Toxic| ಮಾರ್ಚ್ 2ಕ್ಕೆ ಮೊದಲ ಹಾಡು ರಿಲೀಸ್‌; ಪೋಸ್ಟರ್‌ ಬಿಡುಗಡೆ
x

ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಚಿತ್ರದ ಮೊದಲ ಹಾಡು ಮಾರ್ಚ್‌ 2 ರಂದು ಬಿಡುಗಡೆಯಾಗಲಿದೆ. 

Toxic| ಮಾರ್ಚ್ 2ಕ್ಕೆ ಮೊದಲ ಹಾಡು ರಿಲೀಸ್‌; ಪೋಸ್ಟರ್‌ ಬಿಡುಗಡೆ

ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ 'ಟಾಕ್ಸಿಕ್', ಮಾರ್ಚ್ 19ರಂದು ವಿಶ್ವದಾದ್ಯಂತ ತೆರೆಕಾಣಲಿದೆ.


Click the Play button to hear this message in audio format

ಸ್ಯಾಂಡಲ್‌ವುಡ್‌ನ ರಾಕಿಂಗ್‌ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಚಿತ್ರದ ಮೊದಲ ಹಾಡು 'ತಬಾಹಿ' ಬಿಡುಗಡೆಗೂ ಮುನ್ನವೇ ಸಿನಿಪ್ರಿಯರಲ್ಲಿ ಕುತೂಹಲದ ಅಲೆ ಎಬ್ಬಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಹಾಡಿನ ಪೋಸ್ಟರ್ ಯಶ್ ಮತ್ತು ಕಿಯಾರಾ ಅಡ್ವಾಣಿ ನಡುವಿನ ಕೆಮಿಸ್ಟ್ರಿಯನ್ನು ಅನಾವರಣಗೊಳಿಸಿದ್ದು, ಅಭಿಮಾನಿಗಳ ಎದಬಡಿತ ಹೆಚ್ಚಿಸಿದೆ.

ಪೋಸ್ಟರ್‌ನಲ್ಲಿ ಮಿಂಚಿದ ಜೋಡಿ

ಸಮುದ್ರದ ದಂಡೆಯ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಪೋಸ್ಟರ್‌ನಲ್ಲಿ ಯಶ್ ಮತ್ತು ಕಿಯಾರಾ ಅತ್ಯಂತ ಇಂಟೆನ್ಸ್ ಹಾಗೂ ಪ್ಯಾಶನೇಟ್ ಆಗಿ ಕಾಣಿಸಿಕೊಂಡಿದ್ದಾರೆ. ಒಂದು ಕೈಯಲ್ಲಿ ಸಿಗಾರ್ ಹಿಡಿದು, ಮತ್ತೊಂದು ಕೈಯಲ್ಲಿ ಕಿಯಾರಾರನ್ನು ಎತ್ತಿಕೊಂಡಿರುವ ಯಶ್ ಅವರ ರಗಡ್ ಲುಕ್ ಗಮನ ಸೆಳೆಯುತ್ತಿದೆ. ಕಿಯಾರಾ ಅವರ ಸಾಫ್ಟ್ ವೈಟ್ ಉಡುಗೆ ಮತ್ತು ಹಾರಾಡುವ ಕೂದಲು ಯಶ್ ಅವರ ರಫ್ ಅಂಡ್ ಟಫ್ ಲುಕ್‌ಗೆ ಅದ್ಭುತ ಕಾಂಟ್ರಾಸ್ಟ್ ನೀಡಿದೆ. ಕಿಯಾರಾ ಅವರ ಮುಖ ಪೋಸ್ಟರ್‌ನಲ್ಲಿ ಸ್ಪಷ್ಟವಾಗಿ ಕಾಣದಿದ್ದರೂ, ಇಬ್ಬರ ನಡುವಿನ ಗಾಢವಾದ ಪ್ರೇಮದ ಝಲಕ್ ಅಭಿಮಾನಿಗಳಿಗೆ ರಸದೌತಣ ನೀಡಿದೆ.

'ತಬಾಹಿ' ಹಾಡು ಮಾರ್ಚ್ 2ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಭಾವನಾತ್ಮಕ ಮತ್ತು ಚಾರ್ಟ್‌ಬಸ್ಟರ್ ಹಾಡುಗಳನ್ನು ನೀಡುವಲ್ಲಿ ಖ್ಯಾತರಾಗಿರುವ ಜನಪ್ರಿಯ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಈ ಹಾಡಿಗೆ ಧ್ವನಿ ನೀಡಿ ಸಂಗೀತ ಸಂಯೋಜಿಸಿದ್ದಾರೆ. ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ.

ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಅವರಂತಹ ದಿಗ್ಗಜ ನಟಿಯರು ಬಣ್ಣ ಹಚ್ಚಿದ್ದಾರೆ. ವಿಶೇಷವೆಂದರೆ, ಚಿತ್ರದ ಕಥೆಯನ್ನು ಸ್ವತಃ ಯಶ್ ಅವರೇ ಬರೆದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿರುವ ಈ ಸಿನಿಮಾ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೂ ಡಬ್ ಆಗಲಿದ್ದು, ಜಾಗತಿಕ ಮಟ್ಟದಲ್ಲಿ ದೊಡ್ಡ ಹವಾ ಸೃಷ್ಟಿಸಲು ಸಜ್ಜಾಗಿದೆ.

ಬಾಕ್ಸ್ ಆಫೀಸ್ ಹಣಾಹಣಿ

ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ 'ಟಾಕ್ಸಿಕ್', ಮಾರ್ಚ್ 19ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಅದೇ ದಿನ ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಚಿತ್ರ ಕೂಡ ಬಿಡುಗಡೆಯಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಎರಡು ದೊಡ್ಡ ಸಿನಿಮಾಗಳ ನಡುವೆ ನೇರ ಪೈಪೋಟಿ ಏರ್ಪಡುವುದು ಖಚಿತವಾಗಿದೆ.

Read More
Next Story