Epstein Files Vanish from DOJ Website Hours After Release
x

ಉಕ್ರೇನ್‌ನಲ್ಲಿನ ಯುದ್ಧವನ್ನು ಕೊನೆಗೊಳಿಸಲು ಟ್ರಂಪ್ ಆಡಳಿತವು ಪ್ರಸ್ತುತ ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತಿದೆ.

ಭಾರತದ ಮೇಲಿನ ಸುಂಕ ಶೇ. 500ರಷ್ಟು ಏರಿಕೆ? ರಷ್ಯಾ ನಿರ್ಬಂಧ ಮಸೂದೆಗೆ ಟ್ರಂಪ್ ಅಸ್ತು

ಉಕ್ರೇನ್ ಮೇಲಿನ ಯುದ್ಧವನ್ನು ಅಂತ್ಯಗೊಳಿಸಲು ಟ್ರಂಪ್ ಆಡಳಿತವು ಮಾತುಕತೆ ನಡೆಸುತ್ತಿರುವಂತೆಯೇ, ಮಾಸ್ಕೋದ ಆರ್ಥಿಕ ಬೆನ್ನೆಲುಬನ್ನು ಮುರಿಯುವುದು ಈ ಕಠಿಣ ನಿರ್ಬಂಧಗಳ ಪ್ರಮುಖ ಉದ್ದೇಶವಾಗಿದೆ.


Click the Play button to hear this message in audio format

ರಷ್ಯಾದಿಂದ ತೈಲ ಮತ್ತು ಯುರೇನಿಯಂ ಖರೀದಿಸುವ ರಾಷ್ಟ್ರಗಳ ಮೇಲೆ ದ್ವಿತೀಯ ಹಂತದ ನಿರ್ಬಂಧಗಳನ್ನು ವಿಧಿಸುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದನೆ ನೀಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಭಾರತ ಮತ್ತು ಚೀನಾದಿಂದ ಆಮದಾಗುವ ವಸ್ತುಗಳ ಮೇಲಿನ ಸುಂಕವು ಶೇ. 500ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

ಅಮೆರಿಕದ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಈ ವಿಷಯವನ್ನು ಖಚಿತಪಡಿಸಿದ್ದು, ಬುಧವಾರ (ಜ.7) ಟ್ರಂಪ್ ಅವರೊಂದಿಗಿನ "ಪರಿಣಾಮಕಾರಿ" ಸಭೆಯ ನಂತರ ಅಧ್ಯಕ್ಷರು ಮಸೂದೆಗೆ ಹಸಿರು ನಿಶಾನೆ ತೋರಿದ್ದಾರೆ ಎಂದು 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರಷ್ಯಾದ ತೈಲವನ್ನು "ತಿಳಿದೂ ಖರೀದಿಸುವ" ದೇಶಗಳಿಗೆ ದಂಡ ವಿಧಿಸಲು ವಾಷಿಂಗ್ಟನ್‌ಗೆ ಅಧಿಕಾರ ನೀಡುವ ಈ ಮಸೂದೆಯು ಮುಂದಿನ ವಾರವೇ ಸೆನೆಟ್‌ನಲ್ಲಿ ಮತಕ್ಕೆ ಬರುವ ಸಾಧ್ಯತೆಯಿದೆ.

ರಷ್ಯಾದ ಆರ್ಥಿಕ ಮೂಲಕ್ಕೆ ಪೆಟ್ಟು

ಉಕ್ರೇನ್ ಮೇಲಿನ ಯುದ್ಧವನ್ನು ಅಂತ್ಯಗೊಳಿಸಲು ಟ್ರಂಪ್ ಆಡಳಿತವು ಮಾತುಕತೆ ನಡೆಸುತ್ತಿರುವಂತೆಯೇ, ಮಾಸ್ಕೋದ ಆರ್ಥಿಕ ಬೆನ್ನೆಲುಬನ್ನು ಮುರಿಯುವುದು ಈ ಕಠಿಣ ನಿರ್ಬಂಧಗಳ ಪ್ರಮುಖ ಉದ್ದೇಶವಾಗಿದೆ. ಗ್ರಹಾಂ ಮತ್ತು ಸೆನೆಟರ್ ರಿಚರ್ಡ್ ಬ್ಲೂಮೆಂತಾಲ್ ಅವರು ಸಿದ್ಧಪಡಿಸಿರುವ ಈ ಮಸೂದೆಯು, ರಷ್ಯಾದ ತೈಲ, ಅನಿಲ, ಯುರೇನಿಯಂ ಮತ್ತು ಇತರ ರಫ್ತುಗಳನ್ನು ಖರೀದಿಸುವ ದೇಶಗಳ ಮೇಲೆ ಸುಂಕ ಮತ್ತು ನಿರ್ಬಂಧ ಹೇರಲು ಅಮೆರಿಕ ಆಡಳಿತಕ್ಕೆ ಅವಕಾಶ ಕಲ್ಪಿಸುತ್ತದೆ. ರಷ್ಯಾದ ಮಿಲಿಟರಿ ಕಾರ್ಯಾಚರಣೆಗೆ ಹಣಕಾಸಿನ ನೆರವು ಸಿಗುವುದನ್ನು ತಡೆಯುವುದು ಇದರ ಹಿಂದಿನ ತಂತ್ರವಾಗಿದೆ.

ಟ್ರಂಪ್ ಮಾತುಕತೆ ತಂತ್ರ

"ಉಕ್ರೇನ್ ಶಾಂತಿಗಾಗಿ ರಿಯಾಯಿತಿಗಳನ್ನು ನೀಡುತ್ತಿದೆ, ಆದರೆ ಪುಟಿನ್ ಕೇವಲ ಮಾತನಾಡುತ್ತಾ ಅಮಾಯಕರ ಹತ್ಯೆ ಮುಂದುವರಿಸಿದ್ದಾರೆ. ಈ ಸಮಯದಲ್ಲಿ ಈ ಮಸೂದೆ ಸೂಕ್ತವಾಗಿದೆ," ಎಂದು ಸೆನೆಟರ್ ಗ್ರಹಾಂ ಹೇಳಿದ್ದಾರೆ. ಟ್ರಂಪ್ ಆಡಳಿತವು ಪ್ರಸ್ತುತ ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತಿದೆ. ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್‌ಕಾಫ್ ಮತ್ತು ಅಳಿಯ ಜ್ಯಾರೆಡ್ ಕುಶ್ನರ್ ಈ ಮಾತುಕತೆಯ ನೇತೃತ್ವ ವಹಿಸಿದ್ದಾರೆ.

ಭಾರತದ ಮೇಲೆ ಪರಿಣಾಮವೇನು?

ರಷ್ಯಾದಿಂದ ಅಗ್ಗದ ದರದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಪ್ರಮುಖ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಒಂದು ವೇಳೆ ಈ ಮಸೂದೆ ಜಾರಿಯಾದರೆ, ರಷ್ಯಾದೊಂದಿಗಿನ ವ್ಯವಹಾರವನ್ನು ಮುಂದುವರಿಸುವುದು ಭಾರತಕ್ಕೆ ಕಷ್ಟಕರವಾಗಬಹುದು ಅಥವಾ ಅಮೆರಿಕದ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳ ಮೇಲೆ ದುಬಾರಿ ಸುಂಕವನ್ನು ಎದುರಿಸಬೇಕಾಗಬಹುದು. ಈಗಾಗಲೇ ಟ್ರಂಪ್ ಅವರು ಭಾರತದ ಮೇಲಿನ ಸುಂಕಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಮತ್ತು ಮೋದಿ ಅವರು ನನ್ನ ಮೇಲೆ "ಸಂತೋಷಗೊಂಡಿಲ್ಲ" ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಮುಂದಿನ ವಾರ ಸೆನೆಟ್ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ಸಾಧ್ಯತೆಯಿದ್ದು, ಶ್ವೇತಭವನವು ಇದರಲ್ಲಿ ಕೆಲವು ಬದಲಾವಣೆಗಳನ್ನು ಬಯಸಿದ್ದರೂ, ಒಟ್ಟಾರೆ ಉದ್ದೇಶಕ್ಕೆ ಟ್ರಂಪ್ ಬೆಂಬಲ ಸೂಚಿಸಿರುವುದು ದೃಢಪಟ್ಟಿದೆ.

Read More
Next Story