Toxic Teaser| ಯಶ್ ಡಬಲ್ ರೋಲ್? ಕೊನೆಯ ದೃಶ್ಯದಲ್ಲಿದೆ ಸರ್ಪ್ರೈಸ್‌
x

ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಕುತೂಹಲ ಗರಿಗೆದರಿದೆ.

Toxic Teaser| ಯಶ್ ಡಬಲ್ ರೋಲ್? ಕೊನೆಯ ದೃಶ್ಯದಲ್ಲಿದೆ ಸರ್ಪ್ರೈಸ್‌

ಟಾಕ್ಸಿಕ್‌ ಟೀಸರ್‌ ಔಟ್‌|ಯಂಗ್‌ ಲುಕ್‌ನಲ್ಲಿ ಯಶ್‌ ಕಾಣಿಸಿಕೊ‍ಂಡಿದ್ದಾರೆ. ಇದರಿಂದಾಗಿ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಕುತೂಹಲ ಗರಿಗೆದರಿದೆ.


Click the Play button to hear this message in audio format

ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾದ ಎರಡನೇ ಟೀಸರ್ ಬಿಡುಗಡೆಯಾಗಿದೆ. 'ಟಾಕ್ಸಿಕ್' ಚಿತ್ರದ ಟೀಸರ್ ಇಂದು ಬೆಳಗ್ಗೆ ಸರಿಯಾಗಿ 9.35ಕ್ಕೆ ಬಿಡುಗಡೆಯಾಗಿದ್ದು, ಇಡೀ ಡಿಜಿಟಲ್ ಲೋಕದಲ್ಲಿ ಸಂಚಲನ ಮೂಡಿಸಿದೆ. ಚಿತ್ರದ ಟ್ರೇಲರ್ ಮಾರ್ಚ್ ಮೊದಲ ವಾರದಲ್ಲಿ ಬರಲಿದೆ ಎಂಬ ವದಂತಿಗಳ ನಡುವೆಯೇ, ಚಿತ್ರತಂಡ ಇಂದು ಅನಿರೀಕ್ಷಿತವಾಗಿ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದೆ.

ಹಾಲಿವುಡ್ ಮಟ್ಟದ ಮೇಕಿಂಗ್ ಹಾಗೂ ರೆಟ್ರೋ ಸ್ಪರ್ಶ

ಬಿಡುಗಡೆಯಾಗಿರುವ ಟೀಸರ್ ಅತ್ಯಂತ ಶ್ರೀಮಂತ ದೃಶ್ಯ ವೈಭವದಿಂದ ಕೂಡಿದೆ. ಕಪ್ಪು-ಬಿಳಿ ಮತ್ತು ರೆಟ್ರೋ ಶೈಲಿಯ ಈ ಟೀಸರ್‌ನಲ್ಲಿ ಯಶ್ ಅವರ 'ರಾಯ' ಎಂಬ ಪಾತ್ರವು ಅತ್ಯಂತ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದೆ. ಗನ್ ಶಾಟ್‌ಗಳು, ಅಬ್ಬರದ ಹಿನ್ನೆಲೆ ಸಂಗೀತ ಮತ್ತು ಹಾಲವುಡ್ ಸಿನಿಮಾಗಳನ್ನು ನೆನಪಿಸುವ ಮೇಕಿಂಗ್ ಪ್ರೇಕ್ಷಕರನ್ನು ಬೆರಗುಗೊಳಿಸಿದೆ. ಯಶ್ ಅವರ ಮ್ಯಾನರಿಸಂ ಮತ್ತು ಡಾರ್ಕ್ ಥೀಮ್ ಚಿತ್ರದ ಮೇಲೆ ದುಪ್ಪಟ್ಟು ಕುತೂಹಲ ಮೂಡಿಸಿದೆ. ಈ ಮೊದಲು ಬಿಡುಗಡೆಯಾಗಿದ್ದ ಟೀಸರ್‌ನಲ್ಲಿ ಹಸಿಬಿಸಿ ದೃಶ್ಯಗಳು ಟೀಕೆಗೆ ಗುರಿಯಾಗಿದ್ದವು. ಈ ಬಾರಿಯ ಟೀಸರ್‌ನಲ್ಲಿ ರಕ್ತಸಿಕ್ತ ದೃಶ್ಯಗಳು ಪ್ರೇಕರನ್ನು ನಡುಗಿಸುವಂತಿದೆ.

'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಟೀಸರ್‌ ಇಲ್ಲಿದೆ

ಸುಮಾರು 1 ನಿಮಿಷ 55 ಸೆಕೆಂಡುಗಳ ಈ ಟೀಸರ್ ಪಕ್ಕಾ ಆಕ್ಷನ್ ಪ್ಯಾಕ್ಡ್ ಆಗಿದ್ದು, ನೆಕ್ಸ್ಟ್ ಲೆವೆಲ್ ಸಾಹಸ ದೃಶ್ಯಗಳನ್ನು ಒಳಗೊಂಡಿದೆ. ಹಿಮಚ್ಛಾದಿತ ಬೆಟ್ಟಗಳ ನಡುವೆ ನಡೆಯುವ ಕಾಳಗದಿಂದ ಹಿಡಿದು ಅದ್ದೂರಿ ಡ್ಯಾನ್ಸ್ ಬಾರ್‌ಗಳವರೆಗೂ ಯಶ್ ಅಬ್ಬರ ಕಂಡುಬಂದಿದೆ. ಚಿತ್ರದ ಕಥೆಯ ಬಗ್ಗೆ ಹೆಚ್ಚೇನೂ ಸುಳಿವು ನೀಡದಿದ್ದರೂ, ಇದೊಂದು 'ಗ್ರೋನ್ ಅಪ್'ಗಳಿಗಾಗಿ ಸಿದ್ಧವಾಗಿರುವ ಡಾರ್ಕ್ ಆ್ಯಕ್ಷನ್ ಥ್ರಿಲ್ಲರ್ ಎಂಬುದು ಪಕ್ಕಾ ಆಗಿದೆ.

ಯಶ್ ಡಬಲ್ ರೋಲ್? ಕುತೂಹಲ ಮೂಡಿಸಿದ ಕೊನೆಯ ದೃಶ್ಯ

ಟೀಸರ್‌ನ ಕೊನೆಯಲ್ಲಿ ಕಾಣುವ ಒಂದು ಸಸ್ಪೆನ್ಸ್ ದೃಶ್ಯ ಈಗ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ. ಅದರಲ್ಲಿ ಒಬ್ಬ ವ್ಯಕ್ತಿ ತುಂಬಾ ಕ್ರೂರವಾಗಿ ತರಬೇತಿ ಪಡೆಯುತ್ತಿರುವುದು ಕಂಡಬಂದಿದ್ದು, ಅವನ ಮುಖವನ್ನು ಪೂರ್ಣವಾಗಿ ತೋರಿಸಲಾಗಿಲ್ಲ. ಆದರೆ ಸಣ್ಣ ಗಡ್ಡ ಮತ್ತು ಹೊಸ ಲುಕ್‌ನಲ್ಲಿರುವ ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಸ್ವತಃ ಯಶ್ ಅವರೇ. ಇದರಿಂದಾಗಿ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಕುತೂಹಲ ಗರಿಗೆದರಿದೆ.

ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಕುತೂಹಲ ಗರಿಗೆದರಿದೆ.

ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಯಶ್ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಶಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ‘ಟಾಕ್ಸಿಕ್’ ದೊಡ್ಡ ಪೈಪೋಟಿಯನ್ನೇ ಎದುರಿಸಲಿದೆ. ಮಾರ್ಚ್ 19 ರಂದು ತೆರೆಕಾಣಲಿರುವ ಈ ಚಿತ್ರಕ್ಕೆ ಬಾಲಿವುಡ್‌ನ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಪೈಪೋಟಿ ನೀಡಲಿದೆ. ಈಗಾಗಲೇ ಹಲವು ಚಿತ್ರಗಳು ‘ಧುರಂಧರ್’ಗೆ ಹೆದರಿ ತಮ್ಮ ಬಿಡುಗಡೆಯ ದಿನಾಂಕ ಬದಲಾಯಿಸಿಕೊಂಡಿದ್ದರೂ, ಯಶ್ ಮಾತ್ರ ಅದೇ ದಿನಾಂಕಕ್ಕೆ ಅಖಾಡಕ್ಕಿಳಿಯಲು ಸಿದ್ಧರಾಗಿದ್ದಾರೆ.

Read More
Next Story