Asha Bhosle|80 ವರ್ಷ, 20 ಭಾಷೆಗಳು... 12,000 ಹಾಡುಗಳು,  ಗಿನ್ನೆಸ್ ದಾಖಲೆ ಬರೆದ ಆಶಾ ಭೋಸ್ಲೆಗೆ ಕನ್ನಡದ ಮೇಲೆ ಅಪಾರ ಪ್ರೀತಿ
x

ಗಿನ್ನೆಸ್ ದಾಖಲೆ ಸರದಾರ ಆಶಾ ಭೋಸ್ಲೆ 20 ಭಾಷೆಗಳಲ್ಲಿ 12,000ಕ್ಕೂ ಹೆಚ್ಚು ಹಾಡು ಹಾಡಿದ್ದಾರೆ.

Asha Bhosle|80 ವರ್ಷ, 20 ಭಾಷೆಗಳು... 12,000 ಹಾಡುಗಳು, ಗಿನ್ನೆಸ್ ದಾಖಲೆ ಬರೆದ ಆಶಾ ಭೋಸ್ಲೆಗೆ ಕನ್ನಡದ ಮೇಲೆ ಅಪಾರ ಪ್ರೀತಿ

ಗಾಯನ ಕೋಗಿಲೆ ಆಶಾ ಭೋಸ್ಲೆಗೆ ಕನ್ನಡ ಭಾಷೆ ಹಾಗೂ ಸಂಸ್ಕೃತಿ ಮೇಲೆ ಅಪಾರ ಪ್ರೀತಿ, ಗೌರವವಿತ್ತು.


Click the Play button to hear this message in audio format

ಭಾರತೀಯ ಚಿತ್ರರಂಗದ ದಂತಕಥೆ, ಸಾವಿರಾರು ಸುಮಧುರ ಗೀತೆಗಳಿಗೆ ಧ್ವನಿಯಾಗಿದ್ದ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರು ಏಪ್ರಿಲ್ 12 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. 92 ವರ್ಷ ವಯಸ್ಸಿನ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬಾಲಿವುಡ್‌ನ ಸಾರ್ವಕಾಲಿಕ ಹಿಟ್ ಹಾಡುಗಳಾದ 'ಚುರಾ ಲಿಯಾ ಹೈ ತುಮ್ನೆ' ಮತ್ತು 'ಪಿಯಾ ತು ಅಬ್ ತೋ ಆಜಾ' ಅಂತಹ ಸಾವಿರಾರು ಗೀತೆಗಳ ಮೂಲಕ ಮನೆಮಾತಾಗಿದ್ದ ಆಶಾ ಅವರು, ದೇಶ ವಿದೇಶಗಳ ಸುಮಾರು 20 ಭಾಷೆಗಳಲ್ಲಿ 12,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. ತೆಲುಗು, ರಷ್ಯನ್, ಮಲಯ ಮತ್ತು ನೇಪಾಳಿ ಭಾಷೆಗಳಲ್ಲಿಯೂ ಅವರು ತಮ್ಮ ಗಾಯನ ಛಾಪನ್ನು ಮೂಡಿಸಿದ್ದರು.

ಕನ್ನಡದಲ್ಲೂ ಹಾಡಿದ್ದ ಗಾನಕೋಗಿಲೆ

ಕನ್ನಡ ಚಿತ್ರರಂಗದೊಂದಿಗೂ ಆಶಾ ಭೋಸ್ಲೆ ಅವರಿಗೆ ಅವಿನಾಭಾವ ಸಂಬಂಧವಿತ್ತು. ಸ್ಯಾಂಡಲ್‌ವುಡ್‌ನಲ್ಲಿ ಅವರು ಹಾಡಿರುವ ಬೆರಳೆಣಿಕೆಯಷ್ಟು ಹಾಡುಗಳು ಇಂದಿಗೂ ಜನಮಾನಸದಲ್ಲಿ ಹಸಿರಾಗಿವೆ. 1967ರ ಸೂಪರ್ ಹಿಟ್ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ 'ಯಾಕೋ ಏನೋ', 1973ರ ಬ್ಲಾಕ್‌ಬಸ್ಟರ್ 'ದೂರದ ಬೆಟ್ಟ' ಚಿತ್ರದ 'ಸವಾಲು ಹಾಕಿ ಸೋಲಿಸಿ ಎಲ್ಲರ' ಹಾಗೂ 2010ರಲ್ಲಿ ಶ್ರೀನಗರ ಕಿಟ್ಟಿ ನಟನೆಯ 'ಮತ್ತೆ ಮುಂಗಾರು' ಚಿತ್ರದ 'ಹೇಳದೆ ಕಾರಣ' ಹಾಡುಗಳಿಗೆ ಇವರು ಧ್ವನಿಯಾಗಿದ್ದರು. ಈ ಮೂಲಕ ಕನ್ನಡ ನಾಡಿನ ಪ್ರೇಕ್ಷಕರ ಮನ ಗೆದ್ದಿದ್ದರು.

ಅಷ್ಟೇ ಅಲ್ಲದೆ, ತೆಲುಗಿನಲ್ಲೂ ಇವರು ಸಾಕಷ್ಟು ಜನಪ್ರಿಯ ಹಾಡುಗಳನ್ನು ನೀಡಿದ್ದಾರೆ. 'ಪಲ್ಲು ನೀಲು' ಚಿತ್ರದ 'ಇದಿ ಮೌನಗೀತಂ' ಇವರ ಮೊದಲ ತೆಲುಗು ಸೂಪರ್ ಹಿಟ್ ಹಾಡಾಗಿದೆ. ನಂತರ 'ಚಂದಮಾಮ' ಚಿತ್ರದ 'ನಾಲೋ ಊಹಲಕು' ಮತ್ತು 'ಅಶ್ವಮೇಧಂ' ಚಿತ್ರದ 'ಓ ಪ್ರೇಮ' ಸೇರಿದಂತೆ ಹಲವು ಗೀತೆಗಳನ್ನು ಹಾಡಿದ್ದರು. ಇನ್ನು ಬಂಗಾಳಿ ಭಾಷೆಯ 'ಮೋಹುವಾಯ್ ಜೊಮೇಚೆ ಆಜ್ ಮೌ ಗೋ' ಮತ್ತು 'ಮೋನೆ ಪೋರೆ ರೂಬಿ ರಾಯ್' ಅವರ ವೃತ್ತಿಜೀವನದ ಮೈಲಿಗಲ್ಲುಗಳಾಗಿವೆ.

ಆಶಾ ಅವರ ಕೊನೆಯ ಆಸೆ ಏನಿದು?

ನಟಿ ಅಮೃತಾ ರಾವ್ ಮತ್ತು ಆರ್.ಜೆ. ಅನ್ಮೋಲ್ ಅವರ 'ಕಪಲ್ ಆಫ್ ಥಿಂಗ್ಸ್' ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ಆಶಾ ಅವರು ತಮ್ಮ ಕೊನೆಯ ಆಸೆಯನ್ನು ಹಂಚಿಕೊಂಡಿದ್ದರು. "ನಾನು ಹಾಡುತ್ತಲೇ ಈ ಲೋಕವನ್ನು ಬಿಡಬೇಕು ಎಂಬುದು ನನ್ನ ಇಚ್ಛೆ. ಮೂರು ವರ್ಷದ ಮಗುವಾಗಿದ್ದಾಗ ತಂದೆಯಿಂದ ಶಾಸ್ತ್ರೀಯ ಸಂಗೀತ ಕಲಿತೆ. ನನ್ನ ಇಡೀ ಜೀವನ ಸಂಗೀತಕ್ಕೇ ಮುಡಿಪು. 82 ವರ್ಷಗಳ ಸುದೀರ್ಘ ಸಿನಿ ಪಯಣದ ನಂತರವೂ, ಕೊನೆಯ ಉಸಿರು ಇರುವವರೆಗೂ ಹಾಡುತ್ತಿರಬೇಕು ಎಂಬುದೇ ನನ್ನ ದೊಡ್ಡ ಸಂತೋಷ," ಎಂದು ಅವರು ತಿಳಿಸಿದ್ದರು.

Read More
Next Story