ಕಾಂತಾರ ಚಾಪ್ಟರ್‌-1 ಸಕ್ಸಸ್‌ ಪಾರ್ಟಿ| ಕೇಕ್ ಕತ್ತರಿಸಿ ಸಂಭ್ರಮಿಸಿದ ರಿಷಬ್ ಶೆಟ್ಟಿ ಮತ್ತು ತಂಡ.
x

ಕೇಕ್‌ ಕಟ್‌ ಮಾಡಿ ಸಕ್ಸಸ್‌ ಪಾರ್ಟಿ ಮಾಡಿದ ಕಾಂತಾರ ಸಿನಿಮಾ ತಂಡ 

ಕಾಂತಾರ ಚಾಪ್ಟರ್‌-1 ಸಕ್ಸಸ್‌ ಪಾರ್ಟಿ| ಕೇಕ್ ಕತ್ತರಿಸಿ ಸಂಭ್ರಮಿಸಿದ ರಿಷಬ್ ಶೆಟ್ಟಿ ಮತ್ತು ತಂಡ.

ಕಾಂತಾರ ಚಾಪ್ಟರ್‌-1 ಚಿತ್ರ ಬಿಡುಡಗೆಯಾಗಿ 4 ವಾರಗಳು ಕಳೆದಿದ್ದು, 5ನೇ ವಾರದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್‌ ಆಫೀಸ್‌ನಲ್ಲಿ ಕಾಂತಾರ ಚಾಪ್ಟರ್‌-1 ಸಿನಿಮಾ 1,000 ಕೋಟಿ ಕ್ಲಬ್ ಸೇರುವ ಸನಿಹದಲ್ಲಿದೆ.


Click the Play button to hear this message in audio format

ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರವಾಗಿ ಹೊರಹೊಮ್ಮಿರುವ ಮತ್ತು ದೇಶಾದ್ಯಂತ ದೊಡ್ಡ ಮಟ್ಟದ ಯಶಸ್ಸು ಕಂಡಿರುವ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಾಪ್ಟರ್‌-1 ಸಿನಿಮಾದ ಸಕ್ಸಸ್‌ ಪಾರ್ಟಿಯನ್ನು ಚಿತ್ರತಂಡವು ಅದ್ಧೂರಿಯಾಗಿ ಆಚರಿಸಿತು.

ಕಾಂತಾರ ಚಾಪ್ಟರ್‌-1 ಚಿತ್ರ ಬಿಡುಡಗೆಯಾಗಿ 4 ವಾರಗಳು ಕಳೆದಿದ್ದು, 5ನೇ ವಾರದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್‌ ಆಫೀಸ್‌ನಲ್ಲಿ ಕಾಂತಾರ ಚಾಪ್ಟರ್‌-1 ಸಿನಿಮಾ 1,000 ಕೋಟಿ ಕ್ಲಬ್ ಸೇರುವ ಸನಿಹದಲ್ಲಿದೆ.

ಈ ಹಿನ್ನೆಲೆ ಕಾಂತಾರ ಚಾಪ್ಟರ್‌-1 ನಿರ್ಮಾಣಕ್ಕೆ ಕಾರಣಿಭೂತರಾಗಿರುವ ಪ್ರತಿಯೊಬ್ಬರನ್ನೂ ಚಿತ್ರತಂಡ ಆಹ್ವಾನಿಸಿ ಪಾರ್ಟಿ ಕೊಟ್ಟಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಕ್ಸಸ್ ಪಾರ್ಟಿಯಲ್ಲಿ ನಟ ರಿಷಬ್‌ ಶೆಟ್ಟಿ , ಪತ್ನಿ ಪ್ರಗತಿ ಶೆಟ್ಟಿ, ನಟಿ ರುಕ್ಮಿಣಿ ವಸಂತ್ , ಕ್ಯಾಮೆರಾಮ್ಯಾನ್ ಅರವಿಂದ್ ಕೌಶಿಕ್, ಗುಲ್ಷನ್ ದೇವಯ್ಯ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಹೊಂಬಾಳೆ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿದ್ದರು.

ಕಾಂತಾರ ಎಂದು ಬರೆದಿರುವ ಕೇಕ್‌ ಕಟ್‌ ಮಾಡಿದೆ. ಈ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಹೊಂಬಾಳೆ ಫಿಲ್ಸ್ಮ್‌ `ಈ ಗೆಲವು ಕೇವಲ ನಮ್ಮದಲ್ಲ..ನಿಮ್ಮೆಲ್ಲರದ್ದು’ ಎಂದು ಪೋಸ್ಟ್‌ ಮಾಡಿದೆ.

ಕಾಂತಾರ ಚಾಪ್ಟರ್‌-1 ಪ್ರಯಾಣವು ಸ್ಮರಣೀಯವಾಗಿದೆ. ಈ ಗೆಲುವು ನಿಜವಾಗಿಯೂ ನಿಮಗೆ, ಪ್ರೇಕ್ಷಕರಿಗೆ ಸೇರಿದ್ದು, ನೀವು ನಮ್ಮೊಂದಿಗೆ ಒಟ್ಟಿಗೆ ನಿಂತು, ಈ ಐತಿಹಾಸಿಕ ಓಟಕ್ಕೆ ಸಹಕರಿಸಿದ್ದೀರಿ, ಇದಕ್ಕೆ ತುಂಬಾ ಕೃತಜ್ಞರಾಗಿರುತ್ತೇವೆ. ನಾವು ಮನಸ್ಫೂರ್ತಿ ಕೆಲಸ ಮಾಡಿದ್ದೇವೆ. ಆದರೆ ನಿಮ್ಮ ಅಗಾಧ ಪ್ರೀತಿಯೇ ಇದನ್ನು ಬ್ಲಾಕ್‌ಬಸ್ಟರ್‌ ಆಗಿ ಮಾಡಿ ಅದೃಷ್ಟ ಕೊಟ್ಟಿದೆ. ಈ ಚಿತ್ರವನ್ನ ದಂತಕಥೆ ಮಾಡಿದ್ದಕ್ಕಾಗಿ ಹೃದಯಪೂರ್ವಕ ಸಾಷ್ಟಾಂಗ ಧನ್ಯವಾದಗಳು ಹೊಂಬಾಳೆ ಫಿಲ್ಸ್ಮ್‌ ತಿಳಿಸಿದೆ.

Read More
Next Story