ರಾಕಿಂಗ್ ಸ್ಟಾರ್ ಯಶ್ ತಾಯಿಯಿಂದ ಗಿಲ್ಲಿಗೆ ಸರ್ಪ್ರೈಸ್ ಕಾಲ್; ಏನಂದ್ರು ಪುಷ್ಪಾ?
x

ಯಶ್ ಅವರ ಇಡೀ ಕುಟುಂಬ ಗಿಲ್ಲಿ ಪರವಾಗಿ ಮತ ಚಲಾಯಿಸಿತ್ತು.

ರಾಕಿಂಗ್ ಸ್ಟಾರ್ ಯಶ್ ತಾಯಿಯಿಂದ ಗಿಲ್ಲಿಗೆ ಸರ್ಪ್ರೈಸ್ ಕಾಲ್; ಏನಂದ್ರು ಪುಷ್ಪಾ?

ಗಿಲ್ಲಿ ಅವರಿಗೆ ಕರೆ ಮಾಡಿ ಅಭಿನಂದಿಸಿದ ಅವರು, ತಾವು ಮತ್ತು ತಮ್ಮ ಇಡೀ ಕುಟುಂಬ ಪ್ರತಿದಿನ ಬಿಗ್ ಬಾಸ್ ವೀಕ್ಷಿಸುತ್ತಿದ್ದು, ಗಿಲ್ಲಿ ಅವರ ಆಟ ಇಷ್ಟವಾಗಿ ಅವರಿಗೇ ಮತ ಚಲಾಯಿಸಿದ್ದಾಗಿ ತಿಳಿಸಿದರು.


Click the Play button to hear this message in audio format

ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ ಗಿಲ್ಲಿನಟ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ಫೋನ್ ಕರೆ ಮಾಡಿ ವಿಶೇಷ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಟ್ರೋಫಿ ಗೆದ್ದ ಸಂಭ್ರಮದಲ್ಲಿ ತನ್ನೂರಿಗೆ ಭವ್ಯ ಮೆರವಣಿಗೆಯ ಮೂಲಕ ತೆರಳುತ್ತಿದ್ದ ಗಿಲ್ಲಿ ನಟನಿಗೆ ಅನಿರೀಕ್ಷಿತವಾಗಿ ಯಶ್ ಅಮ್ಮ ಕರೆ ಮಾಡಿದ್ದು, ಈ ಸಂಭಾಷಣೆ ಅಭಿಮಾನಿಗಳ ಗಮನ ಸೆಳೆದಿದೆ.

ಗಿಲ್ಲಿ ನಟನ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಪುಷ್ಪಾ ಅರುಣ್ ಕುಮಾರ್ ಅವರು, ಗಿಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಿದರು. ತಾವೂ ಕೂಡ ಬಿಗ್ ಬಾಸ್ ಕಾರ್ಯಕ್ರಮವನ್ನು ದಿನಾ ವೀಕ್ಷಿಸುತ್ತಿದ್ದು, ಗಿಲ್ಲಿ ಅವರ ಆಟ ಇಷ್ಟವಾಗಿ ತಾವೂ ಸೇರಿದಂತೆ ಮನೆಯವರೆಲ್ಲರೂ ಮತ ಚಲಾಯಿಸಿದ್ದಾಗಿ ತಿಳಿಸಿದರು. ಇದೇ ವೇಳೆ ಗಿಲ್ಲಿ ಅವರಿಗೆ ಒಂದು ಕಿವಿಮಾತನ್ನು ಹೇಳಿದ ಅವರು, "ಕರ್ನಾಟಕದ ಜನರು ನಿನ್ನ ಮೇಲೆ ಇಟ್ಟಿರುವ ಈ ಪ್ರೀತಿಯನ್ನು ಸದಾ ಹೀಗೆಯೇ ಉಳಿಸಿಕೊಂಡು ಹೋಗು, ನಿನಗೆ ಒಳ್ಳೆಯದಾಗಲಿ" ಎಂದು ಹಾರೈಸಿದರು.

ಯಶ್ ಅಮ್ಮನ ಕರೆ ಕಂಡು ಭಾವುಕರಾದ ಗಿಲ್ಲಿ ನಟ, ಅವರಿಗೆ ಧನ್ಯವಾದ ಅರ್ಪಿಸಿದರು. "ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ ಅಮ್ಮ, ನೀವು ಕರೆ ಮಾಡಿ ಮಾತನಾಡಿದ್ದು ನನಗೆ ಅತೀವ ಸಂತೋಷ ತಂದಿದೆ" ಎಂದು ವಿನಯದಿಂದ ಪ್ರತಿಕ್ರಿಯಿಸಿದರು. ಗಿಲ್ಲಿನಟ ಅವರ ಪೋಷಕರಿಗೂ ಶುಭ ಕೋರಿದ ಪುಷ್ಪಾ ಅವರು, ಮುಂದಿನ ದಿನಗಳಲ್ಲಿ ಖುದ್ದಾಗಿ ಭೇಟಿಯಾಗೋಣ ಎಂಬ ಭರವಸೆಯನ್ನೂ ನೀಡಿದರು.

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 12' ಕ್ಕೆ ಕಳೆದ ಭಾನುವಾರ ತೆರಬಿದ್ದಿದ್ದು, ಮಂಡ್ಯದ ಮಳವಳ್ಳಿ ಮೂಲದ ಗಿಲ್ಲಿ ನಟ ವಿನ್ನರ್ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಅವರಿಗೆ 50 ಲಕ್ಷ ರೂಪಾಯಿ ಹಣ ಹಾಗೂ ಕಿಚ್ಚ ಸುದೀಪ್ ಅವರು ವೈಯಕ್ತಿಕವಾಗಿ 10 ಲಕ್ಷ ರೂಪಾಯಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಬ್ರ್ಯಾಂಡ್ ನ್ಯೂ ಲಕ್ಸುರಿ ಕಾರು ಕೂಡ ಅವರಿಗೆ ದೊರೆತಿದೆ.

ಈ ಬಾರಿಯ ಫಿನಾಲೆಯಲ್ಲಿ ಗಿಲ್ಲಿ ನಟ ಅವರು ಸುಮಾರು 47 ಕೋಟಿಗೂ ಅಧಿಕ ಮತಗಳನ್ನು ಪಡೆಯುವ ಮೂಲಕ ಬಿಗ್ ಬಾಸ್ ಇತಿಹಾಸದಲ್ಲೇ ಅತಿ ಹೆಚ್ಚು ಮತಗಳನ್ನು ಪಡೆದ ಸ್ಪರ್ಧಿ ಎಂಬ ಹೊಸ ದಾಖಲೆ ಬರೆದಿದ್ದರು. ಇವರ ಗೆಲುವನ್ನು ಸಂಭ್ರಮಿಸಲು ಮಂಡ್ಯದ ಮಳವಳ್ಳಿಯಲ್ಲಿ ಭಾರಿ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು.

ಗಿಲ್ಲಿ ನಟನ ಹಿನ್ನೆಲೆ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರ ಗ್ರಾಮದ ಸಾಮಾನ್ಯ ರೈತ ಕುಟುಂಬದಿಂದ ಬಂದ ನಟರಾಜ್ (ಗಿಲ್ಲಿ ನಟ), ಐಟಿಐ ಶಿಕ್ಷಣ ಪೂರೈಸಿದವರು. ಸಿನಿಮಾ ನಿರ್ದೇಶಕನಾಗುವ ಕನಸಿನೊಂದಿಗೆ ಬೆಂಗಳೂರಿಗೆ ಬಂದ ಇವರು, ಆರಂಭದಲ್ಲಿ ಸೆಟ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದರು. ನಂತರ 'ಕಾಮಿಡಿ ಕಿಲಾಡಿಗಳು' ಸೀಸನ್ 4ರಲ್ಲಿ ರನ್ನರ್ ಅಪ್ ಆಗುವ ಮೂಲಕ ಮನೆಮಾತಾದರು. ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಡೆವಿಲ್' ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಸರಳತೆ ಮತ್ತು ಹಳ್ಳಿ ಭಾಷೆಯ ಸೊಗಡಿನಿಂದಲೇ ಜನಪ್ರಿಯರಾದ ಗಿಲ್ಲಿ ನಟ, ಬಿಗ್ ಬಾಸ್ ಮನೆಯಲ್ಲೂ ತಮ್ಮ ಹಾಸ್ಯಪ್ರಜ್ಞೆ ಮತ್ತು ಸಮಯಪ್ರಜ್ಞೆಯಿಂದ ಎಲ್ಲರ ಗಮನ ಸೆಳೆದಿದ್ದರು.

Read More
Next Story