ಸ್ಯಾಂಡಲ್​ವುಡ್​ಗೆ ಡ್ರೀಮ್ ಗರ್ಲ್ ಕಂಬ್ಯಾಕ್: ಶಿವಣ್ಣ, ಡಾಲಿ ಜೊತೆ ಆಪರೇಷನ್
x

666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾದಲ್ಲಿ ಪ್ರಿಯಾಂಕಾ ಮೋಹನ್ 

ಸ್ಯಾಂಡಲ್​ವುಡ್​ಗೆ 'ಡ್ರೀಮ್ ಗರ್ಲ್' ಕಂಬ್ಯಾಕ್: ಶಿವಣ್ಣ, ಡಾಲಿ ಜೊತೆ 'ಆಪರೇಷನ್'

ಪ್ರಿಯಾಂಕಾ ಮೋಹನ್ ಅವರು 2019 ರಲ್ಲಿ 'ಒಂಥ್ ಕಥೆ ಹೆಲ್ಲಾ' ಎಂಬ ಕನ್ನಡ ಚಿತ್ರದ ಮೂಲಕ ತಮ್ಮ ನಟನಾ ಪಯಣವನ್ನು ಪ್ರಾರಂಭಿಸಿದರು.


Click the Play button to hear this message in audio format

ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಂಕಾ ಮೋಹನ್ ಆರು ವರ್ಷಗಳ ಸುದೀರ್ಘ ವಿರಾಮದ ನಂತರ ಮತ್ತೆ ತವರು ನೆಲಕ್ಕೆ ಮರಳಿದ್ದಾರೆ. 'ಸಪ್ತ ಸಾಗರದಾಚೆ ಎಲ್ಲೋ' ಖ್ಯಾತಿಯ ನಿರ್ದೇಶಕ ಹೇಮಂತ್ ಎಂ. ರಾವ್ ಅವರ ಬಹುನಿರೀಕ್ಷಿತ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ನಟ ರಾಕ್ಷಸ ಡಾಲಿ ಧನಂಜಯ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರದ ತಾರಾಗಣಕ್ಕೆ ಇದೀಗ ಪ್ರಿಯಾಂಕಾ ಮೋಹನ್ ಸೇರ್ಪಡೆಯಾಗಿದ್ದಾರೆ. ಪ್ರಿಯಾಂಕಾ ಅವರ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಚಿತ್ರತಂಡ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಇಮ್ಮಡಿಗೊಳಿಸಿದೆ.

ಆರು ವರ್ಷಗಳ ನಂತರ ತವರಿಗೆ ವಾಪಸ್

2019ರಲ್ಲಿ ತೆರೆಕಂಡ ಕನ್ನಡದ 'ಒಂದ್ ಕಥೆ ಹೇಳ್ಲಾ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದ ಪ್ರಿಯಾಂಕಾ, ನಂತರ ಪರಭಾಷಾ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರು. ತೆಲುಗು ಮತ್ತು ತಮಿಳಿನ ಸ್ಟಾರ್ ನಟರಾದ ಪವನ್ ಕಲ್ಯಾಣ್ ('ದೇ ಕಾಲ್ ಹಿಮ್ ಓಜಿ'), ನಾನಿ ('ಸರಿಪೋದಾ ಶನಿವಾರಂ'), ಧನುಷ್ ('ಕ್ಯಾಪ್ಟನ್ ಮಿಲ್ಲರ್') ಮತ್ತು ಶಿವಕಾರ್ತಿಕೇಯನ್ ('ಡಾಕ್ಟರ್') ಅವರಂತಹ ನಟರೊಂದಿಗೆ ತೆರೆ ಹಂಚಿಕೊಂಡು ದಕ್ಷಿಣ ಭಾರತದಾದ್ಯಂತ ಜನಪ್ರಿಯತೆ ಗಳಿಸಿದ್ದರು. ಇದೀಗ ಆರು ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿರುವುದು ಕನ್ನಡ ಸಿನಿಪ್ರಿಯರಿಗೆ ಹಬ್ಬದೂಟದಂತಾಗಿದೆ.

ಆಪರೇಷನ್ ಡ್ರೀಮ್ ಥಿಯೇಟರ್' ಅಪ್​ಡೇಟ್

ವೈಶಾಖ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವೈಶಾಖ್ ಜೆ. ಗೌಡ ನಿರ್ಮಿಸುತ್ತಿರುವ ಈ ಚಿತ್ರವು ಈಗಾಗಲೇ ಭರದಿಂದ ಸಾಗಿದ್ದು, ಕಳೆದ ತಿಂಗಳು ಎರಡನೇ ಹಂತದ ಚಿತ್ರೀಕರಣ ಪೂರ್ಣಗೊಳಿಸಿದೆ. ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರತಂಡ ಮತ್ತೆ ಸೆಟ್‌ಗೆ ಮರಳಲಿದ್ದು, ಮೂರನೇ ಹಂತದ ಚಿತ್ರೀಕರಣ ಆರಂಭಿಸಲಿದೆ.

ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ ನಿರ್ದೇಶನವಿದ್ದು, ಅದ್ವೈತ ಗುರುಮೂರ್ತಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವು ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ.

Read More
Next Story