
ರುಕ್ಮಿಣಿ ವಸಂತ್ ಕಪ್ಪು ಬಣ್ಣದ ಶೀರ್ ಟಾಪ್ ಹಾಗೂ ಪ್ಲೆಟೆಡ್ ಸ್ಕರ್ಟ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ರುಕ್ಮಿಣಿ ವಸಂತ್ ಸ್ಟೈಲಿಶ್ ಲುಕ್‌ಗೆ ಅಭಿಮಾನಿಗಳು ಫಿದಾ
ಸ್ಯಾಂಡಲ್‌ವುಡ್ ಬ್ಯೂಟಿ ರುಕ್ಮಿಣಿ ವಸಂತ್ ಸದ್ಯ ತಮ್ಮ ಗ್ಲಾಮರಸ್ ಫೋಟೋಶೂಟ್‌ಗಳ ಮೂಲಕ ಸಖತ್ ಸೌಂಡ್ ಮಾಡುತ್ತಿದ್ದಾರೆ. ಕಪ್ಪು ಬಣ್ಣದ ಶೀರ್ ಟಾಪ್ ಹಾಗೂ ಪ್ಲೆಟೆಡ್ ಸ್ಕರ್ಟ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ನಟಿ ರುಕ್ಮಿಣಿ ವಸಂತ್ ಸದ್ಯ ತಮ್ಮ ಗ್ಲಾಮರಸ್ ಅವತಾರದ ಮೂಲಕ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಪೀಚ್ ಬಣ್ಣದ ಗೌನ್‌ನಲ್ಲಿ ಮಿಂಚಿದ್ದ ಈ ಬೆಡಗಿ, ಈಗ ಮತ್ತೊಂದು ಬೋಲ್ಡ್ ಹಾಗೂ ಕ್ಲಾಸಿ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ರುಕ್ಮಿಣಿ ವಸಂತ್ ಅವರ ಇತ್ತೀಚಿನ ಫೋಟೋಶೂಟ್‌ನಲ್ಲಿ ಅವರು ಶೀರ್ ಬ್ಲ್ಯಾಕ್ ಟಾಪ್ ಮತ್ತು ಸ್ಟೈಲಿಶ್ ಪ್ಲೆಟೆಡ್ ಸ್ಕರ್ಟ್ ಧರಿಸಿ ಮಿಂಚಿದ್ದಾರೆ. ಈ ಉಡುಪಿಗೆ ಮ್ಯಾಚ್ ಆಗುವಂತೆ ಕಪ್ಪು ಬಣ್ಣದ ನೀ-ಹೈ ಬೂಟ್ಸ್ ಧರಿಸಿದ್ದು, ಇದು ಅವರ ಲುಕ್‌ಗೆ ಮಾದಕತೆ ಹಾಗೂ ಸೌಂದರ್ಯವನ್ನು ನೀಡಿದೆ.
ಗಾಳಿಗೆ ಹರಡಿರುವ ಕೇಶರಾಶಿ ಮತ್ತು ಆತ್ಮವಿಶ್ವಾಸದ ಪೋಸ್‌ಗಳು ಈ ಫೋಟೋಗಳಿಗೆ ಮತ್ತಷ್ಟು ಮೆರುಗು ನೀಡಿವೆ. ಕೆಲವೇ ಆಭರಣಗಳೊಂದಿಗೆ ತಮ್ಮ ನೈಸರ್ಗಿಕ ಸೌಂದರ್ಯವನ್ನು ಎತ್ತಿ ಹಿಡಿದಿರುವ ರುಕ್ಮಿಣಿ ಅವರ ಈ 'ಗ್ಲಾಮ್ ಎರಾ' ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನು ವೃತ್ತಿಜೀವನದ ವಿಚಾರಕ್ಕೆ ಬಂದರೆ, ರುಕ್ಮಿಣಿ ವಸಂತ್ ಸದ್ಯ ಸಾಲು ಸಾಲು ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೂನಿಯರ್ ಎನ್‌ಟಿಆರ್ ನಟನೆಯ ಬಹುನಿರೀಕ್ಷಿತ 'ಡ್ರಾಗನ್' ಚಿತ್ರಕ್ಕೆ ಇವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇದರ ಜೊತೆಗೆ, ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದಲ್ಲೂ ರುಕ್ಮಿಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬ್ಯಾಕ್-ಟು-ಬ್ಯಾಕ್ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸುತ್ತಿರುವ ರುಕ್ಮಿಣಿ ವಸಂತ್, ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ.

