
'ಕಾಂತಾರ: ಚಾಪ್ಟರ್ 1'ರಲ್ಲಿ ರಿಷಬ್ ಶೆಟ್ಟಿ ಅವರು ಒಬ್ಬ ಶಕ್ತಿಯುತ ಯೋಧನಾಗಿ ಕಾಣಿಸಿಕೊಂಡಿದ್ದಾರೆ
ಮನೆಯಲ್ಲೇ ವೀಕ್ಷಿಸಿ 'ಕಾಂತಾರ ಚಾಪ್ಟರ್ 1'- ಎಲ್ಲಿ ವೀಕ್ಷಿಸಬಹುದು?
'ಕಾಂತಾರ: ಚಾಪ್ಟರ್ 1' 2022ರ ಬ್ಲಾಕ್‌ಬಸ್ಟರ್ 'ಕಾಂತಾರ' ಚಿತ್ರದ ಮುನ್ನೋಟ ಆಗಿದ್ದು, ಇದು 4ನೇ ಶತಮಾನದ ಕದಂಬರ ಕಾಲದ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದೆ.
ಭಾರತೀಯ ಚಿತ್ರರಂಗವೇ ಬೆರಗುಗಣ್ಣಿನಿಂದ ನೋಡಿದ, ಕನ್ನಡ ಚಿತ್ರರಂಗದ 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ಅಭಿನಯದ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ 'ಕಾಂತಾರ: ಚಾಪ್ಟರ್ 1' ಈಗ ನಿಮ್ಮ ಮನೆಯಲ್ಲಿ ದರ್ಶನ ನೀಡಲು ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ಈ ಸಿನಿಮಾ ವಿಶ್ವ ಕಿರುತೆರೆ ಪ್ರೀಮಿಯರ್ ಇಂದು ಸಂಜೆ 7:00 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೇವಲ ಕೆಲವೇ ದಿನಗಳಲ್ಲಿ ವಿಶ್ವದಾದ್ಯಂತ 250 ಕೋಟಿಗೂ ರೂ.ಅಧಿಕ ಕಲೆಕ್ಷನ್ ಮಾಡುವ ಮೂಲಕ 'ಕಾಂತಾರ: ಚಾಪ್ಟರ್ 1' ಕನ್ನಡದ ಅತಿಹೆಚ್ಚು ಗಳಿಕೆಯ ಸಿನಿಮಾ ಎಂಬ ಇತಿಹಾಸ ಬರೆದಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರ, ಕೇವಲ ಸಿನಿಮಾ ಮಾತ್ರವಲ್ಲದೆ ಒಂದು ಸಾಂಸ್ಕೃತಿಕ ಕ್ರಾಂತಿಯನ್ನೇ ಸೃಷ್ಟಿಸಿದೆ.
ಕಾಂತಾರ ಸಿನಿಮಾ 7:00 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಥಿಯೇಟರ್‌ಗಳಲ್ಲಿ ಸಿನಿಪ್ರೇಕ್ಷಕರ ಮನಗೆದ್ದಿದ್ದ ಈ ಸಿನಿಮಾ ಇದೀಗ ಕಿರುತೆರೆಯ ಮೂಲಕ ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ಆನಂದಿಸಬಹುದಾಗಿದೆ. 4ನೇ ಶತಮಾನದ ಕದಂಬರ ಕಾಲದ ಹಿನ್ನೆಲೆಯುಳ್ಳ ಈ ಕಥೆಯು, ಬೆರ್ಮೆ ಮತ್ತು ಮಾಯಕಾರನ ಅತೀಂದ್ರಿಯ ಲೋಕವನ್ನು ಅನಾವರಣಗೊಳಿಸಲಿದೆ.
ಕಳೆದ ವರ್ಷ ಅಕ್ಟೋಬರ್ 2ರಂದು ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಲವು ದಶಕಗಳ ದಾಖಲೆಗಳನ್ನು ಧೂಳಿಪಟ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ನೀಡಿರುವ ಅಧಿಕೃತ ಮಾಹಿತಿ ಹಾಗೂ ಚಲನಚಿತ್ರ ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಈ ಸಿನಿಮಾ ವಿಶ್ವಾದ್ಯಂತ ತೆರೆಕಂಡ ಈ ಸಿನಿಮಾ ಕೇವಲ 21 ದಿನಗಳಲ್ಲಿ 850 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಇತಿಹಾಸ ಬರೆದಿದೆ. ಈ ಮೂಲಕ 'ಕೆಜಿಎಫ್: ಚಾಪ್ಟರ್ 2' ನಂತರ ಕನ್ನಡ ಚಿತ್ರರಂಗದ ಅತಿ ಹೆಚ್ಚು ಗಳಿಕೆಯ ಎರಡನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದಾದ್ಯಂತ ಎಲ್ಲಾ ಭಾಷೆಗಳಿಂದ ಸುಮಾರು 622 ಕೋಟಿ ರೂಪಾಯಿ ನಿವ್ವಳ ಸಂಗ್ರಹವಾಗಿದ್ದರೆ, ವಿದೇಶಿ ಮಾರುಕಟ್ಟೆಯಿಂದಲೇ 110 ಕೋಟಿಗೂ ಅಧಿಕ ಹಣ ಹರಿದುಬಂದಿದೆ.
ರುಕ್ಮಿಣಿ ವಸಂತ್
ರಾಜ್ಯದಲ್ಲಿ ಸುಮಾರು 230 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಮೊದಲ ಸೋಮವಾರವೇ 15 ಕೋಟಿ ಗಳಿಸುವ ಮೂಲಕ 'ಬಾಹುಬಲಿ 2' ಚಿತ್ರದ ದಾಖಲೆಯನ್ನೂ ಇದು ಹಿಂದಿಕ್ಕಿತ್ತು. ಸುಮಾರು 125 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ, ಹೂಡಿಕೆ ಮಾಡಿದ ಹಣಕ್ಕಿಂತ ನಾಲ್ಕು ಪಟ್ಟು ಹೆಚ್ಚು ಲಾಭವನ್ನು ತಂದುಕೊಟ್ಟಿದೆ. ಬಿಡುಗಡೆಯಾದ ಮೊದಲ ವಾರದಲ್ಲೇ 500 ಕೋಟಿ ಕ್ಲಬ್ ಸೇರುವ ಮೂಲಕ ಅತಿ ವೇಗವಾಗಿ ಗಳಿಕೆ ಮಾಡಿದ ಭಾರತೀಯ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿತ್ತು.
ಸಾವಿರ ವರ್ಷಗಳ ಹಿಂದಿನ ಕಥೆ
'ಕಾಂತಾರ: ಚಾಪ್ಟರ್ 1' ಚಿತ್ರವು 2022ರಲ್ಲಿ ಬಿಡುಗಡೆಯಾಗಿ, ಕೇವಲ 15 ಕೋಟಿ ಬಜೆಟ್‌ನಲ್ಲಿ 400 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡು ಜಗತ್ತನ್ನೇ ಬೆರಗುಗೊಳಿಸಿದ್ದ 'ಕಾಂತಾರ' ಚಿತ್ರದ ಪ್ರೀಕ್ವೆಲ್ ಆಗಿದೆ. ಈ ಚಿತ್ರವು ಕದಂಬರ ಆಳ್ವಿಕೆಯ ಕಾಲಘಟ್ಟವನ್ನು ಹಿನ್ನೆಲೆಯಾಗಿಟ್ಟುಕೊಂಡು, ಕರಾವಳಿ ಕರ್ನಾಟಕದ ಕಾಡಿನ ಮಧ್ಯೆ ಇರುವ 'ಈಶ್ವರನ ಹೂದೋಟ' ಎಂಬ ನಿಗೂಢ ಸ್ಥಳದ ಕಥೆಯನ್ನು ಹೇಳುತ್ತದೆ. ರಿಷಬ್ ಶೆಟ್ಟಿ ಅವರೇ ಕಥೆ ಬರೆದು, ನಿರ್ದೇಶಿಸಿ, ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರುಕ್ಮಿಣಿ ವಸಂತ್, ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

