ಐಸಿಇ ಅಧಿಕಾರಿಯಿಂದ ಮಹಿಳೆಯ ಶೂಟೌಟ್- ಟ್ರಂಪ್ ವಿರುದ್ಧ ತಿರುಗಿಬಿದ್ದ ಮಿನ್ನೇಸೋಟ ಗವರ್ನರ್‌!
x
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಮೃತ ಮಹಿಳೆ ರಿನೀ ನಿಕೋಲ್ ಗುಡ್

ಐಸಿಇ ಅಧಿಕಾರಿಯಿಂದ ಮಹಿಳೆಯ ಶೂಟೌಟ್- ಟ್ರಂಪ್ ವಿರುದ್ಧ ತಿರುಗಿಬಿದ್ದ ಮಿನ್ನೇಸೋಟ ಗವರ್ನರ್‌!

ಮಿನಿಯಾಪೊಲಿಸ್‌ನಲ್ಲಿ 37 ವರ್ಷದ ರಿನೀ ನಿಕೋಲ್ ಗುಡ್ ಎಂಬ ಮಹಿಳೆಯನ್ನು ಐಸಿಇ ಅಧಿಕಾರಿ ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆ ಅಮೆರಿಕದಲ್ಲಿ ಭಾರಿ ಪ್ರತಿಭಟನೆಗೆ ಕಾರಣವಾಗಿದೆ.


Click the Play button to hear this message in audio format

ಅಮೆರಿಕದ ಮಿನಿಯಾಪೊಲಿಸ್‌ನಲ್ಲಿ ಇಮ್ಮಿಗ್ರೇಷನ್ ಮತ್ತು ಕಸ್ಟಮ್ಸ್ ಜಾರಿ (ICE) ಅಧಿಕಾರಿಯೊಬ್ಬರು 37 ವರ್ಷದ ರಿನೀ ನಿಕೋಲ್ ಗುಡ್ ಎಂಬ ಮಹಿಳೆಯನ್ನು ಗುಂಡಿಕ್ಕಿ ಕೊಂದ ಘಟನೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಘಟನೆಯು ಟ್ರಂಪ್ ಆಡಳಿತದ ವಲಸೆ ನೀತಿಗಳ ವಿರುದ್ಧದ ಪ್ರತಿಭಟನೆಯನ್ನು ತೀವ್ರಗೊಳಿಸಿದೆ.

ಏನಿದು ಘಟನೆ?

ಬುಧವಾರ ಮಿನಿಯಾಪೊಲಿಸ್‌ನಲ್ಲಿ ಐಸಿಇ ಅಧಿಕಾರಿಗಳು ವಲಸೆ ಜಾರಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ರಿನೀ ನಿಕೋಲ್ ಗುಡ್ ಅವರ ಮೇಲೆ ಅಧಿಕಾರಿಗಳು ಗುಂಡು ಹಾರಿಸಿದ್ದಾರೆ. ವರದಿಯ ಪ್ರಕಾರ, ಟ್ರಂಪ್ ಸರ್ಕಾರದ ಈ ಹೊಸ ಕಾರ್ಯಾಚರಣೆಯಡಿಯಲ್ಲಿ ಸಂಭವಿಸಿದ 5ನೇ ಸಾವು ಇದಾಗಿದೆ.

ಟ್ರಂಪ್ ಮತ್ತು ಜೆಡಿ ವ್ಯಾನ್ಸ್ ಸಮರ್ಥನೆ

ಇನ್ನು ಈ ಘಟನೆ ಬಗ್ಗೆ ಡೊನಾಲ್ಡ್‌ ಟ್ರಂಪ್‌ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಪ್ರತಿಕ್ರಿಯಿಸಿದ್ದಾರೆ. "ಅವಳು ಅಧಿಕಾರಿಯ ಮೇಲೆ ಕಾರು ಹರಿಸಲು ಪ್ರಯತ್ನಿಸಿದಳು, ಹಾಗಾಗಿ ಅವಳೇ ಈ ಘಟನೆಗೆ ಜವಾಬ್ದಾರಳು" ಎಂದು ಟ್ರಂಪ್ ಹೇಳಿದ್ದಾರೆ. ವೀಡಿಯೊ ದೃಶ್ಯಗಳನ್ನು ವೀಕ್ಷಿಸಿದ ನಂತರ, "ಇದು ಭಯಾನಕ ದೃಶ್ಯ, ಇದನ್ನು ನೋಡಲು ನಾನು ಇಷ್ಟಪಡುವುದಿಲ್ಲ" ಎಂದೂ ಅವರು ತಿಳಿಸಿದ್ದಾರೆ.

ಮತ್ತೊಂದೆಡೆ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ರಿನೀ ದಾರಿ ತಪ್ಪಿದ ಎಡಪಂಥೀಯಳು" ಎಂದು ಕರೆದಿದ್ದಾರೆ. ಅಧಿಕಾರಿ ತನ್ನ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾನೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ತನಿಖಾಧಿಕಾರಿಗಳು ಹೇಳೋದೇನು?

ರಿನೀ ದಿನವಿಡೀ ಅಧಿಕಾರಿಗಳನ್ನು ಹಿಂಬಾಲಿಸುತ್ತಿದ್ದರು ಮತ್ತು ತನ್ನ ಕಾರನ್ನು ಆಯುಧವಾಗಿ ಬಳಸಿ ಅಧಿಕಾರಿಗಳ ಮೇಲೆ ಹರಿಸಲು ಯತ್ನಿಸಿದರು. ಇದೊಂದು "ದೇಶೀಯ ಭಯೋತ್ಪಾದನೆ" ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕ್ರಿಸ್ಟಿ ನೋಮ್ ವಿವರಿಸಿದ್ದಾರೆ. ಫೆಡರಲ್ ಅಧಿಕಾರಿಗಳ ವಾದವನ್ನು ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್ ತಳ್ಳಿಹಾಕಿದ್ದಾರೆ. ಈ ಬಗ್ಗೆ "ಸಂಪೂರ್ಣ ಮತ್ತು ನ್ಯಾಯಸಮ್ಮತ ತನಿಖೆ" ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಮಿನಿಯಾಪೊಲಿಸ್ ನಗರ ಸಭೆಯ ಪ್ರಕಾರ, ರಿನೀ ತನ್ನ ನೆರೆಹೊರೆಯವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಹತ್ಯೆಯಾಗಿದ್ದಾರೆ. ಪೊಲೀಸ್ ಮುಖ್ಯಸ್ಥ ಬ್ರಿಯಾನ್ ಓಹರಾ ಪ್ರಕಾರ, ರಿನೀ ಕಾರು ಚಲಾಯಿಸಲು ಆರಂಭಿಸಿದ ಕ್ಷಣದಲ್ಲೇ ಈ ಗುಂಡಿನ ಚಕಮಕಿ ನಡೆದಿದೆ.

Read More
Next Story