ಬಿಗ್ ಬಾಸ್ ಕಿರೀಟ ತಪ್ಪಿದರೂ ಜನಮನ ಗೆದ್ದ ಕರಾವಳಿ ಬೆಡಗಿ: ಸಾಮಾನ್ಯ ಯೂಟ್ಯೂಬರ್ ರಕ್ಷಿತಾ ಶೆಟ್ಟಿ ರನ್ನರ್ ಅಪ್
x

ಬಿಗ್ ಬಾಸ್ ಕಿರೀಟ ತಪ್ಪಿದರೂ ಜನಮನ ಗೆದ್ದ ಕರಾವಳಿ ಬೆಡಗಿ: ಸಾಮಾನ್ಯ ಯೂಟ್ಯೂಬರ್ ರಕ್ಷಿತಾ ಶೆಟ್ಟಿ 'ರನ್ನರ್ ಅಪ್

ಯಾವುದೇ ಗಾಡ್‌ಫಾದರ್ ಇಲ್ಲದೆ, ಸಿನಿಮಾ ನಂಟಿಲ್ಲದೆ, ಕನಿಷ್ಠ ಕನ್ನಡವನ್ನೂ ಸ್ಪಷ್ಟವಾಗಿ ಮಾತನಾಡಲು ಬಾರದ ಹುಡುಗಿಯೊಬ್ಬಳು ಬಿಗ್ ಬಾಸ್‌ನಂತಹ ದೊಡ್ಡ ವೇದಿಕೆಯಲ್ಲಿ ಫಿನಾಲೆ ತಲುಪಿ 'ರನ್ನರ್ ಅಪ್' ಆಗಿರುವುದು ಸಾಮಾನ್ಯ ಮಾತಲ್ಲ.


Click the Play button to hear this message in audio format

ಟ್ರೋಫಿ ಒಬ್ಬರ ಕೈಸೇರಬಹುದು, ಆದರೆ ಗೆಲುವು ಇಬ್ಬರದ್ದು. ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಯಲ್ಲಿ ಸಂಭವಿಸಿದ್ದು ಇದೇ. ಹಾಸ್ಯ ಕಲಾವಿದ 'ಗಿಲ್ಲಿ ನಟ' ಅವರು ವಿಜೇತರ ಪಟ್ಟ ಅಲಂಕರಿಸಿರಬಹುದು, ಆದರೆ ಯಾವುದೇ ಪ್ರಭಾವಿ ಹಿನ್ನೆಲೆಯಿಲ್ಲದೆ, ಸಾಮಾನ್ಯ ಯೂಟ್ಯೂಬರ್ ಆಗಿ ಬಂದು ಇಂದು ಇಡೀ ಕರ್ನಾಟಕವೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ಕರಾವಳಿಯ ಪ್ರತಿಭೆ ರಕ್ಷಿತಾ ಶೆಟ್ಟಿ ಅವರದ್ದು ದೊಡ್ಡ ಸಾಧನೆಯೇ ಸರಿ.

ಯಾವುದೇ ಗಾಡ್‌ಫಾದರ್ ಇಲ್ಲದೆ, ಸಿನಿಮಾ ನಂಟಿಲ್ಲದೆ, ಕನಿಷ್ಠ ಕನ್ನಡವನ್ನೂ ಸ್ಪಷ್ಟವಾಗಿ ಮಾತನಾಡಲು ಬಾರದ ಹುಡುಗಿಯೊಬ್ಬಳು ಬಿಗ್ ಬಾಸ್‌ನಂತಹ ದೊಡ್ಡ ವೇದಿಕೆಯಲ್ಲಿ ಫಿನಾಲೆ ತಲುಪಿ 'ರನ್ನರ್ ಅಪ್' ಆಗಿರುವುದು ಸಾಮಾನ್ಯ ಮಾತಲ್ಲ.

ಯಾರು ಈ ರಕ್ಷಿತಾ? ಅಡುಗೆ ಮನೆಯಿಂದ ಬಿಗ್ ಬಾಸ್‌ವರೆಗೆ

ಮೂಲತಃ ಉಡುಪಿಯ ಪಡುಬಿದ್ರೆಯವರಾದ ರಕ್ಷಿತಾ ಶೆಟ್ಟಿ ಬೆಳೆದದ್ದು ಮುಂಬೈನಲ್ಲಿ. ಮನೆಯಲ್ಲಿ ತುಳು ಮಾತನಾಡುತ್ತಿದ್ದ ಇವರಿಗೆ ಕನ್ನಡ ಭಾಷೆಯ ಮೇಲೆ ಅಷ್ಟೇನೂ ಹಿಡಿತವಿರಲಿಲ್ಲ. ತಮಗೆ ತೋಚಿದಂತೆ ಅಡುಗೆ ವಿಡಿಯೋಗಳನ್ನು ಮಾಡುತ್ತಾ, ರೀಲ್ಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಣ್ಣ ಮಟ್ಟದ ಮಾನ್ಯತೆ ಪಡೆದಿದ್ದ ಸಾಮಾನ್ಯ ಹುಡುಗಿ ಇವರು. ಸ್ಟಾರ್‌ಗಳ ಅಬ್ಬರದ ನಡುವೆ ಒಬ್ಬ 'ಕಾಮನ್ ಮ್ಯಾನ್' (ಸಾಮಾನ್ಯ ಸ್ಪರ್ಧಿ) ಆಗಿ ಇವರು ದೊಡ್ಮನೆಗೆ ಕಾಲಿಟ್ಟಾಗ, ಇವರು ಫಿನಾಲೆ ತಲುಪುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ಸ್ಟಾರ್‌ಗಳ ಅಬ್ಬರದ ನಡುವೆ ಒಬ್ಬ 'ಕಾಮನ್ ಮ್ಯಾನ್' (ಸಾಮಾನ್ಯ ಸ್ಪರ್ಧಿ) ಆಗಿ ರಕ್ಷಿತಾ ದೊಡ್ಮನೆಗೆ ಕಾಲಿಟ್ಟಾಗ, ಇವರು ಫಿನಾಲೆ ತಲುಪುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ಅವಮಾನಗಳನ್ನೇ ಮೆಟ್ಟಿಲು ಮಾಡಿಕೊಂಡ ಛಲಗಾತಿ

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಅವರ ಪಯಣ ಹೂವಿನ ಹಾದಿಯಾಗಿರಲಿಲ್ಲ. ಅದು ಮುಳ್ಳಿನ ಹಾಸಿಗೆಯಾಗಿತ್ತು: ಮನೆಗೆ ಕಾಲಿಟ್ಟ ಮೊದಲ ದಿನವೇ ಎವಿಕ್ಟ್ (ಮನೆಯಿಂದ ಹೊರಕ್ಕೆ) ಆಗಿದ್ದ ರಕ್ಷಿತಾ, ಛಲ ಬಿಡದೆ ಮತ್ತೆ ವೈಲ್ಡ್ ಕಾರ್ಡ್ ಅಥವಾ ವಿಶೇಷ ಪ್ರವೇಶದ ಮೂಲಕ ಒಳಬಂದರು. ಮನೆಯಲ್ಲಿದ್ದ ಘಟಾನುಘಟಿ ಸ್ಪರ್ಧಿಗಳು ರಕ್ಷಿತಾ ಅವರ ಬಣ್ಣದ ಬಗ್ಗೆ, ಅವರು ಧರಿಸುವ ಬಟ್ಟೆಯ ಬಗ್ಗೆ ಕೀಳಾಗಿ ಮಾತನಾಡಿದ್ದರು. 'ಸ್ಲಂ' ಎಂಬ ಪದ ಬಳಸಿ ನಿಂದಿಸಲಾಗಿತ್ತು. 'ಸೆಡೆ' ಎಂದು ಕರೆದು ಹೀಯಾಳಿಸಲಾಗಿತ್ತು. ಮನೆಯ ಇತರ ಸದಸ್ಯರು ತಮ್ಮ ಕೋಪ ತೀರಿಸಿಕೊಳ್ಳಲು, ಫುಟೇಜ್ ಪಡೆಯಲು ಜಗಳ ತೆಗೆಯಲು ರಕ್ಷಿತಾ ಅವರನ್ನು ಒಂದು 'ಪಂಚಿಂಗ್ ಬ್ಯಾಗ್'ನಂತೆ ಬಳಸಿಕೊಂಡರು. ಅವರನ್ನು ಮನೆಯ ಕೆಲಸದ ಆಾಳಿನಂತೆ ನೋಡಲಾಗಿತ್ತು.

ಮನೆಯ ಇತರ ಸದಸ್ಯರು ತಮ್ಮ ಕೋಪ ತೀರಿಸಿಕೊಳ್ಳಲು, ಫುಟೇಜ್ ಪಡೆಯಲು ಜಗಳ ತೆಗೆಯಲು ರಕ್ಷಿತಾ ಅವರನ್ನು ಒಂದು 'ಪಂಚಿಂಗ್ ಬ್ಯಾಗ್'ನಂತೆ ಬಳಸಿಕೊಂಡಿದ್ದರು.

ಈ ಎಲ್ಲ ಅವಮಾನಗಳನ್ನು ರಕ್ಷಿತಾ ಎದುರಿಸಿದ ರೀತಿ ಅದ್ಭುತವಾಗಿತ್ತು. ಅವರು ಅತ್ತರು, ನೊಂದರು, ಆದರೆ ಸೋಲಲಿಲ್ಲ. ತಮ್ಮ ಮುಗ್ಧತೆ ಮತ್ತು ನೇರ ನುಡಿಗಳ ಮೂಲಕವೇ ಟೀಕಾಕಾರರಿಗೆ ಉತ್ತರ ನೀಡಿದರು.

'ಪಟ ಪಟ ಪಟಾಕಿ'ಯ ಮುಗ್ಧತೆಗೆ ಮರುಳಾದ ಕರುನಾಡು

ರಕ್ಷಿತಾ ಶೆಟ್ಟಿ ಅವರಿಗೆ ತಂತ್ರಗಾರಿಕೆ (Strategy) ಗೊತ್ತಿರಲಿಲ್ಲ. ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಸ್ವಭಾವ ಅವರದ್ದು. ಅವರ ಈ 'ಪಟ ಪಟ' ಮಾತನಾಡುವ ಶೈಲಿ ಮತ್ತು ಮುಗ್ಧತೆ ಪ್ರೇಕ್ಷಕರಿಗೆ ಇಷ್ಟವಾಯಿತು. ಮನೆಯ ಒಳಗಿದ್ದವರು ಅವರನ್ನು ಎಷ್ಟೇ ತುಳಿಯಲು ನೋಡಿದರೂ, ಹೊರಗಿನ ಪ್ರೇಕ್ಷಕರು ಅವರನ್ನು ಎತ್ತಿ ಹಿಡಿದರು. "ನನಗೆ ಕನ್ನಡ ಸರಿಯಾಗಿ ಬರುವುದಿಲ್ಲ, ಆದರೆ ಅರ್ಥವಾಗುತ್ತದೆ" ಎಂದು ಹೇಳುತ್ತಲೇ ಅವರು ಕನ್ನಡಿಗರ ಮನೆ ಮಗಳಾದರು.

"ನನಗೆ ಕನ್ನಡ ಸರಿಯಾಗಿ ಬರುವುದಿಲ್ಲ, ಆದರೆ ಅರ್ಥವಾಗುತ್ತದೆ" ಎಂದು ಹೇಳುತ್ತಲೇ ರಕ್ಷಿತಾ ಕನ್ನಡಿಗರ ಮನೆ ಮಗಳಾದರು.

ಘಟಾನುಘಟಿಗಳನ್ನು ಹಿಂದಿಕ್ಕಿದ ಸಾಧನೆ

ಸಿನಿಮಾ ನಟರು, ಧಾರಾವಾಹಿ ಕಲಾವಿದರು ಮತ್ತು ಸೋಶಿಯಲ್ ಮೀಡಿಯಾ ಸ್ಟಾರ್‌ಗಳ ದೊಡ್ಡ ದಂಡೇ ಈ ಬಾರಿಯ ಬಿಗ್ ಬಾಸ್‌ನಲ್ಲಿತ್ತು. ಅವರೆಲ್ಲರ ಫ್ಯಾನ್ ಫಾಲೋಯಿಂಗ್ ನಡುವೆಯೂ, ರಕ್ಷಿತಾ ಶೆಟ್ಟಿ ಅಂತಿಮ ಘಟ್ಟದವರೆಗೂ ಬಂದು ರನ್ನರ್ ಅಪ್ ಆಗಿರುವುದು ಐತಿಹಾಸಿಕ.

ಅಂತಿಮವಾಗಿ, ರಕ್ಷಿತಾ ಶೆಟ್ಟಿ ಅವರಿಗೆ ಕಿರೀಟ ಸಿಗದೇ ಇರಬಹುದು, ಆದರೆ ಅವರು ಕೋಟ್ಯಾಂತರ 'ಸಾಮಾನ್ಯ' ಕನಸುಗಳಿಗೆ ರೆಕ್ಕೆ ನೀಡಿದ್ದಾರೆ. "ಹಿನ್ನೆಲೆ ಮುಖ್ಯವಲ್ಲ, ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು" ಎಂಬುದನ್ನು ಈ ಕರಾವಳಿ ಹುಡುಗಿ ಸಾಬೀತುಪಡಿಸಿದ್ದಾರೆ. ಹೀಗಾಗಿಯೇ ಅಭಿಮಾನಿಗಳ ಪಾಲಿಗೆ ರಕ್ಷಿತಾ ಅವರೇ ರಿಯಲ್ ವಿನ್ನರ್, 'ಗೊತ್ತಾಯ್ತಲ್ಲ'!

Read More
Next Story