ಆಶಾ ಭೋಸ್ಲೆ ಅಸ್ತಂಗತ| ಲಂಡನ್ ಕನ್ಸರ್ಟ್‌ನಲ್ಲಿ ಶ್ರೇಯಾ ಘೋಷಾಲ್ ಭಾವುಕ ನಮನ
x

ಆಶಾ ಭೋಂಸ್ಲೆ ಅವರ ನಿಧನದ ಬೆನ್ನಲ್ಲೇ, ಲಂಡನ್‌ನಲ್ಲಿ ನಡೆಯುತ್ತಿದ್ದ ತಮ್ಮ ಸಂಗೀತ ಕಚೇರಿಯಲ್ಲಿ ಗಾಯಕಿ ಶ್ರೇಯಾ ಘೋಷಾಲ್ ತೀವ್ರ ಭಾವುಕರಾದರು.

ಆಶಾ ಭೋಸ್ಲೆ ಅಸ್ತಂಗತ| ಲಂಡನ್ ಕನ್ಸರ್ಟ್‌ನಲ್ಲಿ ಶ್ರೇಯಾ ಘೋಷಾಲ್ ಭಾವುಕ ನಮನ

ಖ್ಯಾತ ಗಾಯಕಿ ಆಶಾ ಭೋಂಸ್ಲೆ (92) ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿದಿದೆ. ಲಂಡನ್ ಸಂಗೀತ ಕಚೇರಿಯಲ್ಲಿ ಶ್ರೇಯಾ ಘೋಷಾಲ್ ಭಾವಪೂರ್ಣ ನಮನ ಸಲ್ಲಿಸಿದ್ದು, ಆಶಾ ಅವರ ಜನಪ್ರಿಯ ಗೀತೆ ಹಾಡಿ ಅಶ್ರುತರ್ಪಣ ನೀಡಿದ್ದಾರೆ.


Click the Play button to hear this message in audio format

ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕಿ, ಪದ್ಮವಿಭೂಷಣ ಆಶಾ ಭೋಂಸ್ಲೆ (92) ಅವರು ಅಂಗಾಂಗ ವೈಫಲ್ಯದಿಂದಾಗಿ ಭಾನುವಾರ ವಿಧಿವಶರಾಗಿದ್ದಾರೆ. ಆಶಾ ಭೋಂಸ್ಲೆ ಅವರ ನಿಧನದ ಬೆನ್ನಲ್ಲೇ, ಲಂಡನ್‌ನಲ್ಲಿ ನಡೆಯುತ್ತಿದ್ದ ತಮ್ಮ ಸಂಗೀತ ಕಚೇರಿಯಲ್ಲಿ ಗಾಯಕಿ ಶ್ರೇಯಾ ಘೋಷಾಲ್ ತೀವ್ರ ಭಾವುಕರಾದರು.

ಲಂಡನ್‌ನ 'ದಿ ಓ2' ಅರೆನಾದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಆಶಾ ತಾಯಿಗೆ ಶ್ರೇಯಾ ಶ್ರದ್ಧಾಂಜಲಿ ಸಲ್ಲಿಸಿದರು. ವೇದಿಕೆಯ ದೊಡ್ಡ ಪರದೆಯ ಮೇಲೆ ಆಶಾ ಅವರ ಚಿತ್ರಗಳನ್ನು ಪ್ರದರ್ಶಿಸುತ್ತಾ, ಅವರ ಜನಪ್ರಿಯ ಗೀತೆಗಳಾದ 'ಅಭಿ ನಾ ಜಾವೋ ಚೋಡ್ ಕರ್' ಮತ್ತು 'ದೋ ಲಫ್ಜೋನ್ ಕಿ ಹೈ ದಿಲ್ ಕಿ ಕಹಾನಿ' ಹಾಡುಗಳನ್ನು ಹಾಡಿದರು. ಈ ಸಂದರ್ಭದಲ್ಲಿ ನೆರೆದಿದ್ದ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದ್ದಲ್ಲದೆ, ಶ್ರೇಯಾ ಅವರೊಂದಿಗೆ ಧ್ವನಿಗೂಡಿಸಿ ಕಣ್ಣೀರು ಹಾಕಿದರು.

ಅವರ ಧ್ವನಿ ಎಂದಿಗೂ ಅಮರ: ಶ್ರೇಯಾ ಘೋಷಾಲ್

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಶಾ ಅವರೊಂದಿಗಿನ ಫೋಟೋ ಹಂಚಿಕೊಂಡಿರುವ ಶ್ರೇಯಾ, "ಇಂದು ಒಂದು ಯುಗ ಅಂತ್ಯವಾಗಿದೆ. ನಾವು ಕೇವಲ ಒಬ್ಬ ಗಾಯಕಿಯನ್ನು ಕಳೆದುಕೊಂಡಿಲ್ಲ, ಸಂಗೀತದ ಆತ್ಮವನ್ನು ಕಳೆದುಕೊಂಡಿದ್ದೇವೆ. ನಾನು ಅವರ ಗಾಯನವನ್ನು ಕೇಳುತ್ತಾ, ಅವರಿಂದ ಕಲಿಯುತ್ತಾ ಬೆಳೆದವಳು. ಅವರ ಗಾಯನ ಶೈಲಿ ಮತ್ತು ಜೀವನೋತ್ಸಾಹ ನಮಗೆಲ್ಲರಿಗೂ ಪ್ರೇರಣೆ. ಆಶಾ ತಾಯಿ ಅವರ ಪರಂಪರೆ ಎಂದಿಗೂ ಮರೆಯಾಗದು" ಎಂದು ಬರೆದುಕೊಂಡಿದ್ದಾರೆ.

ಗಣ್ಯರಿಂದ ಅಂತಿಮ ನಮನ

ಆಶಾ ಭೋಂಸ್ಲೆ ಅವರ ನಿಧನಕ್ಕೆ ಶಾರುಖ್ ಖಾನ್, ಅಕ್ಷಯ್ ಕುಮಾರ್, ಕಾಜೋಲ್ ಸೇರಿದಂತೆ ಬಾಲಿವುಡ್‌ನ ಖ್ಯಾತನಾಮರು ಸಂತಾಪ ಸೂಚಿಸಿದ್ದಾರೆ. ದಶಕಗಳ ಕಾಲ ಸಾವಿರಾರು ಹಾಡುಗಳ ಮೂಲಕ ರಂಜಿಸಿದ್ದ ಆಶಾ ಅವರ ನಿಧನವು ಭಾರತೀಯ ಕಲೆ ಮತ್ತು ಸಂಸ್ಕೃತಿಗೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಧಾನಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಇಂದು ಮುಂಬೈನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಲಿದೆ.

Read More
Next Story