
ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ರಾಜ್ ಬಿ. ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ 'ರಕ್ಕಸಪುರದೊಳ್' ಬಿಡುಗಡೆಯಾಗಿದೆ.
ಖಡಕ್ ಪೊಲೀಸ್ ಅವತಾರದಲ್ಲಿ ರಾಜ್ ಬಿ ಶೆಟ್ಟಿ: 'ರಕ್ಕಸಪುರದೊಳ್' ಟ್ರೈಲರ್ ರಿಲೀಸ್
ರಾಜ್ ಬಿ. ಶೆಟ್ಟಿ ನಟನೆಯ 'ರಕ್ಕಸಪುರದೊಳ್' ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ರವಿ ಸಾರಂಗ ನಿರ್ದೇಶನದ ಈ ಕ್ರೈಮ್ ಥ್ರಿಲ್ಲರ್ ಫೆಬ್ರವರಿ 6, 2026 ರಂದು ತೆರೆಗೆ ಬರಲಿದೆ.
ನಟ ರಾಜ್ ಬಿ. ಶೆಟ್ಟಿ ಅಭಿನಯದ ಬಹುನಿರೀಕ್ಷಿತ 'ರಕ್ಕಸಪುರದೊಳ್' ಚಿತ್ರದ ಟ್ರೈಲರ್ ಗುರುವಾರ (ಜನವರಿ 29ರಂದು) ಬಿಡುಗಡೆಯಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಕುತೂಹಲ ಮೂಡಿಸಿದೆ. ಕ್ರೈಮ್ ಥ್ರಿಲ್ಲರ್ ಕತೆ ಹೊಂದಿರುವ ಈ ಸಿನಿಮಾದ ಟ್ರೈಲರ್ ರೋಚಕತೆ ಹೆಚ್ಚಿಸುವಂತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರವಿ ಸಾರಂಗ ನಿರ್ದೇಶನದ ಈ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದ ಟ್ರೈಲರ್‌ನಲ್ಲಿ ಕೊಳ್ಳೇಗಾಲದ ಹಿನ್ನೆಲೆಯಲ್ಲಿ ನಡೆಯುವ ನಿಗೂಢ ಘಟನೆಗಳು, ಮಾಟ-ಮಂತ್ರ ಹಾಗೂ ಸರಣಿ ಸಾವುಗಳ ಎಳೆಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ. ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ ಒಳ್ಳೆಯ ಹಾಗೂ ಕೆಟ್ಟ ಮುಖಗಳ ಸಂಘರ್ಷವೇ ಈ ಸಿನಿಮಾದ ಮುಖ್ಯ ಜೀವಾಳ ಎಂಬುದು ಟ್ರೈಲರ್‌ನಲ್ಲಿ ಎದ್ದು ಕಾಣುತ್ತಿದೆ.
'ರಕ್ಕಸಪುರದೊಳ್' ಚಿತ್ರದ ಟ್ರೈಲರ್ ಇಲ್ಲಿದೆ...
ಈ ಚಿತ್ರಕ್ಕೆ ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ ಮತ್ತು ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಟ್ರೈಲರ್‌ನ ತಾಂತ್ರಿಕ ಶ್ರೀಮಂತಿಕೆಯನ್ನು ಎತ್ತಿಹಿಡಿದಿದೆ. ನಟಿಯರಾದ ಸ್ವಾತಿಷ್ಟ ಕೃಷ್ಣ ಹಾಗೂ ಅರ್ಚನಾ ಕೊಟ್ಟಿಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರವು ಫೆಬ್ರವರಿ 6ರಂದು ರಾಜ್ಯಾದ್ಯಂತ ಬೆಳ್ಳಿಪರದೆಗೆ ಬರಲು ಸಜ್ಜಾಗಿದೆ.

