್ತಿನ ಎತ್ತರದ 'ಸ್ಪೇಸ್ ಲಾಂಚ್ ಸಿಸ್ಟಮ್' (SLS) ರಾಕೆಟ್ ಹಾರುವ ದೃಶ್ಯವನ್ನು ಹತ್ತಾರು ಸಾವಿರ ಜನರು ಸಾಕ್ಷಿಯಾದರು. ಇದು 1960 ಮತ್ತು 70ರ ದಶಕದ ಅಪೊಲೊ ಮಿಷನ್‌ಗಳ ದಿನಗಳನ್ನು ನೆನಪಿಸುವಂತಿತ್ತು. 10 ದಿನಗಳ ಈ ಪರೀಕ್ಷಾರ್ಥ ಹಾರಾಟದಲ್ಲಿ ಗಗನಯಾತ್ರಿಗಳು ಚಂದ್ರನ ಸುತ್ತ 4,00,000 ಕಿ.ಮೀ ದೂರ ಪ್ರಯಾಣಿಸಲಿದ್ದಾರೆ.

ಈ ಮಿಷನ್‌ನಲ್ಲಿ ಗಗನಯಾತ್ರಿಗಳು ಚಂದ್ರನ ಮೇಲೆ ಇಳಿಯುವುದಿಲ್ಲ ಅಥವಾ ಚಂದ್ರನ ಕಕ್ಷೆಯಲ್ಲಿ ಸುತ್ತುವುದಿಲ್ಲ. ಬದಲಾಗಿ, ಚಂದ್ರನ ಪಕ್ಕದಿಂದ ಹಾದು ಹೋಗಿ, ಭೂಮಿಯಿಂದ ಸುಮಾರು 6,400 ಕಿ.ಮೀ ದೂರದವರೆಗೆ (ಅತಿ ದೂರದ ಬಾಹ್ಯಾಕಾಶ) ಸಾಗಿ ಮತ್ತೆ ಪೆಸಿಫಿಕ್ ಮಹಾಸಾಗರಕ್ಕೆ ಮರಳಲಿದ್ದಾರೆ.

ಮಿಷನ್‌ನಲ್ಲಿರುವ ಸವಾಲುಗಳು ಮತ್ತು ಪರೀಕ್ಷೆಗಳು

ಓರಿಯನ್ ಕ್ಯಾಪ್ಸುಲ್‌ನಲ್ಲಿ ಮೊದಲ ಬಾರಿಗೆ ಮಾನವನ ಜೀವ ಉಳಿಸುವ ವ್ಯವಸ್ಥೆಗಳು ಶೌಚಾಲಯ ಮತ್ತು ನೀರಿನ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಇವುಗಳ ಕಾರ್ಯಕ್ಷಮತೆಯನ್ನು ಈ ಮಿಷನ್‌ನಲ್ಲಿ ಪರೀಕ್ಷಿಸಲಾಗುತ್ತದೆ. ಭೂಮಿಯ ಕಕ್ಷೆಯಲ್ಲಿರುವಾಗ ಗಗನಯಾತ್ರಿಗಳು ಸ್ವತಃ ಕ್ಯಾಪ್ಸುಲ್ ಅನ್ನು ನಿಯಂತ್ರಿಸುವ ತರಬೇತಿ ನಡೆಸಲಿದ್ದಾರೆ. ಸ್ವಯಂಚಾಲಿತ ವ್ಯವಸ್ಥೆ ವಿಫಲವಾದರೆ ಪೈಲಟ್‌ಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದು ಇದರ ಉದ್ದೇಶ.

ಚಂದ್ರನ ಹತ್ತಿರ ಸಾಗುವಾಗ ಗಗನಯಾತ್ರಿಗಳು ಚಂದ್ರನು ಸೂರ್ಯನನ್ನು ಮರೆಮಾಚುವ 'ಸೂರ್ಯ ಗ್ರಹಣ'ದ ಅದ್ಭುತ ದೃಶ್ಯವನ್ನು ಬಾಹ್ಯಾಕಾಶದಿಂದಲೇ ವೀಕ್ಷಿಸಲಿದ್ದಾರೆ.

ಮುಂದಿನ ಗುರಿ ಏನು?

ನಾಸಾದ ಹೊಸ ಅಡ್ಮಿನಿಸ್ಟ್ರೇಟರ್ ಜ್ಯಾರೆಡ್ ಐಸಾಕ್‌ಮನ್ ಅವರ ನೇತೃತ್ವದಲ್ಲಿ ಮಿಷನ್‌ನ ವೇಗವನ್ನು ಹೆಚ್ಚಿಸಲಾಗಿದೆ.

• ಆರ್ಟೆಮಿಸ್-3 (2027): ಓರಿಯನ್ ಕ್ಯಾಪ್ಸುಲ್ ಮತ್ತು ಲೂನಾರ್ ಲ್ಯಾಂಡರ್ ನಡುವೆ ಕಕ್ಷೆಯಲ್ಲಿ ಡಾಕಿಂಗ್ ಪ್ರಕ್ರಿಯೆಯ ತರಬೇತಿ.

• ಆರ್ಟೆಮಿಸ್-4 (2028): ಚಂದ್ರನ ದಕ್ಷಿಣ ಧ್ರುವದ ಮೇಲೆ ಮಾನವನನ್ನು ಇಳಿಸುವ ಗುರಿ. ಇದು ಚೀನಾ ತನ್ನ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸಲು ಯೋಜಿಸಿರುವ ಸಮಯಕ್ಕಿಂತ (2030) ಎರಡು ವರ್ಷ ಮೊದಲೇ ನಡೆಯಲಿದೆ.

ಅಪೊಲೊ ಮತ್ತು ಆರ್ಟೆಮಿಸ್ ನಡುವಿನ ವ್ಯತ್ಯಾಸ

1960ರ ದಶಕದಲ್ಲಿ ನಡೆದ ಅಪೊಲೊ ಮಿಷನ್‌ಗಳು ಕೇವಲ ಸೋವಿಯತ್ ಯೂನಿಯನ್ ವಿರುದ್ಧದ ಓಟವಾಗಿದ್ದವು. ಆದರೆ 'ಆರ್ಟೆಮಿಸ್' ಮಿಷನ್ ಚಂದ್ರನ ಮೇಲೆ ಖಾಯಂ ನೆಲೆ (Sustainable Moon Base) ಸ್ಥಾಪಿಸುವ ಉದ್ದೇಶ ಹೊಂದಿದೆ. ರೋಬೋಟಿಕ್ ರೋವರ್‌ಗಳು ಮತ್ತು ಡ್ರೋನ್‌ಗಳ ಸಹಾಯದಿಂದ ಚಂದ್ರನನ್ನು ಮಂಗಳ ಗ್ರಹದ ಪಯಣಕ್ಕೆ ಪೂರಕವಾದ ನಿಲ್ದಾಣವನ್ನಾಗಿ ಮಾಡುವ ಗುರಿ ನಾಸಾದ್ದಾಗಿದೆ. ಗಗನಯಾತ್ರಿ ವಿಕ್ಟರ್ ಗ್ಲೋವರ್ ಹೇಳುವಂತೆ, "ಇದು ಇಡೀ ಮಾನವ ಕುಲದ ಇತಿಹಾಸ."

Read More
Next Story