
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಮದುವೆಯ ಭರ್ಜರಿ ಸಿದ್ಧತೆ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಉದಯಪುರ ಮದುವೆಯ ಸಿದ್ದತೆಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ದೇವರಕೊಂಡ ಮತ್ತು ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಅವರ ಬಹುಕಾಲದ ಪ್ರೇಮಕ್ಕೆ ಈಗ ಅಧಿಕೃತ ಮುದ್ರೆ ಬೀಳುವ ಸಮಯ ಹತ್ತಿರವಾಗಿದೆ. ಕಳೆದ ಕೆಲವು ವರ್ಷಗಳಿಂದ ಈ ಜೋಡಿಯ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಈ ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಭಾನುವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ಭಾವನಾತ್ಮಕ ಟಿಪ್ಪಣಿ ಹಂಚಿಕೊಂಡಿರುವ ರಶ್ಮಿಕಾ ಮತ್ತು ವಿಜಯ್, "ನಮ್ಮ ಪ್ರೀತಿಯ ಅಭಿಮಾನಿಗಳೇ, ನಾವು ಯಾವುದೇ ಯೋಜನೆ ಮಾಡುವ ಮೊದಲೇ ನೀವು ನಮಗೊಂದು ಹೆಸರಿಟ್ಟಿದ್ದಿರಿ. ನಿಮ್ಮ ಆ ಪ್ರೀತಿಯ 'ವಿರೋಷ್' ಹೆಸರಿನ ಗೌರವಾರ್ಥವಾಗಿಯೇ ನಮ್ಮ ಈ ಒಂದಾಗುವಿಕೆಗೆ 'ದಿ ವೆಡ್ಡಿಂಗ್ ಆಫ್ ವಿರೋಷ್' ಎಂದು ಹೆಸರಿಟ್ಟಿದ್ದೇವೆ" ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ರಶ್ಮಿಕಾ ಮಂದಣ್ಣ ವಿಶೇಷವಾಗಿ ವಿನ್ಯಾಸಗೊಳಿಸಿದ ಡಿನ್ನರ್ ಟೇಬಲ್ ಹಾಗೂ ಜಪಾನಿ ಶೈಲಿಯ ಮೆನುವಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಮದುವೆಗಾಗಿ ಉದಯಪುರದ ಐಷಾರಾಮಿ 'ಮೆಮೆಂಟೋಸ್ ಬೈ ಐಟಿಸಿ ಹೋಟೆಲ್' ಗೆ ಈಗಾಗಲೇ ಆಗಮಿಸಿರುವ ಜೋಡಿ, ಸಂಭ್ರಮದ ಕೆಲವು ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಪೂಲ್ ಸೈಡ್‌ನಲ್ಲಿ ವಾಲಿಬಾಲ್ ಆಡುತ್ತಿರುವ ಫೋಟೋ ಹಂಚಿಕೊಂಡಿದ್ದರೆ, ರಶ್ಮಿಕಾ ಮಂದಣ್ಣ ವಿಶೇಷವಾಗಿ ವಿನ್ಯಾಸಗೊಳಿಸಿದ ಡಿನ್ನರ್ ಟೇಬಲ್ ಹಾಗೂ ಜಪಾನಿ ಶೈಲಿಯ ಮೆನುವಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ವಿಶೇಷವಾಗಿ, ಮದುವೆಯಲ್ಲಿ ಬಳಸಿರುವ ಕರವಸ್ತ್ರಗಳ ಮೇಲೆ 'VIROSH' ಎಂದು ಎಂಬ್ರಾಯ್ಡರಿ ಮಾಡಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ.
ವಿಜಯ್ ದೇವರಕೊಂಡ ಪೂಲ್ ಸೈಡ್‌ನಲ್ಲಿ ವಾಲಿಬಾಲ್ ಆಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.
ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆ
ಕಳೆದ ವರ್ಷ ಅಕ್ಟೋಬರ್ 3ರಂದು ಹೈದರಾಬಾದ್‌ನಲ್ಲಿ ಈ ಜೋಡಿ ಕುಟುಂಬಸ್ಥರ ಸಮ್ಮುಖದಲ್ಲಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಉದಯಪುರದಲ್ಲಿ ಕೇವಲ ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಮದುವೆ ನಡೆಯಲಿದ್ದು, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ. 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಈಗ ನಿಜ ಜೀವನದಲ್ಲೂ ಒಂದಾಗುತ್ತಿದ್ದಾರೆ.

