ರಾಜ್ ಬಿ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್‌ಗೆ ರಿಷಬ್ ಶೆಟ್ಟಿ ಅನ್‌ಫಾಲೋ
x

ಹೊಂಬಾಳೆ ಫಿಲ್ಮ್ಸ್ ಬೆನ್ನಲ್ಲೇ ಈಗ ಆಪ್ತ ಗೆಳೆಯ ರಾಜ್ ಬಿ. ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್ ಅವರನ್ನು ರಿಷಬ್ ಅನ್‌ಫಾಲೋ ಮಾಡಿದ್ದಾರೆ.

ರಾಜ್ ಬಿ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್‌ಗೆ ರಿಷಬ್ ಶೆಟ್ಟಿ ಅನ್‌ಫಾಲೋ

ಹೊಂಬಾಳೆ ಫಿಲ್ಮ್ಸ್ ಬೆನ್ನಲ್ಲೇ ಈಗ ಆಪ್ತ ಗೆಳೆಯ ರಾಜ್ ಬಿ. ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್ ಅವರನ್ನು ರಿಷಬ್ ಅನ್‌ಫಾಲೋ ಮಾಡಿದ್ದಾರೆ.


Click the Play button to hear this message in audio format

ಸ್ಯಾಂಡಲ್‌ವುಡ್‌ನ 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ತಮ್ಮ ಆಪ್ತ ಗೆಳೆಯ ಹಾಗೂ ನಟ ರಾಜ್ ಬಿ. ಶೆಟ್ಟಿ ಮತ್ತು 'ಕಾಂತಾರ: ಚಾಪ್ಟರ್ 1' ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಇದು ಚಿತ್ರರಂಗದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಇವರ ನಡುವೆ ಯಾವುದಾದರೂ ಮನಸ್ತಾಪ ಉಂಟಾಗಿದೆಯೇ ಅಥವಾ ಇದೊಂದು ತಾಂತ್ರಿಕ ಕಾರಣವೇ ಎಂಬ ಪ್ರಶ್ನೆಗಳು ಕಾಡುತ್ತಿವೆ.

ಕೆಲವು ದಿನಗಳ ಹಿಂದಷ್ಟೇ ರಿಷಬ್ ಶೆಟ್ಟಿ ತಮಗೆ ಜಾಗತಿಕ ಮಟ್ಟದ ಖ್ಯಾತಿ ತಂದುಕೊಟ್ಟ 'ಕಾಂತಾರ' ಚಿತ್ರದ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ್' ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದರು. ಈ ಬೆಳವಣಿಗೆಯಿಂದ ಅಭಿಮಾನಿಗಳಲ್ಲಿ ಕುತೂಹಲ ಮೂಡಿತ್ತು. ಆದರೆ ಈಗ ರಿಷಬ್ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ತಮ್ಮ ಆಪ್ತ ಗೆಳೆಯ ರಾಜ್ ಬಿ. ಶೆಟ್ಟಿ ಹಾಗೂ ಕಾಂತಾರ ಚಿತ್ರದ ನಟಿ ರುಕ್ಮಿಣಿ ವಸಂತ್ ಅವರನ್ನು ಸಹ ಅನ್‌ಫಾಲೋ ಮಾಡಿದ್ದಾರೆ.

ಕಾಂತಾರ ಚಿತ್ರದ ಭರ್ಜರಿ ಯಶಸ್ಸಿನ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ, ಯುಗಾದಿ ಹಬ್ಬದ ಸಂದರ್ಭದಲ್ಲಿ ತಮ್ಮ ಮುಂದಿನ ಚಿತ್ರದ ಬಗ್ಗೆ ಅಪ್ಡೇಟ್ ನೀಡಿದ್ದರು. ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಆಪ್ತರನ್ನು ಅನ್‌ಫಾಲೋ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ರಿಷಬ್ ಶೆಟ್ಟಿ ಅವರ ಈ ದಿಢೀರ್ ನಿರ್ಧಾರದ ಹಿಂದೆ ವೃತ್ತಿಪರ ಭಿನ್ನಾಭಿಪ್ರಾಯಗಳಿವೆಯೇ ಅಥವಾ ಇದು ಕೇವಲ ವೈಯಕ್ತಿಕ ನಿರ್ಧಾರವೇ ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ವಿಶೇಷವೆಂದರೆ, ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯನ್ನು ಅನ್‌ಫಾಲೋ ಮಾಡಿದ್ದರೂ ಸಹ, ಅದರ ಮುಖ್ಯಸ್ಥ ವಿಜಯ್ ಕಿರಗಂದೂರು ಅವರನ್ನು ರಿಷಬ್ ಇಂದಿಗೂ ಫಾಲೋ ಮಾಡುತ್ತಿದ್ದಾರೆ.

ಸದ್ಯ ರಿಷಬ್ ಶೆಟ್ಟಿ ಅವರು ಪ್ರಶಾಂತ್ ವರ್ಮಾ ನಿರ್ದೇಶನದ 'ಜೈ ಹನುಮಾನ್' ಚಿತ್ರದಲ್ಲಿ ಬಿಜಿಯಾಗಿದ್ದು, ಹೊಂಬಾಳೆ ಸಂಸ್ಥೆಯ ಜೊತೆಗಿನ ಕ್ರಿಯೇಟಿವ್ ಭಿನ್ನಾಭಿಪ್ರಾಯ ಅಥವಾ ಹೊಸ ಪ್ರಾಜೆಕ್ಟ್‌ಗಳ ಒತ್ತಡ ಈ ಅನ್‌ಫಾಲೋಗೆ ಕಾರಣವಿರಬಹುದು ಎಂದು ಸಿನಿಪ್ರಿಯರು ಅಂದಾಜಿಸುತ್ತಿದ್ದಾರೆ. ಈ ಕುರಿತು ರಿಷಬ್ ಶೆಟ್ಟಿ ಆಗಲಿ ಅಥವಾ ಸಂಬಂಧಪಟ್ಟ ಇತರ ಕಲಾವಿದರಾಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

Read More
Next Story