
ನನ್ನ ಊಟ ನನ್ನಿಷ್ಟ, ನಾನೊಬ್ಬ ಬಿಯರ್ ಬಾಯ್: ಬಿರಿಯಾನಿ ವಿವಾದಕ್ಕೆ ಡಾಲಿ ಧನಂಜಯ್ ಖಡಕ್ ಉತ್ತರ
ನನ್ನ ಆಹಾರ ನನ್ನ ಹಕ್ಕು. ನಾನು ಬಹಳ ಮುಗ್ಧವಾಗಿ ಗೆಳೆಯನ ಹೋಟೆಲ್‌ಗೆ ಹೋಗಿದ್ದೆ. ನನ್ನ ಊಟದ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ ಎಂದು ನಟ ಡಾಲಿ ಧನಂಜಯ್ ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ 'ಅಪ್ಪುಸ್ ಬಿರಿಯಾನಿ' ಹೋಟೆಲ್ ಉದ್ಘಾಟನೆಗೆ ತೆರಳಿದ್ದ ನಟ ಧನಂಜಯ್, ಅಲ್ಲಿ ಬಿರಿಯಾನಿ ಸೇವಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಲಿಂಗಾಯತ ಸಮುದಾಯದವರಾಗಿ ಧನಂಜಯ್ ಮಾಂಸಾಹಾರ ಸೇವಿಸಬಹುದೇ? ಎಂಬ ದೊಡ್ಡ ಮಟ್ಟದ ಚರ್ಚೆ ಮತ್ತು ಟ್ರೋಲ್ ಆರಂಭವಾಗಿತ್ತು. ಆದರೆ ಈ ಬಗ್ಗೆ ಕೊನೆಗೂ ನಟ ಮೌನ ಮುರಿದಿದ್ದಾರೆ. ನನ್ನ ಆಹಾರ ನನ್ನ ಹಕ್ಕು. ನಾನು ಬಹಳ ಮುಗ್ಧವಾಗಿ ಗೆಳೆಯನ ಹೋಟೆಲ್‌ಗೆ ಹೋಗಿದ್ದೆ. ನನ್ನ ಊಟದ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಾನು ನನ್ನ ಆಹಾರ ಪದ್ಧತಿ ಬಗ್ಗೆ ಮಾತಾಡೋಕೆ ಇಷ್ಟ ಇಲ್ಲ. ಹಾಗೆಯೇ ನಾನು ಬಹಳ ಮುಗ್ಧವಾಗಿ ನನ್ನ ಗೆಳೆಯನ ಹೋಟೆಲ್‌ಗೆ ಹೋಗಿದ್ದೆ ಜೊತೆಗೆ ಹೋಗಿ ಪ್ರೀತಿಯಿಂದ ತಿಂದು ಬಂದೆ. 10 ರಿಂದ 15 ಬಿರಿಯಾನಿ ಶಾಪ್ ಓಪನ್ ಮಾಡಿದ್ದೇನೆ. ಈ ತರ ವಿಷಯ ವೈರಲ್ ಆಗುತ್ತದೆ ಎಂದು ಗೊತ್ತಿರಲಿಲ್ಲ.ಈ ಬಗ್ಗೆ ಚರ್ಚೆ ಆಗಿದ್ದು ನೋಡಿ ಶಾಕ್ ಆಯ್ತು ಎಂದು ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಮಾಂಸ ತಿಂದ ಬಗ್ಗೆ ಮಾತ್ರವಲ್ಲದೆ ಸಮುದಾಯವನ್ನ ಎಳೆದು ತಂದಿದ್ದು, ಬೇರೆ ಆರ್ಟಿಸ್ಟ್ ಗಳ ಹೆಸರು ತಂದಿದ್ದು ನನಗೆ ಬಹಳಷ್ಟು ನೋವಾಗಿದೆ. ಹಾಗೆಯೇ ನನ್ನ ಆಹಾರ ನನ್ನ ಹಕ್ಕು. ಅಷ್ಟೇ ಅಲ್ಲದೆ ನಾನು ಆಗಾಗ ಪಾರ್ಟಿ ಮಾಡುತ್ತೇನೆ, ನಾನು ಬಿಯರ್ ಬಾಯ್.. ಸ್ಮೋಕ್ ಮಾಡ್ತಾ ಇದ್ದೆ, ಈಗ ನಿಲ್ಲಿಸಿದ್ದೀನಿ. ಜೊತೆಗೆ ನನಗೆ ಸೀ ಫುಡ್ ಬಹಳ ಇಷ್ಟ. ಅದಕ್ಕೆ ಬೇರೆ ಬೇರೆ ಆ್ಯಂಗಲ್ ಕೊಟ್ಟಿದ್ದು ಬಹಳ ಬೇಜಾರ್ ಆಯಿತು ಎಂದು ಡಾಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಚರ್ಚೆ ಶುರು ಮಾಡಿದವರಿಗೆ ನಾನು ಉತ್ತರ ಕೊಟ್ಟಂತೆ ಆಗುತ್ತದೆ. ಅದು ನನಗೆ ಇಷ್ಟ ಇಲ್ಲ.ನಾನು ಏನೇ ಮಾಡಿದರೂ ಬಹಳ ಪ್ರಶ್ನೆಗಳು ಬರುತ್ತೆ ಅದು ನನಗೆ ಬಹಳ ಖುಷಿ ಇದೆ. ನಾನೊಬ್ಬ ನಟನಾಗಿ ಬಂದು ಪ್ರೊಡಕ್ಷನ್ ಶುರು ಮಾಡಿದ್ದೀನಿ, ನಾನು ಸಿನಿಮಾಕ್ಕಾಗಿ ಒದ್ದಾಡುತ್ತಿದ್ದೀನಿ ಅದರ ಬಗ್ಗೆ ಯಾಕೆ ಚರ್ಚೆ ಆಗುತ್ತಿಲ್ಲ ಗೊತ್ತಿಲ್ಲ ಎಂದು ಡಾಲಿ ಮಾತನಾಡಿದ್ದಾರೆ.
ನಾನು ಇಂಡಸ್ಟ್ರಿಗಾಗಿ ಮಾಡೋ ಕೆಲಸದ ಬಗ್ಗೆ ಚರ್ಚೆ ಆಗಬೇಕು ಅನ್ನೋದು ನನ್ನ ಆಸೆ. ಬಡವರ ಮಕ್ಕಳು ಬೆಳೀಬೇಕು ಅನ್ನೋದನ್ನ ಅವರವರ ಅರ್ಥಕ್ಕೆ ಬದಲಾಯಿಸಿ ಮಾತನಾಡಿದ್ದಾರೆ. ಜೊತೆಗೆ ಸಂಬಂಧಗಳನ್ನ ಸೆಲೆಬ್ರೇಶನ್ ಮಾಡೋಣ ಅನ್ನುವುದನ್ನು ನಾನು ಎಲ್ಲಾ ಕಡೆ ಹೇಳಿದ್ದೀನಿ ಅಷ್ಟೆ. ಎಲ್ಲರೂ ಎಲ್ಲಾ ವಿಚಾರವನ್ನ ಮಾತನಾಡಬಹುದು. ಸಿನಿಮಾ ನಟರು ಅಂದರೆ ಅದನ್ನೇ ಮಾತಾಡಬೇಕು ಅಂತ ಏನಿಲ್ಲ ಅಲ್ವಾ. ನಾನು ಊಟ ಮಾಡಿದ ವಿಚಾರವನ್ನ ಕೂಡ ಮಾತನಾಡುತ್ತಾರೆ ಎಂದರೆ ಅದು ತಪ್ಪು ಅಲ್ವಾ ಎಂದು ಡಾಲಿ ಧನಂಜಯ ಹೇಳಿದ್ದಾರೆ.
ಇತ್ತೀಚಿಗೆ ನಟ ಡಾಲಿ ಧನಂಜಯ್ ಬೆಂಗಳೂರಿನಲ್ಲಿ ಅಪ್ಪು'ಸ್ ಬಿರಿಯಾನಿ ಹೋಟೆಲ್ ಉದ್ಘಾಟನೆ ಸಮಾರಂಭಕ್ಕೆ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಅಲ್ಲಿ ಅವರು ಬಿರಿಯಾನಿ ಸೇವಿಸಿದ್ದರು. ಲಿಂಗಾಯತ ಸಮುದಾಯದವರಾಗಿ ಧನಂಜಯ್ ಮಾಂಸಾಹಾರ ಸೇವಿಸುತ್ತಾರಾ? ಎಂದು ಎಲ್ಲೆಡೆ ಈ ವಿಡಿಯೋ ವೈರಲ್ ಮಾಡಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಹುಟ್ಟುಹಾಕಿತ್ತು.

