ಟಾಕ್ಸಿಕ್ ಲೋಕಕ್ಕೆ ಭೀರಾ ಎಂಟ್ರಿ: ಬಾಲಾಜಿ ಮನೋಹರ್ ರಗಡ್ ಲುಕ್ ರಿವೀಲ್
x

ಬಾಲಾಜಿ ಮನೋಹರ್ ರಗಡ್ ಲುಕ್ ಬಿಡುಗಡೆ 

'ಟಾಕ್ಸಿಕ್' ಲೋಕಕ್ಕೆ 'ಭೀರಾ' ಎಂಟ್ರಿ: ಬಾಲಾಜಿ ಮನೋಹರ್ ರಗಡ್ ಲುಕ್ ರಿವೀಲ್

ಹಿರಿಯ ನಟ ಬಾಲಾಜಿ ಮನೋಹರ್ ಟಾಕ್ಸಿಕ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪೋಸ್ಟರ್‌ನಲ್ಲಿನ ಅವರ ಗಂಭೀರ ಲುಕ್ ಚಿತ್ರದ ಗಾಂಭೀರ್ಯತೆಯನ್ನು ಹೆಚ್ಚಿಸಿದೆ.


Click the Play button to hear this message in audio format

ಖ್ಯಾತ ನಟ ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರತಂಡದಿಂದ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಅಪ್ಡೇಟ್ ಸಿಕ್ಕಿದೆ. ಟೋನಿ ಮತ್ತು ಕರ್ಮಾದಿ ಪಾತ್ರಗಳ ಪರಿಚಯದ ಬೆನ್ನಲ್ಲೇ, ಈಗ 'ಭೀರಾ' ಎಂಬ ಮತ್ತೊಂದು ಬಲಿಷ್ಠ ಪಾತ್ರವನ್ನು ಚಿತ್ರತಂಡ ಅಧಿಕೃತವಾಗಿ ಪರಿಚಯಿಸಿದೆ. ಹಿರಿಯ ನಟ ಬಾಲಾಜಿ ಮನೋಹರ್ ಈ ಚಿತ್ರದಲ್ಲಿ ಭೀರಾ ಎಂಬ ರಗಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಫಸ್ಟ್ ಲುಕ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಬಿಡುಗಡೆಯಾಗಿರುವ ಪೋಸ್ಟ್‌ರ್‌ನಲ್ಲಿ ಬಾಲಾಜಿ ಮನೋಹರ್ ಅವರು ಗಾಢ ಹಸಿರು ಮತ್ತು ಕಪ್ಪು ಬಣ್ಣದ ವಿನ್ಯಾಸವಿರುವ ಸೂಟ್ ಧರಿಸಿ, ಕೈಯಲ್ಲಿ ಸಿಗಾರ್ ಹಿಡಿದು ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಣ್ಣಿಗೆ ಹಳದಿ ಬಣ್ಣದ ಕೂಲಿಂಗ್ ಗ್ಲಾಸ್ ಹಾಗೂ ಕೈಬೆರಳುಗಳಲ್ಲಿ ಚಿನ್ನದ ಉಂಗುರಗಳನ್ನು ಧರಿಸಿರುವ ಅವರ ಈ ಪೋಷಾಕು ಚಿತ್ರದಲ್ಲಿನ ಅವರ ಪಾತ್ರದ ಗಾಂಭೀರ್ಯತೆ ಮತ್ತು ಶಕ್ತಿಯನ್ನು ಬಿಂಬಿಸುವಂತಿದೆ. ಹಿನ್ನೆಲೆಯಲ್ಲಿ ಪುಸ್ತಕದ ಕಪಾಟುಗಳಿದ್ದು, ಪಾತ್ರದ ಸುತ್ತಲಿನ ರಹಸ್ಯವನ್ನು ಹೆಚ್ಚಿಸುವಂತಿದೆ.

ಫಸ್ಟ್ ಲುಕ್ ಪೋಸ್ಟರ್ ಇಲ್ಲಿದೆ

ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು ಈಗಾಗಲೇ ತನ್ನ ಟೀಸರ್ ಮೂಲಕ ವಿಶ್ವದಾದ್ಯಂತ ಸಂಚಲನ ಮೂಡಿಸಿದೆ. ಯಶ್ ಅವರ 'ಟಿಕೆಟ್' ಎಂಬ ಹೆಸರಿನ ಕ್ಲೀನ್ ಶೇವ್ ಅವತಾರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹರಡಿವೆ. ಈ ಚಿತ್ರವು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಣಗೊಂಡಿದ್ದು, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಲಿದೆ.

ಟಾಕ್ಸಿಕ್‌ ಟೀಸರ್‌ ಇಲ್ಲಿದೆ

ತಾರಾಗಣದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಅಕ್ಷಯ್ ಒಬೆರಾಯ್ ಮತ್ತು ಸುದೇವ್ ನಾಯರ್ ಅವರಂತಹ ಘಟಾನುಘಟಿ ಕಲಾವಿದರಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿ ವೆಂಕಟ್ ಕೆ. ನಾರಾಯಣ ಹಾಗೂ ಯಶ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಬಹುನಿರೀಕ್ಷಿತ ಈ ಸಿನಿಮಾ ಮಾರ್ಚ್ 19ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

Read More
Next Story